
ಸಿಂದಗಿ : ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗೆ ದೊರೆಯುವ ಸಂಸ್ಕಾರಯುತ ಶಿಕ್ಷಣ ಗಟ್ಟಿಯಾಗಿ ಆತನ ಬದುಕನ್ನು ನಿರ್ಮಿಸುತ್ತದೆ ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ಅನುಗ್ರಹ ಕಲ್ಯಾಣ ಮಂಟಪದಲ್ಲಿ ಭವನದಲ್ಲಿ ಶನಿವಾರ 1980-87ನೇ ಸಾಲಿನ ವಿದ್ಯಾರ್ಥಿ ಬಳಗದಿಂದ ಹಮ್ಮಿಕೊಂಡಿದ್ದ ಗುರುಭ್ಯೋ ನಮಃ ಗುರು-ಶಿಷ್ಯರ ಸಮಾಗಮ ಮತ್ತು ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕನಿಗೆ ಕಲಿಸುವ ನೀತಿ, ವಿದ್ಯಾರ್ಥಿಗೆ ಕಲಿಯುವ ರೀತಿ ಮುಖ್ಯವಾಗಿದೆ. ಸಂಸ್ಕಾರವಿಲ್ಲದ ಶಿಕ್ಷಣ ದುರ್ಬಲ ಬದುಕಿಗೆ ದಾರಿ ಮಾಡಿಕೊಡುತ್ತದೆ ಎಂದರು.
ವಿಶ್ರಾಂತ ಶಿಕ್ಷಕ ಹ.ಮ.ಪೂಜಾರ ಗುರು ವಂದನೆ ಸ್ವೀಕರಿಸಿ, ಪ್ರಾಥಮಿಕ ಹಂತದಲ್ಲಿ ಶಿಕ್ಷಣ ನೀಡುವ ಗುರುವನ್ನು ವಿದ್ಯಾರ್ಥಿಗಳು ತಮ್ಮ ಹೃದಯದ ಸಿಂಹಾಸನದಲ್ಲಿರಿಸಿ ಗೌರವಿಸುತ್ತಿರುವುದು ನನಗೆ ಸಂಭ್ರಮ ತಂದಿದೆ. ಸಮರ್ಥ ಬೋಧನೆ ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳ ಅನುಷ್ಠಾನ ಸಾಧ್ಯ. ಬದುಕಿನ ಗುರಿ ನೆನಪಿರಲಿ. ನಿಮ್ಮ ಕಷ್ಟು ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ಸುಖಃವಾಗಿ ಬಾಳಿರಿ ಎಂದು ವಿದ್ಯಾರ್ಥಿ ಬಳವನ್ನು ಹರಿಸಿದರು.
ನೂರಾರು ವಿದ್ಯಾರ್ಥಿಗಳು ಅವರ ಕುಟುಂಬದೊಂದಿಗೆ ಆಗಮಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು ಹಲವು ದಿನಗಳಿಂದ ಬೇಟಿಯಾಗದ ವಿದ್ಯಾರ್ಥಿಗಳು ಪರಸ್ಪರ ತಬ್ಬಿಕೊಂಡು ಮಾತನಾಡುವುದು ಶಾಲಾ ಸಮಯದ ಆಟ-ತುಂಟಾಟದ ವಿಷಯಗಳ ನೆನಪು ಮಾಡುತ್ತಾ ಅತ್ಯಂತ ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗಿಯಾದರು.
ಇನ್ನೋರ್ವ ವಿಶ್ರಾಂತ ಶಿಕ್ಷಕ ಎಂ.ಎಂ. ಹೂಗಾರ ಅವರು ಮಾತನಾಡಿದರು. ಸಾನಿಧ್ಯವಹಿಸಿದ್ದ ಊರನ ಹಿರೇಮಠದ ಶಿವಾನಂದ ಶಿವಾಚಾರ್ಯರು, ಗುರುವಿನಲ್ಲಿ ನೀತಿಯ ಹೊರತು ಜಾತಿ ಇಲ್ಲ. ಪ್ರಾಥಮಿಕ ಶಾಲೆ ಶಿಕ್ಷಕ ತನ್ನ ಸಮರ್ಪಣಾಭಾವದಿಂದ ಶಿಷ್ಯರ ಏಳ್ಗೆಗೆ ಶ್ರಮಿಸಿ ಅವರ ಬದುಕಿಗೆ ನಿರೂಪಕರಾಗುತ್ತಾರೆ. ನಿಮಗೆಲ್ಲ ಗುರು ಕರುಣೆ ಲಭಿಸಲಿ ಎಂದು ಹೇಳಿದರು.
ವಿಶ್ರಾಂತ ಶಿಕ್ಷಕ ಎಂ.ಎ.ಚೌರ, ಬಿ.ಎನ್.ಬಿರಾದಾರ, ಎಂ.ಆರ್.ಬೆಕಿನಾಳ, ಹ.ಮ.ಪೂಜಾರ ಹಾಗೂ ಎಂ.ಎಂ.ಹೂಗಾರ ದಂಪತಿಗಳ ಸಮೇತ ಎಲ್ಲ ಗುರುಗಳನ್ನು ವಿದ್ಯಾರ್ಥಿ ಬಳಗದವರು ಸನ್ಮಾನಿಸಿ, ಗೌರವಿಸಿದರು.
ಶಿಕ್ಷಕ ಜಗದೀಶ ಸಿಂಗೆ ನಿರೂಪಿಸಿದರು. ಶಿಕ್ಷಕ ಸಂಗಮೇಶ ಮಲ್ಲೇದ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಬಳಗದ ಶ್ರೀಮತಿ ಸುವರ್ಣ ಅಲ್ಲಾಪೂರ, ಚಂದ್ರಶೇಖರ ಪೂಜಾರಿ, ಭೀಮಾಶಂಕರ ಉಪ್ಪಾರ, ಶಿಕ್ಷಕಿ ಜಯಶಶ್ರೀ ಗುಣಾರಿ, ಜಯಶ್ರೀ ಗಣಾಚಾರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಶ್ರೀಮತಿ ರಾಣಿ ವಾರದ ಹಾಗೂ ಸಂಗಡಿಗರು ಸ್ವಾಗತಗೀತೆ ಹೇಳಿದರು. ಗುರುಮಾತೆ ರೇಣುಕ ಚೌಗಲೆ ಸ್ವಾಗತಿಸಿದರು. ನೂರಾರು ವಿದ್ಯಾರ್ಥಿ ಬಳಗ ತಮ್ಮ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು.

