
ಸಿಂದಗಿ: ಬಿಜೆಪಿಯ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಹಾಗೂ ವಿಜಯಪುರ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಅವರ ಹುಟ್ಟು ಹಬ್ಬದ ತದನಿಮಿತ್ಯ ಭಾಜಪ ಸಿಂದಗಿ ಮಂಡಲದ ಹಾಗೂ ಬಿ.ವೈ ವಿಜಯೇಂದ್ರ ಅವರ ಅಭಿಮಾನಿಗಳು ಕಾರ್ಯಕರ್ತರು ಶನಿವಾರದಂದು ಸಿಂದಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ಹಾಗೂ ಬ್ರೆಡ್ ವಿತರಿಸಿ ಆಚರಿಸಿದರು.
ಬಿಜೆಪಿ ಮುಖಂಡ ಮಹಾಂತೇಶ ಸಾತಿಹಾಳ ಮಾತನಾಡಿ ಇಬ್ಬರು ನಾಯಕರು ಅತ್ಯಂತ ಸರಳ ವ್ಯಕ್ತಿತ್ವ ಹೊಂದಿದ್ದು ಬಿ.ವೈ ವಿಜಯೇಂದ್ರ ಮುಂದಿನ ದಿನಮಾನಗಳಲ್ಲಿ ರಾಜ್ಯದ ಅತ್ಯುನತ್ತ ಹುದ್ದೆಗೆ ತಲುಪಲಿ, ಅವರು ಅತ್ಯಂತ ಸರಳ ಸ್ವಭಾವದ ವ್ಯಕ್ತಿಯಾಗಿದ್ದು ಅವರ ಯುವಕರೊಂದಿಗಿನ ಸ್ನೇಹತ್ವದಿಂದ ಕಾರ್ಯಕರ್ತರ ನಾಡಿ ಮಿಡಿತವಾಗಿ ಕೆಲಸಮಾಡುವ ಶಕ್ತಿ ಅವರಿಗೆ ಭಗವಂತ ಕರುಣಿಸಲಿ ಎಂದರು.
ನಂತರ ಮಾತನಾಡಿದ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಒಬ್ಬರು ರಾಜ್ಯ ನಾಯಕರು ಇನ್ನೋಬರು ಜಿಲ್ಲಾ ನಾಯಕರು ರಾಜ್ಯ ನಾಯಕರಾದ ಬಿ.ವೈ ವಿಜಯೇಂದ್ರ ಅವರು ಇದುವರೆಗು ಅವರಿಗೆ ಪಕ್ಷ ನೀಡಿದ ಕೆಲಸಗಳು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕರ್ತರ ಹೃದಯ ಗೆದ್ದರೆ, ಜಿಲ್ಲಾ ನಾಯಕರಾದ ಆರ್.ಎಸ್.ಪಾಟೀಲ ಕೂಚಬಾಳ ಜಿಲ್ಲೆಯ ಮಗನಾಗಿ ಬೆಳೆಯುತ್ತಿದ್ದಾರೆ ನಮ್ಮಂತಹ ಎಷ್ಟೊ ರಾಜ್ಯದ ಕಾರ್ಯಕರ್ತರಿಗೆ ಸ್ಪೂರ್ತಿಯಾಗಿದ್ದಾರೆ ಅವರು ಇನ್ನಷ್ಟು ಉತ್ತಂಗಕ್ಕೆ ಏರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೆನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಡಾ. ಅನಿಲ ನಾಯಕ್, ಸುದರ್ಶನ ಜಂಗಣ್ಣಿ, ಸಂಗನಗೌಡ ಬಿರಾದಾರ, ಶಿವಪ್ರಸಾದ ಮಂಗಲಗಿ, ಶೇಖರ ವಾಲಿ, ನವೀನಕುಮಾರ ಮಂಗಲಗಿ, ಶಂಕರಗೌಡ ಪಾಟೀಲ (ರಾಜನಾಳ), ಸಂಗಮೇಶ ಬಿರಾದಾರ, ಸೋಮನಗೌಡ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು

