
ಸಿಂದಗಿ: ನವೆಂಬರ್ 8ರಂದು ಸಿಂದಗಿ ನಗರಕ್ಕೆ 2023ರ ಚುನಾವಣೆಯ ಸಂಘಟನಾತ್ಮಕ ವಿಷಯವಾಗಿ ಚರ್ಚಿಸಿ ಸಮಾರಂಭ ನಡೆಸಲು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಅರುಣ ಸಿಂಗ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಹಾಗೂ ರಾಜ್ಯ ನಾಯಕರು ಆಗಮಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಪುರಸಭೆಯ ಚುನಾಯಿತ ಪ್ರತಿನಿಧಿಗಳು, ನಾಮನಿರ್ದೇಶನ ಸದಸ್ಯರು, ಪ.ಪಂ ಸದಸ್ಯರು, ಗ್ರಾಮ ಪಂಚಾಯಿತ ಸದಸ್ಯರು, ಮಹಾ ಶಕ್ತಿಕೇಂದ್ರದ ಪ್ರಮುಖರು, ಶಕ್ತಿಕೇಂದ್ರದ ಪ್ರಮುಖರು, ಬೂತ್ ಅಧ್ಯಕ್ಷರು, ಪೇಜ್ ಪ್ರಮುಖರು, ಎಲ್ಲ ನಾಮ ನಿರ್ದೇಶಿತ ಸದಸ್ಯರು ಒಟ್ಟು ಐದು ಸಾವಿರ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ತಾಲೂಕಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಜರುಗುವುದು ಎಂದು ಶಾಸಕ ರಮೇಶ ಭೂಸನೂರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ, ಮಾಜಿ ಲಿಂಬೆ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಅಶೋಕ ಅಲ್ಲಾಪುರ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ ಪೂಜಾರಿ, ಬಿಜೆಪಿ ಮುಖಂಡ ಸಿದ್ದು ಪಾಟೀಲ ಹಾಗೂ ಮಾಧ್ಯಮ ಪ್ರಮುಖ ಕೆಡಿಪಿ ಸದಸ್ಯ ಶಿವಕುಮಾರ ಬಿರಾದಾರ ಉಪಸ್ಥಿತರಿದ್ದರು.

