ಶಾಂತವೀರ ನಗರದ ಮಂದಾರ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ಪತ್ರಿಕಾ ವಿತರಕರ ದಿನದಂದು ಪತ್ರಿಕಾ ವಿತರಕ ಸೇನಾನಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು ಪತ್ರಿಕೆಗಳು ಹುಟ್ಟಿದಾಗಿನಿಂದ ವಿತರಕರ ಕಾರ್ಯವು ಆರಂಭಗೊಂಡಿದೆ. ಅಂದಿನಿಂದ ಇಂದಿನವರೆಗೆ ಅದೆಂಥದ್ದೇ ಕಷ್ಟ ಬಂದರೂ, ಮನೆಯಲ್ಲಿ ಮದುವೆ ಮುಂಜಿ ಕಾರ್ಯಕ್ರಮವಿರಲಿ, ಸಂಬಂಧಿಕರ ಕಾರ್ಯಕ್ರಮವಿರಲಿ ವಿತರಕರಿಗೆ ಹೋಗುವುದು ಆಗುವುದಿಲ್ಲ. ಪತ್ರಿಕೆಗಳು ಮತ್ತು ಓದುಗರ ನಡುವಿನ ಸೇತುವೆಯಾಗಿರುವ ಇವರು ಹಲವು ದಶಕಗಳಿಂದಲೂ ಉಳಿಸಿಕೊಂಡು ಬಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಇವ ಸಾಹಿತ್ಯ ಅಶೋಕ ಬಿರಾದಾರ ಮಾತನಾಡಿ ಓದುಗರ ಅಪೇಕ್ಷೆ ಅಭಿರುಚಿಗೆ ತಕ್ಕಂತೆ ಪತ್ರಿಕೆಗಳು ಅವರ ಮನೆಯ ಬಾಗಿಲಿಗೆ ಸೂರ್ಯೋದಯಕ್ಕೂ ಮುನ್ನ ತಲುಪಿಸುವ ಕಾರ್ಯ ಮತ್ತು ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡುವಲ್ಲಿ ಇವರ ಕಾರ್ಯ ಗಮನಾರ್ಹವಾದುದು ಎಂದರು.
ಈ ಸಂದರ್ಭದಲ್ಲಿ ವಿತರಕರಾದ ನಿಂಗಣ್ಣ ಯಾಳಗಿ, ಲಿಂಗಣ್ಣ ಜಕ್ಕನಗೌಡ, ಗಂಗಾಧರ ಮಡಿಕೇಶ್ವರ, ಶಂಕರ ಮೋದಿ, ಶಿವಲಿಂಗ ಹೂಗಾರ, ಮುತ್ತು ಪೂಜಾರಿ ಮತ್ತು ಜಗದೇವಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕ ಮಹಾಂತೇಶ ನೂಲನವರ ವಂದಿಸಿದರು ಸಭಿಯಾ ಮರ್ತುರ, ಸೋಮಶೇಖರ, ಅಭಿಷೇಕ ಚೌಧರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
