ಒಂದಿಲ್ಲೊಂದು ಅವಾಂತರದಿಂದ ಕೂಡಿದ ಸಿಂದಗಿ ಪುರಸಭೆ ಕಾರ್ಯಾಲಯದಲ್ಲಿ ಇಂದು ರಾಷ್ಟ್ರ ಧ್ವಜಕ್ಕೆ ಅವಮಾನ ನಡೆದಿರುವುದು ಬೆಳಕಿಗೆ ಬಂದಿದೆ.
ಸಿಂದಗಿ: ಪಟ್ಟಣದ ಪುರಸಭೆಯಲ್ಲಿ ಬೆಳ್ಳಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಮುಖ್ಯಾಧಿಕಾರಿ ಸುರೇಶ ನಾಯಕ ಇವರ ನೇತೃತ್ವದಲ್ಲಿ ಸಿಂದಗಿಯ ಪುರಸಭೆ ಸದಸ್ಯರು ಹಾಗೂ ನಾಮ ನಿರ್ದೇಶಿತ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರೊಂದಿಗೆ ರಾಷ್ಟ್ರ ಧ್ವಜಾರೋಹಣ ಮಾಡಲಾಗಿತ್ತು.
ಆದರೆ ಸಾಯಂಕಾಲದ ಹೋತ್ತಿಗೆ ಪುರಸಭೆ ಮೇಲೆ ಬಾನಂಗಳಕ್ಕೆ ಹಾರುತ್ತಿರುವ ತ್ರಿವರ್ಣ ಧ್ವಜ ಉಲ್ಟಾ ಆಗಿದ್ದು ಅವಮಾನಕ್ಕೆ ತುತ್ತಾಗಿದೆ. ಕಿಡಿಗೇಡಿಗಳು ದುರುದ್ದೇಶದಿಂದ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
ರಾಷ್ಟ್ರ ಧ್ವಜ ಉಲ್ಟಾ ಕಂಡುಬಂದ ದೃಶ್ಯ
ಸ್ಪಷ್ಟಿಕರಣ ನೀಡಿದ ಮುಖ್ಯಾಧಿಕಾರಿ ಸುರೇಶ ನಾಯಕ ಪುರಸಭೆ ಮೇಲೆ ಬರಲು ಹಲವು ದಾರಿಗಳಿದ್ದು ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಎಂಬ ಅನುಮಾನಗಳಿವೆ. ನಾನು ಕೂಡಲೆ ದೂರು ನೀಡಲು ಹೋರಟಿರುವೆ ಬೆಳ್ಳಿಗೆಯ ಭಾವಚಿತ್ರಗಳು ಹಾಗೂ ವಿಡಿಯೋ ಚಿತ್ರವು ನನ್ನಲ್ಲಿದೆ. ರಾಷ್ಟ್ರ ಧ್ವಜಕ್ಕೆ ಅವಮಾನಿಸಿದ ಕಿಡಿಗೇಡಿಗಳಿಗೆ ತಕ್ಕ ಶೀಕ್ಷೆ ಆಗಬೇಕು ಎಂದರು.
ಮುಖ್ಯಾಧಿಕಾರಿ ಸುರೇಶ ನಾಯಕ ಸಕಲ ಗೌರವಗಳೊಂದಿಗೆ ಧ್ವಜಾರೋಹಣ ನೆರವೇರಿಸಿದ್ದ ವಿಡಿಯೋ ಚಿತ್ರೀಕರಣ
ಬೆಳ್ಳಿಗೆ ಸಕಲ ಗೌರವಗಳೊಂದಿಗೆ ಧ್ವಜಾರೋಹಣ ಮಾಡಲಾಗಿತ್ತು. ರಾಷ್ಟ್ರ ಧ್ವಜಕ್ಕೆ ಅವಮಾನ ವಾಗಿರುವ ಘಟನೆ ಬಗ್ಗೆ ಮಾಹಿತಿ ಇಲ್ಲ. – ಸಾಯಬಣ್ಣ ಪುರದಾಳ ನಾಮ ನಿರ್ದೇಶಿತ ಸದಸ್ಯ


