Home News ಕಬ್ಬಿನ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

ಕಬ್ಬಿನ ದರ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ : ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ

by vegadhut@gmail.com.
0 comments


ವಿಜಯಪುರ : ಪ್ರಸಕ್ತ  2022-23ನೇ ಸಾಲಿನ ಕಬ್ಬು ನುರಿಸುವ ಕಾರ್ಯ ಆರಂಭವಾಗಿದ್ದು, ಸರ್ಕಾರ ನಿಗದಿಪಡಿಸಿದ ಎಫ್‌ಆರ್‌ಪಿ ದರದನ್ವಯ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಹಣ ಪಾವತಿಸಬೇಕು. ಕಬ್ಬಿನ ದರ ಹೆಚ್ಚಳಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು  ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿದ ಅವರು, ಸಕ್ಕರೆ ಕಾರ್ಖಾನೆಗಳು ನಿಗದಿತ ಅವಧಿಯೊಳಗೆ ಹಣವನ್ನು ಸಂದಾಯ ಮಾಡಬೇಕು. ಒಂದು ವೇಳೆ ವಿಳಂಬ ಮಾಡಿದರೆ,ನಿಯಮಾನುಸಾರ ಬಡ್ಡಿ ಹಣವನ್ನೂ ಸೇರಿಸಿ ಸಂದಾಯ ಮಾಡಬೇಕು ಎಂದು ಸಕ್ಕರೆ ಕಾರ್ಖಾನೆಗಳಿಗೆ  ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಬ್ಬು ಕಟಾವು ಮತ್ತು ಸಾರಿಗೆ ವೆಚ್ಚವನ್ನು ವಿವಿಧ ಸಕ್ಕರೆ ಕಾರ್ಖಾನೆಗಳು ವಿವಿಧ ದರ ಕಟಾವು ಮಾಡುತ್ತಿರುವುದರಿಂದಲೂ ಸಹ  ತಾರತಮ್ಯ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಏಕ ದರ ಜಾರಿಗೊಳಿಸಲು ರೈತರು ಬೇಡಿಕೆ ಸಲ್ಲಿಸಿದ್ದು, ಈ ಕುರಿತು ಸರ್ಕಾರದ ಹಂತದಲ್ಲಿ ನಿರ್ಧಾರವಾಗಲಿರುವುದರಿಂದ ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು.. ಎಫ್.ಆರ್.ಪಿ. ದರವನ್ನು ಸರ್ಕಾರದ ಹಂತದಲ್ಲಿ ಆಗುವುದರಿಂದ ಅದರಲ್ಲೇನಾದರೂ ಲೋಪದೋಷಗಳಿದ್ದರೆ  ಇದಕ್ಕೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡಿ, ವ್ಯತ್ಯಾಸವನ್ನು ಸರಿಪಡಿಸಲಾಗುವುದು ಎಂದು ಹೇಳಿದರು.
ಎಫ್.ಆರ್.ಪಿ. ದರವನ್ನು ಆಯಾ ಸಕ್ಕರೆ ಕಾರ್ಖಾನೆಗಳು,ಕಳೆದ ಸಾಲಿನಲ್ಲಿ ಕಬ್ಬು ನುರಿಸಿ ಉತ್ಪಾದಿಸಿದ ಸಕ್ಕರೆಯಾಧರಿಸಿ ಸರ್ಕಾರ ದರ ನಿಗದಿಗೊಳಿಸಿರುತ್ತದೆ. ಸಾಗಾಣಿಕೆ ಮತ್ತು ಕಟಾವಿಗೆ ಕಿಲೋಮೀಟರ್‌ವಾರು ದರವನ್ನು ಸರ್ಕಾರ ನಿಗದಿಪಡಿಸಿದ್ದು, ನಿಯಮಾನುಸಾರ ಈ ದರದಂತೆಯೇ ಕಾರ್ಖಾನೆಗಳು ಕಟಾವು ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಸಕ್ಕರೆ ಕಾರ್ಖಾನೆಯ ವ್ಯಾಪ್ತಿಯ ಸಮೀಪದಲ್ಲಿಯೇ ಕಬ್ಬು ಲಭ್ಯವಿದ್ದರೂ ಸಹ ಕಾರ್ಖಾನೆಯವರು ಅಂತರದಿಂದ ಕಬ್ಬನ್ನು ತರಿಸಿ, ಗರಿಷ್ಠ ಸಾಗಾಣಿಕೆ ದರ ವಿಧಿಸಿ, ಅದೇ ದರವನ್ನು ಸಮೀಪದ ರೈತರಿಗೂ ವಿಧಿಸುತ್ತಿರುವ ಕುರಿತು, ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಯವರು  ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. 30 ಕಿ.ಮೀ. ವ್ಯಾಪ್ತಿಯ ಕಬ್ಬನ್ನು ಆದ್ಯತೆ ಮೇರೆಗೆ ಕಟಾವುಗೊಳಿಸಬೇಕು. ಆಕಸ್ಮಿಕ ಬೆಂಕಿಯಿಂದ ಕಬ್ಬಿನ ಬೆಳೆಗೆ ಬೆಂಕಿ ಹತ್ತಿ ಸುಟ್ಟ ಪ್ರಸಂಗದಲ್ಲಿ ಕೂಡಲೇ ಅಂತಹ ಕಬ್ಬನ್ನು ವಿಳಂಬ ಮಾಡದೇ ಪ್ರಥಮಾದ್ಯತೆಯ ಮೇರೆಗೆ ಕಟಾವುಗೊಳಿಸಬೇಕು ಎಂದು ಹೇಳಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಎಲ್ಲ ರೈತರ ಬಳಿ ಅಂಡ್ರಾಯಿಡ್ ಮೊಬೈಲ್‌ಗಳಿದ್ದು, ಆಯಾ ರೈತರಿಗೆ ಕಾರ್ಖಾನೆಯ ಇಳುವರಿ, ಕಬ್ಬಿನ ಕಟಾವು ಮಾಡುವ ದಿನಾಂಕ, ಹಣಜಮಾವಣೆ ಮಾಡಿದವಿವರ ಸೇರಿದಂತೆ ಎಲ್ಲ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಕಬ್ಬು ಮಿತ್ರ ಎನ್ನುವ ತಂತ್ರಾಂಶವನ್ನು ರಚನೆ ಮಾಡಲಾಗಿದ್ದು, ಇದರ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ರಾಜ್ಯದಾದ್ಯಂತ ಈ ತಂತ್ರಾಂಶ ಅಳವಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

