Home News  ಬಸನಗೌಡ ಪಾಟೀಲ ಯತ್ನಾಳ ಅವರು ಉತ್ತರ ಕರ್ನಾಟಕದ ಧ್ವನಿ: ಬಸವರಾಜ ಬೊಮ್ಮಾಯಿ

 ಬಸನಗೌಡ ಪಾಟೀಲ ಯತ್ನಾಳ ಅವರು ಉತ್ತರ ಕರ್ನಾಟಕದ ಧ್ವನಿ: ಬಸವರಾಜ ಬೊಮ್ಮಾಯಿ

by vegadhut@gmail.com.
0 comments
ವಿಜಯಪುರ : ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸನಗೌಡ ಆರ್.ಪಾಟೀಲ ಯತ್ನಾಳ ಅವರು ಉತ್ತರ ಕರ್ನಾಟಕದ ಧ್ವನಿಯಾಗಿದ್ದಾರೆ. ಕ್ರಿಯಾಶೀಲ ರಾಜಕಾರಣಿಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗದ, ವಿಜಯಪುರ ಜಿಲ್ಲೆಯ ಹುಲಿಯಂತಿದ್ದಾರೆ ಎಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು, ಶಾಸಕರಾದ ಯತ್ನಾಳ ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.
ನಗರದ ಎನ್‌ಎಚ್-50 ಹತ್ತಿರದಲ್ಲಿನ ಎಸ್- ಹೈಪರ್ ಮಾರ್ಟ ಹತ್ತಿರದ ಶ್ರೀ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಷಾಲಿಸಿ ಆಸ್ಪತ್ರೆ ಆವರಣದಲ್ಲಿ ಸೆ.30ರಂದು ಜಿಲ್ಲಾಡಳಿತದಿಂದ ನಡೆದ ವಿವಿಧ ಇಲಾಖೆಗಳ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನೂತನ ಶ್ರೀ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಷಾಲಿಸಿ ಆಸ್ಪತ್ರೆಯ ಲೋಕಾರ್ಪಣೆ ವೇಳೆಯಲ್ಲಿ ಮಳೆಯು ಧೋ ಎಂದು ಸುರಿದಿರುವುದು ಬಸನಗೌಡ ಪಾಟೀಲ ಯತ್ನಾಳ ಅವರ ಮೇಲೆ ದೇವರು ಆಶೀರ್ವಾದ ಮಾಡಿದಂತಾಗಿದೆ ಎಂದರು. ಕರ್ನಾಟಕಕ್ಕೆ ಭೂಷಣ ಪ್ರಾಯವಾದ, ಐತಿಹಾಸಿಕ, ಬಸವ ಜನ್ಮಭೂಮಿ, ಪುಣ್ಯಭೂಮಿಯಾದ ವಿಜಯಪುರ ಜಿಲ್ಲೆಗೆ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರಿನ ಆಸ್ಪತ್ರೆಯು ಕಳಸ ಪ್ರಾಯವಾದಂತಾಗಿದೆ ಎಂದು ತಿಳಿಸಿದ ಮುಖ್ಯಮಂತಿಗಳು, ಇತರರು ಅನುಕರಣೆ ಮಾಡುವ ಹಾಗೆ ವಿನೂತನ ಶೈಲಿಯಲ್ಲಿ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ. ಇದು 1008 ಬೆಡ್‌ನ ಆಸ್ಪತ್ರೆಯಾಗಿ ವಿಸ್ತರಣೆಯಾಗಬೇಕು ಎನ್ನುವ ಅವರ ಕಾರ್ಯ ಮೆಚ್ಚುವಂತದ್ದಾಗಿದೆ. ಪ್ರತಿಯೊಬ್ಬರಿಗೂ ಅನುಕೂಲವಾಗುವ ಆಸ್ಪತ್ರೆಯನ್ನು ನಿರ್ಮಿಸಿ ಯತ್ನಾಳ ಅವರು ಬಡವರು ಮೆಚ್ಚುವ ಕೆಲಸ ಮಾಡಿದ್ದು ಅವರಿಗೆ ಪುಣ್ಯಪ್ರಾಪ್ತಿಯಾಗಲಿದೆ ಎಂದರು.
ಘನ ಉಪಸ್ಥಿತಿ ವಹಿಸಿದ್ದ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, 21ನೇ ಶತಮಾನದ ಭಾರತವು ಕೇವಲ ರಸ್ತೆ, ಸೇತುವೆ, ಹಣಕಾಸಿನ ವ್ಯವಹಾರಕ್ಕಷ್ಟೇ ಮಾತ್ರವಲ್ಲ, ಜನರ ಆರೋಗ್ಯ ಮುಖ್ಯ ಎಂಬುದನ್ನು ಮನಗಾಣಿಸಿದೆ. ಈ ನಿಟ್ಟಿನಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಉತ್ತಮ ಹೆಜ್ಜೆ ಮುಂದಿಟ್ಟಿದ್ದಾರೆ. ಶ್ರೀ ಸಿದ್ದೇಶ್ವರ ಶ್ರೀಗಳ ಆಸ್ಪತೆಯ ಹೆಸರನ್ನು ಕೇಳಿದ ಕೂಡಲೇ ಜನರಿಗೆ ಅವರ ಆರೋಗ್ಯ ಸರಿಯಾಗುವ ವಿಶ್ವಾಸ ಬರುತ್ತದೆ. ಅಂತಹ ಕಾರ್ಯವನ್ನು ಶಾಸಕರಾದ ಯತ್ನಾಳ ಅವರು ಮಾಡಿದ್ದಾರೆ. ಸೇವೆಯ ಮೂಲಕ ಜನರನ್ನು ತಲುಪುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news