Home News ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪ್ರಧಾನ | ಸ್ಪರ್ಧಾತ್ಮಕ ಪರೀಕ್ಷೆ ವಿಜೇತರಿಗೆ ಬಹುಮಾನ

ಸಾವಿತ್ರಿಬಾಯಿ ಪುಲೆ ಪ್ರಶಸ್ತಿ ಪ್ರಧಾನ | ಸ್ಪರ್ಧಾತ್ಮಕ ಪರೀಕ್ಷೆ ವಿಜೇತರಿಗೆ ಬಹುಮಾನ

by vegadhut@gmail.com.
0 comments

 

ವಿಜಯಪುರ: ಸಾವಿತ್ರಿಬಾಯಿ ಫುಲೆ ಅವರು ತಾವು ಶಿಕ್ಷಣ ಪಡೆಯುವುದರ ಜೊತೆಗೆ ಮಹಿಳೆಯರೂ ಶಿಕ್ಷಣ ಪಡೆಯಬೇಕು ಎಂಬ ಹಂಬಲದಿಂದ ಎಲ್ಲ ಅಸೂಹೆ ನೋವುಗಳನ್ನು ಅನುಭವಿಸಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡಿದಂತಹ ಮಹಾನ್ ಮಾತೆ ಅಂತಹ ಮಹಾನ್ ವ್ಯಕ್ತಿತ್ವವನ್ನು ಜಗತ್ತಿಗೆ ಗುರುತಿಸುವಂತಹ ಕೆಲಸವನ್ನು ದಲಿತ್ ವಿದ್ಯಾರ್ಥಿ ಪರಿಷತ್ ಮಾಡುತ್ತಿರುವುದು ಹಮ್ಮೆಯ ವಿಷಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ ಹೇಳಿದರು.
ನಗರದ ಕಂದಗಲ್ ಹನಮಂತರಾಯ್ ರಂಗಮಂದಿರದಲ್ಲಿ ದಲಿತ್ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ 2022ನೇ ಸಾಲಿನ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಇಂದು ಶೈಕ್ಷಣಿಕವಾಗಿ ಮುಂದೆ ಬಂದಿದ್ದಾರೆ. ಅವರ ಜೀವನ ಮಟ್ಟ ಸುಧಾರಿಸಿದೆ ಎಂದಿದ್ದೇ ಆದಲ್ಲಿ ಅದಕ್ಕೆ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಅಪಾರ ಎಂದರು. ನಾವು ಬಸವಣ್ಣನ ನಾಡಿನಲ್ಲಿ ಹುಟ್ಟಿ ಬೆಳೆದಂತವರು ಸಮಜಾಕ್ಕಾಗಿ ಎನಾನ್ನದರೂ ಕೊಡುವ ಚಿಂತನೆ ಸಮಾಜ ಕಟ್ಟುವಂತಹ ಕೆಲಸವನ್ನು ಮಾಡಬೇಕು ನಾವು ಬೇಳೆಯುವುದರ ಜೊತೆಗೆ ಮತ್ತೊಬ್ಬರನ್ನು ಬೇಳೆಸಬೇಕು ಅಂತಹ ತತ್ವಗಳನ್ನು ಇಟ್ಟುಕೊಂಡು ಇಂದು ಡಿವಿಪಿ ಕೆಲಸ ಮಾಡುತ್ತಿರುವುದು ಖುಷಿಯ ವಿಚಾರ ಎಂದರು. ಎಲ್ಲರೂ ಬರೀ ಬಾಯಿ ಮಾತಲ್ಲಿ ಸಮಾನತೆ ಬಗ್ಗೆ ಮಾತನಾಡುತ್ತಾರೆ ಆದರೆ ಕೆಲಸದಲ್ಲಿ ತೋರಿಸುವುದಿಲ್ಲ ಆದರೆ ಮಹಿಳೆಯರೂ ಯಾವುದಕ್ಕೂ ಕಮ್ಮಿ ಇಲ್ಲ ಅವರೂ ಎಲ್ಲರಿಗೂ ಸಮಾನರು ಎಂದು ಇಂದು ನನ್ನ ಕೈಯಿಂದ ಉದ್ಘಾಟನೆ ಮಾಡಿಸುವ ಮೂಲಕ ಡಿವಿಪಿ ತೋರಿಸಿಕೊಟ್ಟಿದೆ ಎಂದು ಹೇಳಿದರು.

