
ಸಿಂದಗಿ: ರಾಷ್ಟ್ರದ ಬೆಳವಣಿಗೆಯಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಎನ್.ಸಿ.ಸಿ ಅಧಿಕಾರಿ ಪ್ರೊ ಶಶಿಕಾಂತ ಹೂಗಾರ ಹೇಳಿದರು.
ಪಟ್ಟಣದ ಸಿ.ಎಮ್.ಮನಗೂಳಿ ಮಹಾವಿದ್ಯಾಲಯದಲ್ಲಿ ಸರ್ದಾರ ವಲ್ಲಬಭಾಯಿ ಪಟೇಲರ ಜನ್ಮ ದಿನದ ನಿಮಿತ್ಯ ನಡೆದ ರಾಷ್ಟ್ರೀಯ ಏಕತಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ರಾಷ್ಟ್ರದ ಏಕತೆ ಮತ್ತು ಭದ್ರತೆ ಕಾಪಾಡುವಲ್ಲಿ ಎನ್.ಸಿ.ಸಿ ಸಂಘಟನೆಯ ಪಾತ್ರ ಬಹು ದೊಡ್ಡದು ದೇಶ ಕಂಡ ಶ್ರೇಷ್ಠ ನಾಯಕ ಸರ್ದಾರ ವಲ್ಲಭಾಯಿ ಪಟೇಲ ದೇಶದ ಏಕತೆಗಾಗಿ ಶ್ರಮಿಸಿದ್ದಾರೆ ನಾವೆಲ್ಲರೂ ಅದನ್ನು ಉಳಿಸಿಕೊಂಡು ಹೋಗಬೇಕಿದೆ ಎಂದರು.
ಈ ವೇಳೆ ಎನ್.ಸಿ.ಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಎಮ್.ಎಮ್.ಪಾಟೀಲ, ಪ್ರೊ ಬಿ.ಸಿ.ಮಾಸ್ತಿ ಸೇರಿದಂತೆ ಎನ್.ಸಿ.ಸಿ ವಿದ್ಯಾರ್ಥಿಗಳು ಹಾಜರಿದ್ದರು.

