Home News ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಸಮ್ಮೇಳನ ವಾಲೀಕಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಕನ್ನಡ ಸಾಹಿತ್ಯ ಪರಿಷತ್ತ ಜಿಲ್ಲಾ ಸಮ್ಮೇಳನ ವಾಲೀಕಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

by vegadhut@gmail.com.
0 comments

ಸಿಂದಗಿ :    ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತ್  ಜಿಲ್ಲಾ ಸಮ್ಮೇಳನ ಕುರಿತು  ಹಾಸಿಂಪೀರ ವಾಲೀಕಾರ ಅಧ್ಯಕ್ಷತೆಯಲ್ಲಿ  ಪೂರ್ವಭಾವಿ ಸಭೆ ಜರುಗಿತು.

ಪೂರ್ವಭಾವಿ ಸಭೆ ಕುರಿತು ಮಾತನಾಡಿದ ನಿಕಟಪೂರ್ವ ಪರಿಷತ್ತ ಅಧ್ಯಕ್ಷ ಸಿದ್ದಲಿಂಗ ಚೌದರಿ ಪ್ರತಿಭೆಗಳನ್ನು ಗುರುತಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತ ಮಾಡುತ್ತಾಬಂದಿದೆ. ಇಂದು ಜಿಲ್ಲಾ ಅಧ್ಯಕ್ಷರಾದ ಹಾಸಿಂಪೀರ ವಾಲೀಕಾರ ಅವರ ನೇತೃತ್ವದಲ್ಲಿ ನಡೆಯುವ ಜಿಲ್ಲಾ ಸಮ್ಮೇಳನ ನಮ್ಮ ಸಿಂದಗಿಯಲ್ಲಿಆಗುತ್ತಿರುವುದು ಸಂತಸತಂದಿದೆ. ಆದರೆ ನಾವು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಯಶಸ್ವಿ ಕಾರ್ಯಕ್ರಮ ಕೊಡಲು ಸಾದ್ಯ, ಅವರೇನು ಮಾಡುತ್ತಾರೆ ನೋಡೋಣಾ ಎಂದು ಕುಳಿತರೆ ರಾಜ್ಯಮಟ್ಟದಲ್ಲಿ ಸಿಂದಗಿ ನಗರ ತಲೆತಗ್ಗಿಸ ಬೇಕಾಗುತ್ತದೆ. ಒಂದೊಂದು ಕೆಲಸ ಒಬ್ಬರಿಗೆ  ಹಂಚಿಕೊಡಿ ನನ್ನಗೆ ಯಾವುದೆ ಜವಾಬ್ದಾರಿ ನೀಡಿದರು ನನ್ನ ಸಂಗಡಿಗರೊಂದಿಗೆ ಪ್ರಾಮಾಣಿಕವಾಗಿ ಮಾಡುವೆ. ಮತ್ತು ಸಿಂದಗಿ ನಗರದಲ್ಲಿ ನಡೆಯುತ್ತಿರುವ  ಕಾರಣ ಸಿಂದಗಿ ತಾಲೂಕಿನವರನೇ ಸರ್ವಾ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಹಕ್ಕೋತ್ತಾಯ ಮಾಡಿದರು.

