Home News ಉಪನೋಂದಣಾಧಿಕಾರಿ ಕಛೇರಿ ಭ್ರಷ್ಟಾಚಾರ, ಅಧೀಕಾರಿಯ ದುರ್ವರ್ತನೆ ಖಂಡಿಸಿ ಡಿ.ಎಸ್.ಎಸ್. ಪ್ರತಿಭಟನೆ

ಉಪನೋಂದಣಾಧಿಕಾರಿ ಕಛೇರಿ ಭ್ರಷ್ಟಾಚಾರ, ಅಧೀಕಾರಿಯ ದುರ್ವರ್ತನೆ ಖಂಡಿಸಿ ಡಿ.ಎಸ್.ಎಸ್. ಪ್ರತಿಭಟನೆ

by vegadhut@gmail.com.
0 comments

ಸಿಂದಗಿ: ಪಟ್ಟಣದ ಮಿನಿ ವಿಧಾನ ಸೌಧದಲ್ಲಿರುವ ಉಪನೋದಣಿ ಕಚೇರಿಯಲ್ಲಿನ ಭ್ರಷ್ಟಾಚಾರ, ಅಧಿಕಾರಿಯ ದುರ್ವರ್ತನೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಪ್ರತಿಭಟಿಸಿ ತಹಶೀಲ್ದಾರ್ ನಿಂಗಪ್ಪ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಉಪನೋಂದಣಿ ಅಧಿಕಾರಿ ಎಮ್.ಆರ್.ಪಾಟೀಲ ರೈತರನ್ನು ಸತಾಯಿಸುತ್ತಾ ಜನರಿಗೆ ಸಮಸ್ಯೆಯನ್ನು ಮಾಡುತ್ತಿದ್ದಾರೆ. ಮತ್ತು ಸರಕಾರದ ಶುಲ್ಕಕ್ಕಿಂತ ದುಪ್ಪಟ್ಟು ಹಣವನ್ನು ಬಾಂಡ್ ರೈಟರ್‌ಗಳ ಮೂಲಕ ಕಮಿಷನ್ ಪಡೆದು ಜನರನ್ನು ಯಾಮಾರಿಸುತ್ತಿದ್ದಾರೆ ಎಂದು ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ ಹೇಳಿದರು.

ನಗರದ ಉಪ-ನೋಂದಣಿ ಕಛೇರಿಯ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ತಹಶಿಲ್ದಾರ್ ಕಛೇರಿಯಲ್ಲಿ ಆಸ್ತಿಯ ಮಾಲೀಕ ಇಲ್ಲದಿದ್ದರು ಅನ್ಯದವರನ್ನು ಕೂಡಿಸಿ ಅವರ ಸಹಿ ಮತ್ತು ಪೋಟೋ ಕ್ರೂಡಿಕರಿಸಿ ಅವರ ಆಸ್ತಿಯನ್ನು ಬೇರೆಯವರಿಗೆ ನೋಂದಣಿ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಭ್ರಷ್ಟರನ್ನು ಕೂಡಲೇ ಅಮಾನತುಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು. ನೋಂದಣಿ ಕಛೇರಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಪರಭಾರೆ ಇಲ್ಲದ ಆಸ್ತಿಗಳನ್ನು ದುಡ್ಡು ಕೊಟ್ಟ ಕಾರಣಕ್ಕೆ ಪರಭಾರೆ ಮಾಡುವುದು ಮತ್ತೆ ಆಸ್ತಿಗಳು ನ್ಯಾಯಾಲಯದ ತಡೆಯಾಜ್ಞೆಯಲ್ಲಿದ್ದರೂ ಲಂಚ ಪಡೆದು ಅಂತಹ ಆಸ್ತಿಗಳ ನೋಂದಣಿ ಕಾರ್ಯ ನಿರಂತರವಾಗಿ ನಡೆದಿದೆ ಎಂದು ಆರೋಪಿಸಿದರು.


ಇದೇ ಸಂದರ್ಭದಲ್ಲಿ ದಸಂಸ ಸಂಚಾಲಕ ಪರಶುರಾಮ ಕಾಂಬಳೆ ಮಾತನಾಡಿ, ಅಧಿಕಾರಿಗಳು ಸರಿಯಾದ ಸ್ಪಂದನೆ ಮಾಡದೆ ದುರ್ವರ್ತನೆ ತೋರುತ್ತಿದ್ದಾರೆ. ತಮ್ಮ ಕಾರ್ಯಗಳಿಗಾಗಿ ಮಿನಿ ವಿಧಾನ ಸೌಧದ ಕಚೇರಿಗೆ ಅಲೆದಾಡುವ ಬಡ ಜನತೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಭ್ರಷ್ಟಾಚಾರ ಮಿತಿ ಮೀರಿದ್ದು ಈ ಬಗ್ಗೆ ಅಧಿಕಾರಿಯ ಗಮನಕ್ಕೆ ತಂದರೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಯಾರು ಹಣ ಕೊಡುವುದಿಲ್ಲ ಅಂತವರ ನೋಂದಣಿ ದಿನಾಂಕವನ್ನು ಮುಂದಕ್ಕೆ ಹಾಕುತ್ತಿರುವುದು ಸರ್ವೇ ಸಾಮಾನ್ಯವಾಗಿದೆಎಂದು ಆರೋಪಿಸಿದರು.

banner

ಇದೇ ಸಂದರ್ಭದಲ್ಲಿ ಹುಯ್ಯೋಗಿ ತಳ್ಳೊಳ್ಳಿ, ಜಿಲ್ಲಾ ಸಂ.ಸAಚಾಲಕ ರವಿ ಆಲಹಳ್ಳಿ, ಶ್ರೀಶೈಲ ಬೂದಿಹಾಳ, ಅಂಬಾದಾಸ ಬಳಂಬಗಿ, ಮಹೇಶ ಜವಳಗಿ, ಮಲಕಪ್ಪ ಸಿಂಗೆ, ರಾಜು ದೊಡಮನಿ, ಬಸವರಾಜ ತಳಕೇರಿ, ಮಂಜುನಾಥ ಕಾಂಬಳೆ, ಅಶೋಕ ಬಿಜಾಪುರ, ನೂರಅಹ್ಮದ ಅತ್ತಾರ, ಬಂಗಾರಪ್ಪ ಗೌರ, ಶಬಾನಾ ಸುಲ್ತಾನಪುರ, ಮಲ್ಲಪ್ಪ ಡೋಣೂರ, ಶ್ರೀಶೈಲ ಅಂತರಗAಗಿ, ಲಗಮು ಕಕ್ಕಳಮೇಲಿ, ಹಣಮಂತ ಯಂಟಮಾನ, ಶಿವು ಇಂಗಳಗಿ, ಅಮೀತ ಬನ್ನೆಟ್ಟಿ, ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news