
ಸಿಂದಗಿ : ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಿಂದಗಿ ನಗರದಲ್ಲಿ ೩ನೇ ಬಾರಿಗೆ ರಂಗಸಾರಂಗ ಕಲಾ ವೇದಿಕೆ (ರಿ) ಸಿಂದಗಿ ಇವರ ನೇತೃತ್ವದಲ್ಲಿ ಹಮ್ಮಿಕೋಳಲಾಗಿದೆ. ಈ ವರ್ಷ ನಮ್ಮನ್ನಗಲಿದ ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ನೆನಪಿನ ಅಂಗವಾಗಿ ಕಾರ್ಯಕ್ರಮ ಮಾಡಲಾಗುವುದು.
ಸಿಂದಗಿಯಲ್ಲಿ ಈ ಹಿಂದೆ ನಡೆದಿರುವ ಎರಡು ಕಾರ್ಯಕ್ರಮಗಳ ಕುರಿತು ನನಗೆ ಅವಕಾಶ ನೀಡುತ್ತ ಬಂದಿರುವ ರಾಜ್ಯದ ಪ್ರತಿಷ್ಠಿತ ಚಾನಲ್ “ ಜೀ ಕನ್ನಡ ” ವಾಹಿನಿಯ ಹಲವಾರು ಸದಸ್ಯರುಗಳು ನಮ್ಮ ಸಿಂದಗಿಯ ಕಾರ್ಯಕ್ರಮ ಕುರಿತು ಮೇಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮೂರಿನ ಸಣ್ಣ ಕಲಾವಿದನಾಗಿ ಇಂತಹ ದೊಡ್ಡ ಕಾರ್ಯಕ್ರಮ ಮಾಡುತ್ತಿರುವುದು ಸಂತಸವಿದೆ. ನನಗೆ ಕಾರ್ಯಕ್ರಮದ ಟಿಕೇಟ್ ಪ್ರತಿಯೊಬ್ಬರು ಪಡೆದು ಮನೆಯ ಮಗನಿಗೆ ಪ್ರೋತ್ಸಾಹಿಸಿ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಚಾನಲ್ ಗಳಲ್ಲಿ ನಟಿಸುತ್ತಿರುವ ಹಲವಾರು ಕಲಾವಿದರು ಆಗಮಿಸುತ್ತಿದ್ದಾರೆ ಕಾಮಿಡಿ ಕಿಲಾಡಿಗಳು, ಡ್ರಾಮಾ ಜೂನಿರ‍್ಸ್, ಹಾಗೂ ಸರಿಗಮಪ ದ ಕಲಾವಿದರೊಂದಿಗೆ ಉತ್ತರ ಕರ್ನಾಟಕದ ಯುವ ಪ್ರತಿಬೆ ಶಿವಪುತ್ರ ಹಾಗೂ ತಂಡದವರು ಭಾಗಿಯಾಗುತ್ತಿದ್ದಾರೆ. ಕಾರ್ಯಕ್ರಮಕ್ಕೆ ನಾಲ್ಕು ಹಂತದ ಟಿಕೇಟ್ ದರ ನಿಗದಿ ಮಾಡಿದ್ದು ಟಿಕೇಟ್‌ಗಾಗಿ 9845286386 / 9591103280 / 8050184143 ಶಿವಾನಂದ ಸಿಂದಗಿ ಹಾಗೂ ಗುರು ನಾಟೀಕಾರ ಅವರಿಗೆ ಸಂಪರ್ಕಿಸಬಹುದಾಗಿದೆ.

ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಬಂದು ಕಾರ್ಯಕ್ರಮ ಮಾಡಿ ದುಡ್ಡು ತೆಗೆದುಕೊಂಡು ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ ಎಂಬ ಪತ್ರಕರ್ತರು ಮಾಡಿದ ಪ್ರಶ್ನೆಗೆ ಉತ್ತರಿಸಿದ ಶಿವಾನಂದ ನಾನು ದೂರದ ಬೆಂಗಳೂರಿನಲ್ಲಿ ನಟನೆ ನಂಬಿ ಜೀವನ ಮಾಡುತ್ತಿರುವವನು ನನ್ನ ಹನ್ನೇರಡು ವರ್ಷದ ಪರಿಶ್ರಮದಿಂದ ಇಗ ಪರದೆ ಮೇಲೆ ಬಂದು ಹೋಗುತ್ತಿರುವೆ, ಪರದೆ ಮೇಲೆ ಇನ್ನು ಸಂಪೂರ್ಣವಾಗಿ ನಾನು ನಿಂತಿಲ್ಲ, ನನ್ನಗೆ ಸಿಂದಗಿ ನಗರದಲ್ಲಿರುವ ನನ್ನ ತಂದೆ-ತಾಯಿ ಹಾಗೂ ಸ್ನೇಹಿತರೊಂದಿಗೆ ಕೆಲ ಸಮಯ ಇರಬೇಕು ಎಂಬ ಕಾರಣದಿಂದ ಕಾರ್ಯಕ್ರಮ ಆಯೋಜನೆ ಮಾಡುತ್ತನೆ ಹೊರತು ಬೇರೆ ಉದ್ದೇಶ ಇಲ್ಲ. ಕಾರ್ಯಕ್ರಮಕ್ಕೆ ೧೫ ರಿಂದ ೧೬ ಲಕ್ಷ ರೂ ಖರ್ಚಾ ಆಗುತ್ತದೆ ಅದನ್ನು ಭರಿಸಲು ಯಾರಾದರು ಒಪ್ಪಿದರೆ ಕಾರ್ಯಕ್ರಮದ ನೇತೃತ್ವ ವಹಿಸಲಿ, ಅತ್ಯಂತ ಖುಷಿ ಇದೆ. ನನ್ನಗೆ ಅಷ್ಟೊಂದು ಹಣ ಹೊಂದಾಣಿಕೆ ಆಗದೆ ಇದ್ದರೆ ನಾನು ಸಿಂದಗಿಯ ಜನತೆಯ ಹತ್ತಿರವೆ ಹಣ ಕೇಳಬೇಕು ಅಷ್ಟೊಂದು ದುಡ್ಡು ವೈಯಕ್ತಿಕವಾಗಿ ಹಾಕುವ ಶಕ್ತಿ ನನ್ನಲ್ಲಿ ಇಲ್ಲ ಎಂದು ಶಿವಾನಂದ ಹೇಳಿದರು. ಬೀಮಾಶಂಕರ ಮೊರಟಗಿ, ಪೀರು ಕೇರೂರ, ರಾಮು ಮೋರಟಗಿ ಪತ್ರಿಕಾಗೋಷ್ಠಿಯಲ್ಲಿದ್ದರು.
