ಸಿಂದಗಿ : ಸಿಂದಗಿ ನಗರದ ಪ್ರತಿಷ್ಠಿತ ಗಜಾನನ ಮಂಡಳಿಗಳಲ್ಲಿ ಒಂದಾದ ಕಲ್ಯಾಣ ನಗರ ಗಜಾನನ ಮಂಡಳಿಯ ಗಣೇಶ ವಿಸರ್ಜನಾ ಮೆರವಣಿಗೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದೆ. ಕಳೆದ ಎರಡು ವರ್ಷ ಕೊವೀಡ್ -19 ಹಿನ್ನಲ್ಲೆಯಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ನೀಡಿರಲಿಲ್ಲಾ ಆದ ಕಾರಣ ಮಂಡಳಿಯು ವಿಸರ್ಜನೆ ಸಮಯದಲ್ಲಿ ಗಜಾನನ ಕಣ್ಣಿಗೆ ಕಪ್ಪು ಅರಬೆ ಪಟ್ಟಿ ಹಾಕಿಸಿ ವಿರೋಧ ವ್ಯಕ್ತಪಡಿಸಿದರು.
ಈ ಬಾರಿ ಜಗತ್ತಿಗೆ ಬಂದಿರುವ ಕೊರೋನ್ ಎಂಬ ಮಾಹಾಮಾರಿಯ ಅಲೆ ಕಡಿಮೆ ಆದ್ದರಿಂದ ಯಾವುದೆ ತೊಂದರೆಗಳಿಲ್ಲದೆ ಮೆರೆವಣಿಗೆ ನಡೆಯುತ್ತಿದ್ದು ಮಂಡಳಿ ಹಾಗೂ ಭಕ್ತರು ಸಂತಸದಿಂದ ಕುಣಿದು ಕುಪ್ಪಳಿಸುತ್ತಿದ್ದಾರೆ. ಸತತ 28ನೇ ವರ್ಷ ಗಜಾನನ ಪ್ರತಿಷ್ಠಾಪನೆ ಮಾಡುತ್ತಿರುವುದು ಕಲ್ಯಾಣ ನಗರದ ಗಜಾನನ ಮಂಡಳಿಯು ಯಶಸ್ವಿಯಾಗಿ ಭಾವ್ಯಕತೆಯಿಂದ ನಡೆಸಿಕೊಂಡು ಬಂದಿರುವುದು ಪರಂಪರೆಯಾಗಿದೆ.
ಗಣಪನಿಗೆ ನಮನ ಸಲ್ಲಿಸಿದ ಕುದುರೆ

ಗಜಾನನ ಮೆರವಣಿಗೆಯಲ್ಲಿ ಪಾಲ್ಗೊಂಡ ಕುದುರೆ ಕುಣಿತಗಳು ನೋಡುಗರ ಮನ ಸೆಳೆಯುತ್ತಿತ್ತು ಗಣೇಶನಿಗೆ ಎರಡು ಕಾಲುಗಳು ಎತ್ತರಿಸಿ ನಮನ ಸಲ್ಲಿಸಿತ್ತು. ಹಲವಾರು ಕಲಾ ತಂಡಗಳು ಬಾಗಿಯಾಗಿವೆ.