banner

ಈ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕ ಮಾರಿಹಾಳ ಅವರು ಮಾತನಾಡಿ, ಬಾಲಾಜಿ ಶುಗರ್ಸ್ ಮತ್ತು ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಯವರು ಈಗಾಗಲೇ ಸಭೆಗಳನ್ನು ನಡೆಸಿ, ರೈತರಿಗೆ ಇಳುವರಿ ಕುರಿತು ಮಾಹಿತಿ ನೀಡಿದ್ದು,  ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ಸಭೆಗಳನ್ನು ನಡೆಸಿ ಇಳುವರಿ ಕುರಿತು ರೈತರಿಗೆ ಮಾಹಿತಿ ನೀಡುವಂತೆ ಸೂಚಿಸಲಾಗುವುದು ಎಂದು ಹೇಳಿದರು.
ಜಿಲ್ಲೆಯ ಎಲ್ಲ ಸಕ್ಕರೆ  ಕಾರ್ಖಾನೆಗಳಲ್ಲಿ  ವೇಬ್ರಿಡ್ಜ ಸರಿಯಾಗಿ ಕಾರ್ಯನಿರ್ವಹಿಸುತ್ತಿರುವ  ಕುರಿತು ಕಾನೂನು ಮಾಪನ ಇಲಾಖೆಯಿಂದ ಪರಿಶೀಲನೆ ನಡೆಸುವಂತೆ ಆಹಾರ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ ಸೇರಿದಂತೆ ಜಿಲ್ಲೆಯ ವಿವಿಧ ತಹಶೀಲ್ದಾರಗಳು, ರೈತ ಮುಖಂಡರುಗಳಾದ ಬಾಲಪ್ಪಗೌಡ ಲಿಂಗದಳ್ಳಿ, ಸೋಮನಗೌಡ ಕೋಳೂರ, ಚನ್ನನಗೌಡ ಪಾಟೀಲ, ಸೋಮನಗೌಡ ಪಾಟೀಲ, ಅರವಿಂದ ಕುಲಕರ್ಣಿ, ಶಿವನಗೌಡ ಕೋನಾಳ, ಶಂಕರಗೌಡ ಲಿಂಗದಳ್ಳಿ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ, ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news