ಇನ್ನು ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಮಾತನಾಡಿ, ದಲಿತ್ ವಿದ್ಯಾರ್ಥಿ ಪರಿಷತ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಬುದ್ಧ, ಬಸವಣ್ಣ, ಅಂಬೇಡ್ಕರ ಅವರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸುವಂತಹ ಕೆಲಸ ಆಗಬೇಕಿದೆ ಅಂತಹ ಕೆಲಸವನ್ನು ಡಿವಿಪಿ ಮಾಡುತ್ತಿರುವುದು ಖುಷಿಯ ವಿಚಾರ ಎಂದರು. ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದೆ. ಸಂಘಟನೆ ಕಟ್ಟುವಲ್ಲಿ ಸಂಸ್ಥಾಪಕ ಅಧ್ಯಕ್ಷ ಶ್ರೀನಾಥ ಪೂಜಾರಿ ಅವರ ನೇತೃತ್ವದಲ್ಲಿ ಸಂಘಟನೆ ಇನ್ನಷ್ಟು ಬೆಳೆಯಲಿ ಈ ಸಂಘಟನೆಗೆ ನಾವೆಲ್ಲರೂ ಸಹಕಾರ ನೀಡುತ್ತೇವೆ ಎಂದರು.

ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿದ್ದ ಮೈಸೂರಿನ ಉರಿಲಿಂಗ ಪೆದ್ದಿಮಠ ಸ್ವಾಮೀಜಿ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರು ಮಾತನಾಡಿ, ನೆನಪುಗಳಿಲ್ಲದೇ ಕನಸುಗಳನ್ನು ಕಟ್ಟಲು ಸಾಧ್ಯವಿಲ್ಲ ಎಂದು ಬಾಬಾ ಸಾಹೇಬ ಅಂಬೇಡ್ಕರ್ ಹೇಳಿದ್ದಾರೆ. ಅಂತಹ ಇತಿಹಾಸವನ್ನು ಜನರಿಗೆ ತಿಳಿಸುವ ಮೂಲಕ ಡಿವಿಪಿ ಇಂದು ಮಹತ್ತರ ಕೆಲಸವನ್ನು ಮಾಡುತ್ತಿದೆ ಅಂಬೇಡ್ಕರ್ ಅವರ ಮನದಾಳದ ಮಾತುಗಳನ್ನು ಡಿವಿಪಿ ಈಡೇರಿಸುತ್ತಿದೆ ಎಂದರು.
ನಾವು ಎಂದಿಗೂ ಸಮಾಜವನ್ನು ಕಟ್ಟುವಂತಹ ಕೆಲಸ ಮಾಡಬೇಕು ಒಡೆಯುವಂತಹ ಕೆಲಸ ಮಾಡಬಾರದು. ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಮಹಿಳೆಯರೂ ತಲೆ ಎತ್ತಿ ಬದುಕುಬೇಕು ಎಂಬ ಕಾರಣಕ್ಕೆ ಸಾವಿತ್ರಿಬಾಯಿ ಫುಲೆ ಸಾಕಷ್ಟು ಅವಮಾನಗಳನ್ನುಂಡರೂ ಸಹ ಹಿಂಜರಿಯದೆ ರಾಷ್ಟ್ರಕ್ಕೆ ಅಕ್ಷರದವ್ವ ಆಗಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಅತಿಥಿ ಬೆಂಗಳೂರಿನ ಕೆಎಸೆಮ್‌ಎಫ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ಮಾತನಾಡಿ, ಇ ದೇಶದಲ್ಲಿ ನಾವು ಯಾರನ್ನಾದರೂ ಅಕ್ಷರದವ್ವ ಎಂದು ಕರೆಯುವುದೇ ಆದರೆ ಅದು ಬರೀ ಸಾವಿತ್ರಿಬಾಯಿ ಫುಲೆ ಅವರನ್ನು ಮಾತ್ರ ಎಂದರು.
ಇಂದು ನಾವೆಲ್ಲರೂ ತಲೆ ಎತ್ತು ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಅಕ್ಷರ ಮಾತೆ ಸಾವಿತ್ರಿಬಾಯಿ ಫುಲೆ ಕಾರಣ. ಬಾಬಾ ಸಾಹೇಬ ಅಂಬೇಡ್ಕರ್ ತಮ್ಮ ಬಾಲ್ಯದಲ್ಲಿಯೇ ಸಮಾನತೆ ಬಗ್ಗೆ ಮಾತನಾಡಿದವರು. ಪ್ರಶ್ನಿಸಿದವರು. ಮತ್ತು ಸಂವಿಧಾನ ರಚಿಸುವ ಮೂಲಕ ಅದನ್ನು ನಮ್ಮೆಲ್ಲರಿಗೂ ತಂದು ಕೊಟ್ಟಂತವರು ಎಂದು ಹೇಳಿದರು. ಅವರು ಮಾಡಿದಂತಹ ಕೆಲಸವನ್ನು ನಾವ್ಯಾರು ಮರೆಯಬಾರದು ಎಂದರು.