ನಾನು ಅಖಿಲ ಭಾರತ ಮಟ್ಟದ ಹಾಗೂ ವಿವಿಧ ಜಿಲ್ಲಾ ಮಟ್ಟದ ಸಮ್ಮೇಳನ  ಕಾರ್ಯಕ್ರಮಗಳಲ್ಲಿ ಭಾಗವಹಿಸಿದೇನೆ ಊಟದ ಸಮಸ್ಯೆ, ಮತ್ತು ವಸತಿಯ ಸಮಸ್ಯೆ ಬಹುಮುಖ್ಯವಾದವು ಅವುಗಳಲ್ಲಿ ಸ್ವಲ್ಪ ಅಸ್ಥ -ವ್ಯಸ್ಥ ವಾದರು ನಾವು ಪರಿಶ್ರಮದಿಂದ ಮಾಡಿದ ಎಲ್ಲ  ಒಳ್ಳೆಯ ರೀತಿಯಲ್ಲಿ ಮೂಡಿಬಂದ  ಕಾರ್ಯಕ್ರಮಕ್ಕು  ಕೆಟ್ಟದಾಗಿ ಮಾತನಾಡಲು ಅಣಿಯಾಗುತ್ತದೆ ಆದ್ದರಿಂದ ವಸತಿ ಮತ್ತು ಬೋಜನದ ಸಮಿತಿಗಳನ್ನು ಯೋಚಿಸಿ ಜವಾಬ್ದಾರಿ ನೀಡಿ. ಮತ್ತು ಜಿಲ್ಲೆಗೆ ಸಂಭಂದಿಸಿದ ಗೋಷ್ಠಿಗಳು ನಡೆಸುವಂತೆ ನೋಡಿಕೊಳ್ಳಿ ಎಂದು ಎಸ್.ಎಸ್. ಸಾತಿಹಾಳ ತಮ್ಮ ಅಭಿಪ್ರಾಯ ಹಂಚಿಕೊಂಡರು.

banner

ಸಾಹಿತಿಗಾಳದ ಜಯಶ್ರೀ ಕುಲಕರ್ಣಿ  ಅವರು ಅಭಿಪ್ರಯ ವ್ಯಕ್ತಪಡಿಸುತ್ತಾ ಆಯಾ ಆಸಕ್ತಿವುಳ್ಳವರಿಗೆ ಆಯಾ ಸಮಿತಿಗಳಿಗೆ ಜವಾಬ್ದಾರಿ ನೀಡಿ ಆವಾಗಲೇ ಅವರ ಶ್ರಮ ವಹಿಸಿ ಮನಸ್ಸಾಪೂರಕ ದಿಂದ ಕಾರ್ಯನಿರ್ವಹಿಸುವರು. ಈ ಸಮ್ಮೇಳನದಲ್ಲಿ ಮನೆಗೆ ಸೀಮಿತವಾದ ಮಹಿಳೆಯರು ಸ್ವಾವಲಂಬಿ ಯಾಗಬೇಕು, ಸಮಾಜದಲ್ಲಿ ಗುರುತಿಸುವ  ಹಾಗೂ ಶಾಲಾ ಮಕ್ಕಳ ಕುರಿತು  ಗೋಷ್ಠಿಗಳು ಮಾಡಿದರೆ ಉತ್ತಮ ಎಂದರು.

