ಇಲ್ಲಿ ಎಲ್ಲ ವರ್ಗಗಳಿಗೆ ಸಿಗುವ ಗೌರವಯುತ ಸ್ಥಾನ -ಮಾನಗಳು ಬೇರೆ ಯಾವ ದೇಶದಲ್ಲೂ ಸಿಗಲಾರದು, ವಿಶ್ವ ಮಟ್ಟದಲ್ಲಿ ಭಾರತ ಮತ್ತಷ್ಟು ಬಲಿಷ್ಠ ವಾಗಬೇಕಾದರೆ ಮಕ್ಕಳಲ್ಲಿ ಸಂವಿಧಾನದ ಮಹತ್ವ ಪರಿಚಯಿಸ ಬೇಕಾಗಿದೆ.
ಸಿಂದಗಿ : ಪಟ್ಣಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ.ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಸನ್ಮಾನ ಸ್ವೀಕರಿಸಿ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗ ಬೇಕಾದರೆ ಸಂವಿಧಾನ ವ್ಯವಸ್ಥೆಗೆ ಗೌರವ ಯುತವಾಗಿ ನಡೆದು ಕೊಳ್ಳಬೇಕು.
ಶೋಷಿತ, ನಿರ್ಗತಿಕರು, ಧೈರ್ಯದಿಂದ ಕಾಶ್ನ್ಯಾಮೀರದಿಂದ ಕನ್ಯಾಕುಮಾರಿ ವರೆಗೆ ನಿರ್ಭಯವಾಗಿ ಒಡಾಡುತ್ತಿದ್ದಾರೆ ಅಂದರೆ ಅದು ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ. ಸಮಾಜದ ಪ್ರತಿ ಹಿರಿಯ ವ್ಯಕ್ತಿ ಸಮಾಜದ ಒಳಿತು-ಕೆಡುಕುಗಳ ಜವಾಬ್ದಾರಿ ವಹಿಸಿದಾಗ ಮಾತ್ರ ಸಾಮಾಜಿಕ ಸಾಮರಸ್ಯ ಮೂಡಲು ಸಾಧ್ಯ.
ವಿಶ್ವ ಮಟ್ಟದಲ್ಲಿ ಭಾರತ ಮತ್ತಷ್ಟು ಬಲಿಷ್ಠ ವಾಗಬೇಕಾದರೆ ಸಂವಿಧಾನದ ಅರಿವು ಮಕ್ಕಳಲ್ಲಿ ಮೂಡಿಸಬೇಕಿದೆ. ವಿಶ್ವಾದ್ಯಂತ ಹುಡುಕಿದರು ಭಾರತದಂತಹ ಗೌರವಯುತ ದೇಶ ಮತ್ತೊಂದಿಲ್ಲ. ಜಾತಿ ಧರ್ಮ ಬಿಟ್ಟು ಒಗ್ಗಟ್ಟಿನಿಂದ ಸಾಗಿದರೆ ಅದುವೆ ದೇಶದ ಒಳಿತು, ನಮ್ಮ ಕಾರ್ಯ, ಮಾತು ಇವುಗಳೇ ದೇಶದ ಘನತೆ ಎತ್ತಿ ತೋರಿಸುತ್ತದೆ. ನಮ್ಮ ಜವಾಬ್ದಾರಿಗಳನ್ನು ಅರಿತು ಸಹಬಾಳ್ವೆಯಿಂದ ಬಾಳಿದರೆ ಅದೇ ನಮ್ಮ ದೇಶದ ಹೆಮ್ಮೆ.