banner

ಹಿಂದಿನಿಂದಲೂ ನಮ್ಮ ತಲೆಗೆ ಹಸಿ ಸುಳ್ಳುಗಳನ್ನು ತುಂಬುತ್ತಾ ಬಂದಿದ್ದಾರೆ. ನಿಜವಾದ ಸತ್ಯವನ್ನು ನಾವೆಲ್ಲರೂ ಅರಿಯಬೇಕಾದ ಅನಿವಾರ್ಯತೆ ಇದೆ. ಅಂತಹ ಜಾಗೃತಿ ಕೆಲಸವನ್ನು ಇಂದು ಡಿವಿಪಿ ಮಾಡುತ್ತಿರುವುದು ಹೆಮ್ಮೆಯ ವಿಷಯ ಅಷ್ಟೇ ಅಲ್ಲದೇ ನನ್ನಂತಹ ಎಷ್ಟೋ ಹೆಣ್ಣು ಮಕ್ಕಳಿಗೆ ಇಂದು ಡಿವಿಪಿ ಮುಂಚುಣಿಗೆ ತರುವಂತಹ ಕೆಲಸವನ್ನು ಮಾಡುತ್ತಿರುವುದು ಖುಷಿ ತಂದಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀನಾಥ ಪೂಜಾರಿ ಮಾತನಾಡಿ, ಸುರುವಾತಿನಲ್ಲಿ ಬರೀ 10ರಿಂದ 12 ವಿದ್ಯಾರ್ಥಿಗಳು ಸೇರಿಕೊಂಡು ಈ ದಲಿತ ವಿದ್ಯಾರ್ಥಿ ಪರಿಷತನ್ನು ಕಟ್ಟಿದ್ದೇವು ಆದರೆ ಇಂದು ನಮ್ಮ ಸಂಘಟನೆ ಮಾಡುತ್ತಿರುವ ಕೆಲಸದಿಂದ ನಮಗೆ ತೃಪ್ತಿ ಇದೆ. ಹತ್ತು ಹಲವಾರು ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಒಂದು ಹೊಸ ಆಯಾಮವನ್ನು ನಮ್ಮ ಸಂಘಟನೆ ಬರೆಯುತ್ತಿದೆ. ಸಂಘಟನೆ ವತಿಯಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಸ್ಪರ್ಧಾತ್ಮ ತರಬೇತಿ ಸೆಂಟರ್‌ನ್ನು ಪ್ರಾರಂಭಿಸಲಾಗಿದೆ. ಮತ್ತು ಎಲ್‌ಎಲ್‌ಬಿ ಕಲೆತವರನ್ನು ಸೇರಿಸಿಕೊಂಡು ಒಂದು ಲಾ ಪಾರಮ್ ತಂಡವೊಂದನ್ನು ರಚಿಸುವ ಮೂಲಕ ಅದರಿಂದ ಸಾಮಾಜಿಕ ಕೆಲಸಗಳನ್ನು ಮಾಡಲು ಡಿವಿಪಿ ಸಿದ್ಧತೆ ನಡೆಸಿದೆ. ಅಷ್ಟೇ ಅಲ್ಲದೇ ರಾಜ್ಯಾದ್ಯಂತ ಸುಮಾರು 100 ಅಂಬೇಡ್ಕರ್ ರಾತ್ರಿ ಶಾಲೆಗಳನ್ನು ತೆಗೆಯುವ ಮೂಲಕ ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವಂತಹ ಮಹತ್ತರ ಜವಬ್ದಾರಿಯನ್ನು ಡಿವಿಪಿ ಹೊತ್ತುಕೊಳ್ಳುವ ಮೂಲಕ ಸಮರ್ಥವಾಗಿ ನಿಭಾಯಿಸುತ್ತಿದೆ. ಹೊಸ ಹೊಸ ಆಲೋಚನೆಗಳನ್ನು ಕಟ್ಟುವ ಮೂಲಕ ಸಮಾಜವನ್ನು ಕಟ್ಟುವಂತಹ ಕೆಲಸವನ್ನು ನಾವು ಮಾಡುತ್ತಿದ್ದೇವೆ ಪ್ರತಿ ವರ್ಷ ಪರೀಕ್ಷೆ ನಡೆಸಿ ಅದರಲ್ಲಿ ಆಯ್ಕೆಯಾದವರಿಗೆ ಲಕ್ಷಾಂತರ ರೂಪಾಯಿಯನ್ನು ನಾವು ಬಹುಮಾನವಾಗಿ ನೀಡುತ್ತಿದ್ದೇವೆ ಇದರಿಂದ ಅಂಬೇಡ್ಕರ್ ಅವರನ್ನು ಮನ-ಮನಕ್ಕೂ ತಲುಪಿಸುವಂತಹ ಕೆಲಸವನ್ನು ಡಿವಿಪಿ ಮಾಡುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯವಿದೆ. ನೀವೆಲ್ಲರೂ ನಮ್ಮ ಕೈ ಜೋಡಿಸಬೇಕು ಎಂದರು.