ಹಿಂದಿನಿಂದಲೂ    ಕನ್ನಡ ಸಾಹಿತ್ಯ ಪರಿಷತ್ತ ದಲಿತರಿಗೆ ಕಡೆಗಣನೆ ಮಾಡುತ್ತಾ  ಬಂದಿದೆ,   ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರಿಗೆ ಸರ್ವಾಅಧ್ಯಕ್ಷ ಸ್ಥಾನ ನೀಡಬೇಕು ಎಂದು ಚಂದ್ರಕಾಂತ ಶಿಂಗೆ ಹೇಳಿದರು. ಹೇಳುತ್ತಿದಂತೆ  ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌದರಿ ಪರಿಷತ್ತ  ದಲಿತರಿಗೆ ಕಡೆಗಣನೆ   ಮಾಡುತ್ತಿದೆ ಎಂಬುವ ಮಾತ್ತು ಸರಿಯಾದದಲ್ಲ ಆದರೆ ಈ ಬಾರಿ ದಲಿತರಿಗೆ ನೀಡಬೇಕು ಎಂಬ ಒತ್ತಾಯ  ನನ್ನದು ಆಗಿರುತ್ತದೆ ಎಂದರು.  ಮದ್ಯ ಪ್ರವೇಶಿಸಿದ ಜಿಲ್ಲಾಧ್ಯಕ್ಷರು ನನ್ನ ಅರಿವಿಗೆ ಇರುವಂತೆ  ಸುಮಾರು ಕಡೆಗಳಲ್ಲಿ ದಲಿತರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಕಸಾಪ ಜಿಲ್ಲಾ  ಅಧ್ಯಕ್ಷ  ಹಾಸಿಂಪೀರ ವಾಲೀಕಾರ ಮಾತನಾಡಿ ನಾವು ವಿಜಯಪುರ ನಗರದಲ್ಲಿ ಹಾಗೂ ಮನಗೂಳಿ ಯಲ್ಲಿ ಇಗಾಗಲೇ ಸಮ್ಮೇಳನ ಮಾಡಿದೇವೆ ಅಲ್ಲಿ ನಿರಂತರ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು ಮುಂದೆಬರುವ ಸಿಂದಗಿ ಸಮ್ಮೇಳನದಲ್ಲು ಬೆಳ್ಳಿಗೆ ಇಂದ ರಾತ್ರಿಯ ಕಾರ್ಯಕ್ರಮ ಮುಗಿಯುವವರೆಗು ನಿರಂತರ ಪ್ರಸಾದದ ವ್ಯವಸ್ಥೆ ಮಾಡಬೇಕು. ಮತ್ತು ಮೆರವಣಿಗೆಯಲ್ಲಿ ಕನಿಷ್ಠ ಹತ್ತು ತಂಡಗಳು ಪಾಲ್ಗೂಳಬೇಕು ಎಂದರು. ಖಾಸಗಿ ಶಾಲಾ ಮಕ್ಕಳು ಹಾಗೂ ಶಿಕ್ಷಕ ವೃಂದ್ದ ಭಾಗವಹಿಸಬೇಕು ಗ್ರಾಮಿಣ ಮಟ್ಟದ ಪ್ರತಿಬೆಗಳನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಗೋಷ್ಠಿಗಳಲ್ಲಿ ಹೆಸರು ಕೊಡಲು  ತಾಲೂಕಿನಿಂದ ಎರಡೆರಡು  ಹೆಸರುಕೊಡುವಂತೆ ಹೇಳಿದರು.

ಇದು ಕೇವಲ ಕನ್ನಡ ಸಾಹಿತ್ಯ ಪರಿಷತ್ತ ಕಾರ್ಯಕ್ರಮವಲ್ಲ  ಇದು ಸರಕಾರದ ಕಾರ್ಯಕ್ರಮ ರಾಜಾಧ್ಯಕ್ಷರಿಗೆ ಕ್ಯಾಬಿನೇಟ್ ದರ್ಜೆಯ ಸ್ಥಾನಮನ ವಿರುವುದರಿಂದ ಜಿಲ್ಲಾ ಆಡಳಿತ ಸಂಪೂರ್ಣ ಬಾಗವಹಿಸುತ್ತದೆ ಸ್ಥಳಿಯ ಶಾಸಕರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುತ್ತಾರೆ  ಆದರಿಂದ ಬಹಳ ಎಚ್ಚರಿಕೆಯಿಂದ ಕಾರ್ಯಕ್ರಮ ರೂಪಿಸುವ ಜವಾಬ್ದಾರಿ ಇದೆ. ಜಿಲ್ಲೆಯಿಂದ ಬರುವವರಿಗೆ ಅಂಚೆ ಕಛೇರಿ ಮುಖಾಂತರ ಆಮಂತ್ರಣ ಪತ್ರಿಕೆ ಹಾಕಬೇಕಾಗುತ್ತದೆ ಒಟ್ಟು ಸುಮಾರು 15000 ಆಮಂತ್ರಣ ಪತ್ರಿಕೆ ಮಾಡಸಬೇಕು ಎಂದರು.  ಸರ್ವಾಅಧ್ಯಕ್ಷರ ಆಯ್ಕೆ ಕುರಿತು ಮಾತನಾಡಿದ ಅವರು  ಅದಕ್ಕೆ ಆದಂತಹ ನಿಯಮಾವಳಿಗಳಿವೆ   ಪ್ರತಿ ತಾಲೂಕುಗಳಿಂದ ಕೊಡುವ ಹೆಸರನ್ನು ಕ್ರೂಡಿಕರಿಸಿ ಜಿಲ್ಲಾ ಸಮಿತಿ ಹಾಗೂ ಎಲ್ಲ  ತಾಲೂಕಾ ಅಧ್ಯಕ್ಷರ  ಸಮ್ಮುಖದಲ್ಲಿ ನಿಯಮಾವಳಿಗಳಂತೆ ಆಯ್ಕೆ ಮಾಡಲಾಗುವುದು ಎಂದರು.

