ಸಿಂದಗಿ : ನಗರದಲ್ಲಿ ಇಂದು ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮವು ಯಶಸ್ವಿಯಾಗಿದ್ದು. ಗಣೇಶ ವಿಸರ್ಜನೆಗೆ ಅಧಿಕಾರಿಗಳು ನಿಗದಿ ಮಾಡಿದ ಸ್ಥಳವಾದ ಬಸ್ ಡಿಪೋ ಹತ್ತಿರ ವಿರುವ ಬಾವಿಯಲ್ಲಿ ವಿಸರ್ಜಿಸುವಂತೆ ಸೂಚಿಸಿದ್ದರು. ಪೂರ್ವ ನಿಯೋಜಿತವಾಗಿ ಮಾಡಬೇಕಿದ ಸ್ವಚ್ಛತೆ, ಕರೆಂಟ್, ಹಾಗೂ ಕ್ರೇನ್ ವ್ಯವಸ್ಥೆ ಇರಲಿಲ್ಲ ಸೌಜನ್ಯಕ್ಕೆ ಯಾವ ಅಧಿಕಾರಿಗಳು ಉಪಸ್ಥಿತ ಇಲ್ಲದೆ ಇರುವುದನ್ನು ಹಲವು ಗಜಾನನ ಮಂಡಳಿಗಳು ಆಕ್ರೋಶ ಹೊರಹಾಕಿದ್ದಾರೆ.
ಸ್ವಚ್ಛವಾಗಿಡಬೇಕಿದ ಬಾವಿ ನೈರ್ಮಲ್ಯದಿಂದ ಕೂಡಿದ್ದು ಅಧಿಕಾರಿಗಳು ಕೇವಲ ಶಾಂತಿ ಸಭೆಯಲ್ಲಿ ತಮ್ಮ ರೂಲ್ಸ್ ಹೇಳುತ್ತಾರೆ ಆದರೆ ಅವರು ಅದನ್ನು ಪಾಲಿಸುವುದಿಲ್ಲ, ಒಂದು ಲೈಪ್ ಜಾಕೇಟ್ ಕೂಡಾ ಇಲ್ಲಿ ಇಡಲಾಗಿಲ್ಲ ಗಣೇಶ ವಿರ್ಸಜಿಸಲು ಹೋಗಿ ಬಾವಿಯಲ್ಲಿ ಬಿದ್ದು ಜೀವ ಹಾನಿ ಯಾದರೆ ಹೋಣೆ ಯಾರು ಎಂದು ಬೇಸರ ವ್ಯಕ್ತಪಡಿಸಿದರು.
ವಿದ್ಯುತ್ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಾಗ ಇವಾಗ ಕರೆಂಟ್ ನೀಡಿದ್ದಾರೆ ಎಂದು ಮಂಡಳಿಯ ಸದಸ್ಯರು ತಿಳಿಸಿದ್ದಾರೆ.