
ಆಲಮೇಲ : ಇಲ್ಲಿಯವರೆಗೆ ಸಿಂದಗಿ ತಾಲೂಕಿಗೆ ಆಗಮಿಸುತ್ತಿದ್ದ ಜನರು ಇನ್ನು ಆಲಮೇಲ ಪಟ್ಟಣದಲ್ಲಿಯೇ ಸೌಲಭ್ಯ ಸಿಗುವುದು. ಆಲಮೇಲ ತಾಪಂ-13 ಸಿಂದಗಿ -16 ಗ್ರಾಮ ಪಂಚಾಯಿತಿಗಳಾಗಿ ವಿಂಗಡಿಸಲಾಗಿದೆ. ನಿಮ್ಮ ಸಹಕಾರ ನಮ್ಮಗಿದ್ದರೆ ಅತ್ಯುತ್ತಮ ಆಡಳಿತ ನಾವು ನೀಡುತ್ತೇವೆ ಎಂದು ಮಾತನಾಡಿ ವೇದಿಕೆಯ ಮೇಲಿದ ಗಣ್ಯರಿಗೆ ಸಿಂದಗಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಸ್ವಾಗತಿಸಿದರು.

ತಾ.ಪಂ. ಕಾರ್ಯಾಲಯ ಶಾಸಕ ರಮೇಶ ಭೂಸನೂರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಉದ್ಘಾಟಿಸಿದರು.
ತಾಲೂಕಾ ಘೋಷಣೆ ಆದ ನಂತರ ಎರಡು ಪ್ರಮುಖ ಕಛೇರಿ ಪ್ರಾರಂಭಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ಉಪ ಖಜಾನೆ ಕಛೇರಿ ಪ್ರಾರಂಭಿಸಲಾಗುವುದು. ಮತ್ತು ಕಾರ್ಯಕ್ರಮ ಮುಗಿದ ನಂತರ ಇಂದೆ ಪಶು ಆಸ್ಪತ್ರೆಗೆ ಭೂಮಿಪೂಜೆ ಮಾಡಲಾಗುವುದು. ನನ್ನಗೆ ನಂಬಿ ನನ್ನನು ಆರ್ಶೀವದಿಸಿದ ಜನತೆಯ ಋಣ ತಿರಿಸುತ್ತಿದೆನೆ. ಬಗಲೂರು ಮತ್ತು ಮೋರಟಗಿ ಗ್ರಾಮದ ಜನರು ದೊಡ್ಡ ಅಹವಾಲೆಂದರೆ ಆಲಮೇಲ ತುಂಬಾ ದೂರಾಗುತ್ತದೆ ಎಂಬ ಕೂಗಿತ್ತು
ಅವರಿಗೆ ಒಂದೆ ಮಾತು ಹೇಳಿದೆ ಆಲಮೇಲ ನಗರಕ್ಕೆ ಕೇವಲ ಹದಿನೈದು ನಿಮಿಷದಲ್ಲಿ ತಲುಪಬಹುದು, ಒಂದು ವರ್ಷದ ಅವಧಿಯಲ್ಲಿ ಸುಮಾರು 150ಕೋಟಿಯ ವಿಶೇಷ ರಸ್ತೆಗಾಗಿಯೇ ಖರ್ಚು ಮಾಡಲಾಗುತ್ತಿದೆ ಆದರಿಂದ ದೂರಾಗುತ್ತದೆ ಮಾತುಬೇಡ ಎಂದು ಹೇಳಿದೇನೆ ಎಂದರು.
ನಂತರ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ವಿಜಯಪುರದ ರಾಹುಲ್ ಶಿಂಧೆ ಅವರು ಉಪ ವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಕಛೇರಿ ಪ್ರಾರಂಭಿಸಬೇಕು ಎಂಬ ಯೋಚನೆ ಇಂದ ಕಛೇರಿಯ ಪರಿಶೀಲನೆ ನಡೆಸಲಾಗಿತ್ತು. ಆದರೆ ಇಂದು ಉದ್ಘಾಟನೆ ಆಗುತ್ತಿರುವುದು ಸಂತಸ ತಂದಿದೆ. ನಾವು ಎಷ್ಟೇ ಕಛೇರಿಗಳು ಪ್ರಾರಂಭಿಸಿದರು ಉತ್ತಮ ಆಡಳಿತ ನೀಡಿದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಈ ಭಾಗದಲ್ಲಿ ಪಿ ಡಿ ಓ ಕೆಲಸ ಮಾಡುತ್ತಿಲ್ಲಾ ಎಂಬ ದೂರುಗಳು ಸಾಮಾನ್ಯವಾಗಿವೆ, ಆದರೆ ಪಿ.ಡಿ.ಓ ವಿಫಲವಾದರೆ ಅಲ್ಲಿ ಚುನಾಯಿತ ಪ್ರತಿನಿಧಿಗಳು ವಿಫಲವಾದಂತೆ ಎಂದು ಹೇಳಿದರು.
ತಾಲೂಕಾ ದಂಡಾಧಿಕಾರಿ ಸುರೇಶ ಚಾವ್ಲಾರ, ದೇ.ಹೀಪ್ಪರಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮುದ್ದಿನ, ಪುರಸಭೆ ಮುಖ್ಯಾಧಿಕಾರಿ ಅಭಿಷೇಕ ಪಾಂಡೆ ವೇದಿಕೆ ಮೇಲಿದ್ದರು. ಶ್ರೀಶೈಲ ಮಠಪತಿ ಕಾರ್ಯಕ್ರಮ ನಿರೂಪಿಸಿದರು. ಪಿ.ಡಿ.ಓ ಶರಣಗೌಡ ಕಡ್ಲೇವಾಡ ವಂದಿಸಿದರು.

ಪಶು ಸಂಗೋಪನಾ ಕಛೇರಿಯ ಭೂಮಿಪೂಜೆ 22 ಲಕ್ಷರೂ ಗಳಲ್ಲಿ ನೇರವೆರಿಸಿದರು.