ನಾವು ಉತ್ತಮವಾದ ಕಾರ್ಯಕ್ರಮ ನೀಡಿದರು 20 ಪ್ರತಿಶತ ತೆಗಳುವವರು ತಪ್ಪು ಹುಡುಕುವರು ಇರುತ್ತಾರೆ ಅವರ ಬಗ್ಗೆ ತೆಲೆಕೆಡಿಸಿಕೋಳದೆ ಕೆಲಸ ಮಾಡಿ.  ನಾವು ಎಷ್ಠೆ ಜವಾಬ್ದಾರಿಗಳಿಂದ ಮಾಡಿದರು ನಮ್ಮಿಂದಲು ಪ್ರತಿಶತ 10ರಷ್ಟು ತಪ್ಪುಗಳಾಗುತ್ತವೆ ಅದನ್ನು ಮನಿಸಿ ನೀವು ನಮ್ಮ ಜೋತೆಗಿರಬೇಕು ಕಾರ್ಯಕ್ರಮ ಯಶಸ್ವಿ ಗೋಳಿಸಬೇಕು  ಎಂದು ಮನವಿ ಮಾಡಿದರು.

ನಂತರ ಮಾತನಾಡಿದ  ತಾಲೂಕಾ ಕಸಾಪ ಅಧ್ಯಕ್ಷ ರಾಜಶೇಖರ ಕೂಚಬಾಳ  ಮುಂದಿನ ಸಭೆ ಸೋಮವಾರ ಊರಿನ ಹಿರಿಯ ಮಠದಲ್ಲಿ ನಡೆಯುವುದು ಅಂದು ದಿನಾಂಕ ಮತ್ತು ಸ್ಥಳದ ಆಯ್ಕೆ ಮಾಡಲಾಗುವುದೆಂದು ಹೇಳಿ ವೇದಿಕೆ ಮೇಲಿದ್ದ ಗೌರವಾಧ್ಯಕ್ಷ  ಎಂ.ಸಿ. ಪಟ್ಟಣಶೇಟ್ಟಿ ಗೌರವ ಸಲಹೆಗಾರ ಅಶೋಕ ಗಾಯಕವಾಡ, ಗೋಲ್ಲಾಳಪ್ಪಗೌಡ ಮಾಗಣಗೇರಿ, ಆನಂದ ಶಾಬಾದಿ, ಅಶೋಕ ಸುಲ್ಪಿ, ಚಂದ್ರಕಾಂತ ಶಿಂಗೆ, ಅಶೋಕ ತೇಲ್ಲೂರ, ಹಾಗೂ ಶಾರದಾ  ಬಟಗೇರಿ ಇವರಿಗೆ ಹಗೂ ಕಾನಿಪ, ಕಸಾಪ ಸದಸ್ಯರು ಉರಿನ ಪ್ರಮುಖರಿಗೆ  ವಂದಿಸಿದರು. ಭೀಮಣ್ಣ ಹೇರೂರ  ಸ್ವಾಗತಿಸಿದರೆ ಸಾಯಬಣ್ಣ ಪುರದಾಳ ನಿರೂಪಿಸಿದರು.

 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news