Home News ಉಪಯೋಗಕ್ಕೆ ಬಾರದ ಬಾಲಕಿಯರ ವಸತಿ ನಿಲಯ | ಪೋಲಿಗಳಿಗೆ ಇದುವೆ ತಂಗುದಾಣ

ಉಪಯೋಗಕ್ಕೆ ಬಾರದ ಬಾಲಕಿಯರ ವಸತಿ ನಿಲಯ | ಪೋಲಿಗಳಿಗೆ ಇದುವೆ ತಂಗುದಾಣ

by vegadhut@gmail.com.
0 comments

ಸಿಂದಗಿ : ಪಟ್ಟಣದಲ್ಲಿನ ಹಳೆ ಚಾಂದಕವಠೆ ರಸ್ತೆಯಲ್ಲಿ ನಿರ್ಮಾಣ ಮಾಡಿದ ಡಿ.ದೇವರಾಜು ಅರಸು ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಪರಿಸ್ಥಿತಿಗೆ ಅಲ್ಲಿನ ಜನರು ಕಳವಳ ವ್ಯಕ್ತಪಡಿಸಿದ್ದಾರೆ. 

ಹಲವು ವರ್ಷಗಳ ಹಿಂದೆಯೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಬೇಕಾದ ಬಾಲಕಿಯರ ವಸತಿ ನಿಲಯ ಇದುವರೆಗೂ ಬಳಸದೆ ಬಿಳೂ ಬಿದ್ದಿರುವುದು ನೋಡಿದರೆ ಅಧಿಕಾರಿಗಳ ಅಸಡ್ಡೆ ವರ್ತನೆ ಎದ್ದು ಕಾಣುತ್ತಿದೆ. ಇದರ ಕುರಿತು ಅಲ್ಲಿನ ಸ‍್ಥಳಿಯರು ಮಕ್ಕಳಿಗೆ ಉಪಯೋಗಕ್ಕು ಬಾರದೆ ಇಗಾಗಲೆ ಹಾಳಾಗಿ ಹೋಗುತ್ತಿದ್ದು ಅದರ ಉಪಯೋಗ ಮಕ್ಕಳಿಗೆ ಸಿಗುವಂತಾಗಬೇಕು. ಕಟ್ಟಿ ಬಿಟ್ಟಿದ ಕಾರಣ ಅಲ್ಲಿ ರಾತ್ರಿ ಆಯಿತೆಂದರೆ ಪೋಲಿಗಳು ದಾರು ಕುಡಿತಾ ಅಲ್ಲಿ ಕುಳಿತುಕೋಳ್ಳುವುದು ಸಾಮಾನ್ಯವಾಗಿದೆ.  ಇದರ ಕುರಿತು ವಿಚಾರಿಸಿದಾಗ ಬಾಡಿಗೆ ಕೋಣೆಯಲ್ಲಿ ಹಾಸ್ಟೇಲ್ ನಡೆಯುತ್ತದೆ ಎಂದು ತಿಳಿದು ಬಂದಿದೆ, ಆದರೆ ಸರಕಾರದಿಂದ ಕಟ್ಟಿದ ಬಿಲ್ಡಂಗ್ ಬಳಸಲಾಗುತ್ತಿಲ್ಲ ಎಂದು ಸ್ಥಳಿಯ ಸುರೇಶ ಚಾಗಶೇಟ್ಟಿ ಕಳವಳ ವ್ಯಕ್ತಪಡಿಸಿದರು.

.ವಸತಿ ನಿಲಯದ ಮೇಲ್ವಿಚಾರಕಿ ವಿಜಯಲಕ್ಷ್ಮೀ ಹದಗಲ್ಲ  ಮಕ್ಕಳಿಗೆ ಮನಗಲು  ಜಾಗದ ವ್ಯವಸ್ಥೆ ಹಾಗೂ ಶೌಚಾಲಯದ ವ್ಯವಸ್ಥೆಯ ಸಮಸ್ಯೆ ಜಾಸ್ತಿ ಇದೆ ಆದರಿಂದ ಕೂಡಲೆ ಸ್ಥಳಾಂತರ  ಮಾಡಿದರೆ ಒಳ್ಳಯದಾಗುತ್ತದೆ ಎಂದರು. 

ಬಿ.ಸಿ.ಎಮ್ ಅಧೀಕಾರಿ ರವಿಂದ್ರನಾಥ ಬಂಥನಾಳ ವೇಗದೂತ ಜನದನಿ ವಿಚಾರಿಸಿದಾಗ ನಿಮಿರ್ತಿ ಕೇಂದ್ರ ವಿಜಯಪೂರ ಇವರು ಕಾಮಗಾರಿ ಮಾಡಿದ್ದು ಕೆಲವು ಕಾಮಗಾರಿಗಳು ಬಾಕಿ ಇಟ್ಟಿದ್ದಾರೆ ಅದು ಪೂರ್ಣಗೊಳಿಸಿ ಹಸ್ತಾಂತರಿಸಬೇಕಾಗಿದೆ. ಮಕ್ಕಳಿಗೆ ಕಷ್ಟ ವಾಗುತ್ತಿದೆ ಅದನ್ನು ನೋಡಿ ಪತ್ರವು ಬರೆಯಲಾಗಿದೆ. ಡಿ.ಡಿ ಅವರ ಗಮನಕ್ಕು ತರಲಾಗಿದೆ ಎಂದು ಪ್ರತಿಕ್ರೀಯೆ ನೀಡಿದ್ದಾರೆ. 

banner

ಇದುವರೆಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಲೋಕಾರ್ಪಣೆ ಗೋಳದ ವಸತಿ ನಿಲಯ  ಇನ್ನಾದರು ಚಾಲನೆಗೊಂಡು ಮಕ್ಕಳ ಭವಿಷ್ಯಕ್ಕೆ ಅನೂಕೂಲವಾಗುತ್ತದೆಯೇ ಎಂದು ಕಾದು ನೋಡಬೇಕಾಗಿದೆ. 

ವಿದ್ಯುತ್ ಸಮಸ್ಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ನಾವು ನಾಳೆಯೆ ಇಲಾಖೆಗೆ ಹಸ್ತಾಂತರಿಸಲು ಸಿದ್ದರಿದೇವೆ. – ಎಸ್.ಎಮ್. ಜಾಹಗೀರದಾರ ನಿರ್ಮಿತಿ ಕೇಂದ್ರ ವಿಜಯಪುರ

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news