ಸಿಂದಗಿ : ಭವ್ಯ ಗುರು-ಶಿಷ್ಯ ಸಂಸ್ಕಾರದ ಪರಂಪರೆ ಹೊಂದಿದ ಭಾರತ ವಿಶ್ವಗುರುವಾಗಲು, ಯುವ ಪೀಳಿಗೆಯ ಸಂಸ್ಕೃತಿ ಮತ್ತು ಸಾಧನೆಗಳೊಂದಿಗಿನ ಕೊಡುಗೆ ಕಾರಣವಾಗಬಲ್ಲವು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಾಲೇಜು ಕಟ್ಟಡಗಳ ಹಾಗೂ ಪ್ರಸಕ್ತ ಸಾಲಿನ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ನೆಸ್ಸೆಸ್ ಚುಟವಟಿಕೆಗಳನ್ನು ಉದ್ಘಾಟಿಸಿ, ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪ್ರತಿ ವಿದ್ಯಾರ್ಥಿ ತಮ್ಮ ಶಿಕ್ಷಕರನ್ನು ಗೌರವದಿಂದ ಕಾಣಬೇಕು. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗದೆಂಬ ಕೊರಗು ಬಹುತೇಕರದ್ದಾಗಿದೆ. ಆ ಕೊರಗನ್ನು ನೀಗಿಸುವಲ್ಲಿ ಸರ್ಕಾರಿ ಶಿಕ್ಷಣ ಕೇಂದ್ರಗಳಲ್ಲಿ ಓದಿ ರ‍್ಯಾಂಕ್ ಪಡೆದಿರುವ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ. ಈ ಹಿಂದಿನಂತೆ ಶಿಕ್ಷಣ ವ್ಯವಸ್ಥೆ ಈಗಿಲ್ಲ. ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬೋಧಕ ಸಿಬ್ಬಂದಿ ಪ್ರತಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾದ ಶಿಕ್ಷಣ ನೀಡುವಲ್ಲಿ ಖಾಸಗಿ ಶಾಲಾ, ಕಾಲೇಜುಗಳೊಂದಿಗೆ ಶೈಕ್ಷಣಿಕ ಪೈಪೋಟಿಯೊಂದಿಗೆ ಸಾಧನೆ ಸಾಲಿನಲ್ಲಿ ತಂದು ನಿಲ್ಲಿಸಿದ್ದಾರೆ ಎಂದರು.
ವೇದಿಕೆಯಲ್ಲಿ ಕೆಎಚ್‌ಬಿ ಎಇ ಇಸಾಕ್, ಗುತ್ತಿಗೆದಾರ ವೆಂಕಟೇಶ, ಪ್ರಾಚಾರ್ಯ ಡಾ.ಸತೀಶಕುಮಾರ ಗಾಯಕವಾಡ, ಸಯ್ಯದ್ ಸಿರಾಜುದ್ದೀನ್ ಖಾದರಿ, ಯಮನಪ್ಪ ತಳಗೇರಿ, ತೇಜಶ್ವಿನಿ, ಎಸ್.ಜಿ.ಬಮ್ಮನಳ್ಳಿ, ಇದ್ದರು.
ಬೋಧಕ ಸಿಬ್ಬಂದಿಗಳಾದ ರಿಯಾಜ್‌ಅಹ್ಮದ್ ಜಾಗೀರದಾರ, ಸಯ್ಯದ್ ಮುಜೀರ್, ಕೃಷ್ಣಾರೆಡ್ಡಿ, ಕಾಶೀನಾಥ ಜಾಧವ, ಎನ್.ಬಿ.ಪಾಟೀಲ, ಸುರೇಶ ಡಬ್ಬಿ ಸೇರಿದಂತೆ ಮತ್ತಿತರರಿದ್ದರು. ವಿದ್ಯಾರ್ಥಿನಿ ಪೂಜಾ ರಾಠೋಡ ಪ್ರಾರ್ಥಿಸಿದರು. ಸೀಮಾ ದಳವಾಯಿ ಸ್ವಾಗತಗೀತೆ ಹೇಳಿದರು. ಪ್ರಾಧ್ಯಾಪಕಿ ಆಯುಷಾ ಸಿದ್ದಿಕಿ ಸ್ವಾಗತಿಸಿದರು. ನೀಲಮ್ಮ ಹತ್ತಳ್ಳಿ ನಿರೂಪಿಸಿದರು.