ಇನ್ನು ಕಳೆದ ಬಾರಿ ನಡೆಸಿದಂತಹ ಪರೀಕ್ಷೆಯಲ್ಲಿ ಆಯ್ಕೆಯಾದ ಮೂರು ಜನಕ್ಕೆ ಪ್ರಥಮ 3 ಲಕ್ಷ,  ದ್ವಿತಿಯ 2 ಲಕ್ಷ, ತೃತಿಯ 1 ಲಕ್ಷದಂತೆ ಬಹುಮಾನವನ್ನು ನೀಡಲಾಗುತ್ತಿದೆ. ಹೀಗೆ ಈ ಸಾರಿಯ 2023ರ ಸಾಲಿನ ಪರೀಕ್ಷೆಯಲ್ಲಿ ಆಯ್ಕೆಯಾದವರಿಗೆ ೫ ಲಕ್ಷ ರೂಪಾಯಿಯನ್ನು ಘೋಷಣೆ ಮಾಡಲಾಗಿದೆ ಮತ್ತು ಅಷ್ಟೇ ಅಲ್ಲದೇ ದ್ವಿತಿಯ, ತೃತಿಯ ಬಹುಮಾನವನ್ನು ಸಹ ನೀಡುವುದರ ಜೊತೆಗೆ ಪ್ರತಿ ಜಿಲ್ಲೆಗೂ ಮೂರು ಜನರನ್ನು ಆಯ್ಕೆ ಮಾಡಿ ಬಹುಮಾನ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ 2022ನೇ ಸಾಲಿನ ಡಾ. ಬಾಬಾಸಾಹೇಬ ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದ ಪ್ರಥಮ ಬಹುಮಾನ ಪಡೆದ ಮಾಲಾ.ಕೆ(3 ಲಕ್ಷ), ದ್ವಿತಿಯ ಬಹುಮಾನ ಪಡೆದ ಅನಿಲ್ ವಿ ಬೆಳಗಾವಿ (2 ಲಕ್ಷ) ಹಾಗೂ ತೃತೀಯ ಪ್ರಜ್ವಲ್ ತುಮಕೂರು (1 ಲಕ್ಷ) ಇವರಿಗೆ ನಗದು ಬಹುಮಾನ ವಿತರಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆ ಮಾಡಿದಂಹ ಹಲವಾರು ಸಾಧಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ವಿಜಯಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಪೂಜ್ಯಶ್ರೀ ಫಾದರ್ ಟಿಯೋಲ ಮೆಚಡೊ. ದಲಿತ ವಿದ್ಯಾರ್ಥಿ ಪರಿಷತ್‌ನ ರಾಜ್ಯ ಸಂಚಾಲಕ ಬಾಲಾಜಿ ಎಂ ಕಾಂಬಳೆ, ಡಿವಿಪಿ ಪಧಾಧಿಕಾರಿಗಳು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.

 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news