ಸಿಂದಗಿ : ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಆ ನಿಟ್ಟಿನಲ್ಲಿ ಸಿಂದಗಿಯ ಪ್ರಮುಖ ರಸ್ತೆಗಳನ್ನು ಅಭಿವೃದ್ದಿ ಪಡಿಸಿ ಸಿಂದಗಿ ನಗರವನ್ನು ಅತ್ಯಂತ ಸುಂದರ ನಗರವನ್ನಾಗಿ ಮಾಡುವ ಗುರಿ ನನ್ನದಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ ವೃತ್ತದ ಬಳಿ ಲೋಕಪಯೋಗಿ ಇಲಾಖೆ , ಉಪ ವಿಭಾಗ ಸಿಂದಗಿಯ 2023-24 ನೇ ಸಾಲಿನ 3054-ಜಿಲ್ಲಾ ಮುಖ್ಯ ರಸ್ತೆಗಳ ನಿರ್ವಹಣೆ ಯೋಜನೆ ಅಡಿಯಲ್ಲಿ ಸಿಂದಗಿ ಪಟ್ಟಣದ ವ್ಯಾಪ್ತಿಯ ಜೇವರ್ಗಿ-ಚಿಕ್ಕೋಡಿ ರಸ್ತೆ ಹಾಗೂ ಆಲಮೇಲ -ಸಿಂದಗಿ ರಸ್ತೆ (ಮಹಾತ್ಮಾ ಗಾಮಧಿ ವೃತ್ತದಿಂದ) ರಾಷ್ಟ್ರೀಯ ಹೆದ್ದಾರಿ -50ರ , ಚಿಕ್ಕಸಿಂದಗಿ ವರ್ತುಲ ರಸ್ತೆಯವರೆಗೆ ಬಾಕಿ ಉಳಿದಿರುವ ರಸ್ತೆಗೆ ಮೀಡಿಯನ್ ಅಳವಡಿಸುವ ಕಾಮಗಾರಿಗೆ ಅಂದಾಜು 1.25 ಕೋಟಿ ಅನುದಾನದಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ನಗರ ಅಭಿವೃದ್ದಿಯಾಗಲು ಮೊದಲು ರಸ್ತೆಗಳು ಉತ್ತಮವಾಗಿರಬೇಕು. ಮುಂಬರುವ ದಿನಗಳಲ್ಲಿ ಸಿಂದಗಿಗೆ ಕೂಡುವ ಎಲ್ಲ ರಸ್ತೆಗಳನ್ನು ಹಾಗೂ ಪಟ್ಟಣದ ಮುಖ್ಯ ರಸ್ತೆಗಳನ್ನು ಅಭಿವೃದ್ದಿ ಪಡಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ. ಪ್ರಸ್ತುತ ನಿರ್ಮಾಣಗೊಳ್ಳಲಿರುವ ರಸ್ತೆಗೆ ಮೀಡಿಯನ್ ನಿರ್ಮಾಣವಾದ ಬಳಿಕ ಅಲ್ಲಿ ಸುಂದರವಾದ ಗಿಡ ಗಳನ್ನು ನೆಡುವ ಕಾರ್ಯ ಆರಂಭಗೊಳ್ಳಲಿದೆ ನಾನು ನಾನು ನ್ನನದೆ ಕಲ್ಪನೆಯಲ್ಲಿ ಒಂದು ಸುಂದರ ನಗರ ಹೇಗಿರಬೇಕು ಎಂಬ ಗುರಿಯ ಕನಸಿಟ್ಟುಕೊಂಡು ಕೆಲಸ ಮಾಡುತ್ತಿರುವೆ. ಅದನ್ನು ಸಹಕಾರಗೊಳಿಸಲು ಶಕ್ತಿ ಮೀರಿ ಪ್ರಯತ್ನಿಸುವೆ ಸಾರ್ವಜನಿಕರಿಂದಲು ಅಷ್ಟೇ ಸಹಕಾರ ಅಗತ್ಯವಾಗಿದೆ ಎಂದರು.