ಸಿಂದಗಿ ಕ್ಷೇತ್ರದ ಜನರ ಪ್ರೀತಿ-ವಿಶ್ವಾಸದ ಪಲವಾಗಿ ಇಂದು ನಿಮ್ಮ ಗೌರವ ಸ್ವೀಕರಿಸಿದೇನೆ. ಈ ಗೌರವ ಸಲ್ಲಿಸಿ ಕೋಟ್ಟ ಜವಾಬ್ದಾರಿ ಉಳಿಸಿಕೊಂಡು ಹೋಗುವ ಮಾರಾಯ ಎಂಬಂತೆ ಒತ್ತಿ ಹೇಳುತ್ತಿದೆ. ಆ ಗೌರವ ಯುತವಾದ ಸ್ಥಾನದ ಜವಾಬ್ದಾರಿ ಪ್ರಾಮಾಣಿಕವಾಗಿ ನಿಭಾಯಿಸುವ ಪ್ರಯತ್ನ ಮಾಡುವೆ ಎಂದರು.
ನಂತರ ಅಧ್ಯಕ್ಷತೆ ವಹಿಸಿದ ಟಿ.ಎಸ್.ಪಿ. ಮಂಡಳಿಯ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ ಮಾತನಾಡಿ ಉಪ ಚುನಾವಣೆಯ ಜವಾಬ್ದಾರಿ ಹೊತ್ತು ಬಂದಿದ್ದ ಯು.ಟಿ.ಖಾದರ್ ಅವರು ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ನೀಡಿದ ಮಾತನ್ನು ಈಡೇರಿಸಿದ್ದರೆ ಮಾತ್ರ ಗೆಲುವು ಸಾಧ್ಯ ಎಂದು ನನ್ನಗೆ ಹೇಳಿದನ್ನು ಕೇಳಿ ಕಲಿತಿರುವೆ. ಒತ್ತಡದ ಸಮಯದಲ್ಲೂ ನಮ್ಮ ಸಂಸ್ಥೆಗೆ ಆಗಮಿಸಿ ನಮ್ಮ ಅಲ್ಪ ಆತಿಥ್ಯ ಸ್ವೀಕರಿಸಿದ ಗೌರವಯುತ ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರಿಗೆ ಧನ್ಯವಾದಗಳು ಹೇಳಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್, ವೈದ್ಯ ಶಾಂತವೀರ ಮನಗೂಳಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕನ್ನಡಪ್ರಭ ಏಷ್ಯಾನೇಟ್ ಸುವರ್ಣ ನ್ಯೂಸ್ ಅವರು ನೀಡಿದ್ದ ರಾಜ್ಯ ಮಟ್ಟದ ಹೆಲ್ತ್ ಕೇರ್ ಎಕ್ಸೆಲೆನ್ಸ್ ಪ್ರಶಸ್ತಿಗೆ ಭಾಜನರಾದ ವೈದ್ಯ ಶಾಂತವೀರ ಮನಗೂಳಿ ಅವರಿಗೆ ಗೌರವ ಸನ್ಮಾನ ಮಾಡಿದರು. ಅವರ ಯಶಸ್ಸಿಗೆ ಕಾರಣಿ ಭೂತರಾದ ಅವರ ಶ್ರೀಮತಿ ವೈದ್ಯ ಸಂಧ್ಯಾ ಮನಗೂಳಿ ಹಾಗೂ ಕೋವೀಡ್ ಸಂದರ್ಭದಲ್ಲಿ ಹಲವು ಬಗೆಯ ಬಹುಮುಖ್ಯ ಸಲಕರಣೆಗಳ ಕೊರತೆ ಬೀಳದಂತೆ ನೋಡಿಕೊಂಡ ರಫೀಕ್ ಕಾಣೆ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ, ಅಂಜುಮನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಯಾರ ಜಿ.ಪಂಸಿ.ಇ.ಒ ರಾಹುಲ ಶಿಂದೆ, ಇಂಡಿ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ, ಪ್ರಾಚಾರ್ಯ ಬಿ.ಜಿ.ಪಾಟೀಲ ಹಾಗೂ ಉಪನ್ಯಾಸಕ ಸಿದ್ದಲಿಂಗ ಕಿಣಗಿ ಕಾರ್ಯಕ್ರಮ ನಿರ್ವಹಿಸಿದರು. ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
