Home News ಶತಾಯುಷಿ ಮತದಾರ ತುಳಜಾಬಾಯಿಗೆ ಗೌರವ

ಶತಾಯುಷಿ ಮತದಾರ ತುಳಜಾಬಾಯಿಗೆ ಗೌರವ

by vegadhut@gmail.com.
0 comments

ಆಲಮೇಲ: ದೇವಣಗಾಂವ ಗ್ರಾಮದ ಶತಾಯುಷಿ ಮತದಾರ ತುಳಜಾಬಾಯಿ ಸೇವುಸಿಂಗ್ ರಜಪುತ ಅವರಿಗೆ ತಾಲೂಕಾ ಆಡಳಿತದ ವತಿಯಿಂದ ಆಲಮೇಲ ತಹಶೀಲ್ದಾರ್ ಸುರೇಶ ಚವಲರ ಸನ್ಮಾನಿಸಿ, ಅಭಿನಂದನಾ ಪತ್ರ ನೀಡಿ ಗೌರವಿಸಿದರು.

ಹಿರಿಯರು ನಮ್ಮ ಸಮಾಜದ ಆಸ್ತಿ, ಅವರನ್ನು ಗೌರವಿಸುವ ಪೂಜಿಸುವ ಸಂಪ್ರದಾಯ ನಮ್ಮದು ಎಂದು ಆಲಮೇಲ ತಹಶೀಲ್ದಾರ್ ಸುರೇಶ ಚವಲರ ಹೇಳಿದರು.

ತಾಲೂಕಿನ ದೇವಣಗಾಂವ ಗ್ರಾಪಂ ಸಭಾಭವನದಲ್ಲಿ ಅಂತರಾಷ್ಟ್ರೀ ಯ ಹಿರಿಯ ವ್ಯಕ್ತಿಗಳ ದಿನಾಚರಣೆ ನಿಮಿತ್ಯ ಹಿರಿಯ ಮತದಾರರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಭಾಗವಾಗಿ ಹಿರಿಯರನ್ನು ವೃದ್ದಾಶ್ರಮಕ್ಕೆ ಸೇರಿಸುವ ಕಾರ್ಯ ಸದ್ದಿಲ್ಲದೇ ನಡೆಯುತ್ತಿದೆ ಇದು ನಿಲ್ಲಬೇಕು ಎಂದರು.
ಗ್ರಾಮದ ಶತಾಯುಷಿ ಮತದಾರ ತುಳಜಾಬಾಯಿ ಸೇವುಸಿಂಗ್ ರಜಪುತ ಅವರಿಗೆ ತಾಲೂಕಾ ಆಡಳಿತದ ವತಿಯಿಂದ ಸನ್ಮಾನಿಸಿ, ಅಭಿನಂದನಾ ಪತ್ರ ನೀಡಿ, ಸಿಹಿ ಹಂಚಿದರು.

banner

ಇದೇ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕಾಶಿನಾಥ ಗಂಗನಳ್ಳಿ, ತಾಪಂ ಮಾಜಿ ಸದಸ್ಯ ಶಂಕರಲಿಂಗ ಕಡ್ಲೇವಾಡ, ಗ್ರಾಪಂ ಅಧ್ಯಕ್ಷ ಬಸವರಾಜ ಹೀರಾಪುರ, ಗ್ರಾಪಂ ಸದಸ್ಯ ಸಂಗನಬಸು ಸುತಾರ, ಆರ್‌ಓ ಎಂ.ಎ.ಅತ್ತಾರ, ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ ಕಾಂಬಳೆ, ಹಣಮಂತ ಮಲ್ಲಾಡ, ದೇವೇಂದ್ರ ಕಟ್ಟಿ, ಹಣಮಂತ ರಜಪುತ, ಸುರೇಶ ರಜಪುತ, ಜಯಸಿಂಗ್ ರಜಪುತ, ಸಂಜು ರಜಪುತ, ಶಿಕ್ಷಕ ಬಿ.ಬಿ.ಸಿಂಪಿ, ಎನ್.ಎ.ನಿಂಬರ್ಗಿ, ಮಾಂತಪ್ಪ ಕರ್ಶಿ, ಮೈಬೂಬ ಕಸಾಬ ಸೇರಿದಂತೆ ಅನೇಕರು ಭಾಗವಹಿಸಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news