Home News ವಿಶ್ವ ಆಯೋಡಿನ್ ಕೊರತೆ ನಿಯಂತ್ರಣ ದಿನ ಆಚರಣೆ

ವಿಶ್ವ ಆಯೋಡಿನ್ ಕೊರತೆ ನಿಯಂತ್ರಣ ದಿನ ಆಚರಣೆ

by vegadhut@gmail.com.
0 comments

ಸಿಂದಗಿ: ಅಯೋಡಿನ್ ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಅತ್ಯಗತ್ಯ ಪೋಷಕಾಂಶವಾಗಿದೆ. ಇದರ ಮಹತ್ವ ಸಾರುವ ಮತ್ತು ಅಯೋಡಿನ್‌ಯುಕ್ತ ಆಹಾರ ಸೇವನೆ ಉತ್ತೇಜಿಸುವ ದೃಷ್ಟಿಯಿಂದ ವಿಶ್ವ ಅಯೋಡಿನ್ ಕೊರತೆ ನಿಯಂತ್ರಣ ದಿನವಾಗಿದೆ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಕುಲಕರ್ಣಿ ಹೇಳಿದರು.
ನಗರದ ಶ್ರೀಧರ ವಿದ್ಯಾವರ್ಧಕ ಸಂಸ್ಥೆಯ ಮೇಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಆಯೋಡನ್ ಕೊರತೆ ನಿಯಂತ್ರಣ ದಿನ ಹಾಗೂ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ದಿನ ನಾವು ಸೇವಿಸುವ ಆಹಾರದಲ್ಲಿಯೇ ಅಯೋಡಿನ್ ಪೋಷಕಾಂಶವಿರುತ್ತದೆ. ಆದರೆ ಇತ್ತೀಚೆಗೆ ಕೆಲವರಿಗೆ ಅಯೋಡಿನ್ ಕೊರತೆ ಕಂಡು ಬರುತ್ತಿದೆ. ಪ್ರತಿಯೊಬ್ಬರು ತಮ್ಮ ದಿನ ನಿತ್ಯದ ಆಹಾರದಲ್ಲಿ ಅಯೋಡಿನ್ ಪೋಷಕಾಂಶ ಒಳಗೊಂಡಿರುವ ಉಪ್ಪನ್ನು ಬಳಸುವುದರಿಂದ ಅಯೋಡಿನ್ ಕೊರತೆಯನ್ನು ನೀಗಿಸಬಹುದು. ಸಾಮಾನ್ಯವಾಗಿ ವಯಸ್ಕರಿಗೆ ಒಂದು ದಿನಕ್ಕೆ 150 ಮೈಕ್ರೋ ಗ್ರಾಂ, ಗರ್ಭಿಣಿ, ಬಾಣಂತಿಯರಿಗೆ 200 ಮೈಕ್ರೋ ಗ್ರಾಂ, 11 ತಿಂಗಳವರೆಗಿನ ಮಗುವಿಗೆ ೫೦ ಮೈಕ್ರೋ ಗ್ರಾಂ, 1 ವರ್ಷದಿಂದ 5 ವರ್ಷದವರೆಗಿನ ಮಕ್ಕಳಿಗೆ 90 ಮೈಕ್ರೋ ಗ್ರಾಂ ಹಾಗೂ 5 ರಿಂದ 16 ವಯಸ್ಸಿನ ಮಕ್ಕಳಿಗೆ ೧೨೦ ಮೈಕ್ರೋ ಗ್ರಾಂ. ಅಯೋಡಿನ್ ಅಗತ್ಯವಿದೆ ಎಂದರು.

ಬಾಕ್ಸ್: ಅಯೋಡಿನ್ ಪೋಷಕಾಂಶ ಒಳಗೊಂಡಿರುವ ಉಪ್ಪನ್ನು ಬಿಸಿಲಿಗೆ ಅಥವಾ ಗಾಳಿಗೆ ಬಹಳಕಾಲ ತೆರೆದಿಟ್ಟರೆ ಅದರಲ್ಲಿರುವ ಅಯೋಡಿನ್ ಅಂಶವು ಆವಿಯಾಗಿ ಹೋಗುತ್ತದೆ. ಅದನ್ನು ಪ್ಲಾಸ್ಟಿಕ್, ಗಾಜು ಅಥವಾ ಪಿಂಗಾಣಿ ಡಬ್ಬಿಯಲ್ಲಿ ಹಾಕಿ ಬಿಗಿಯಾಗಿ ಮುಚ್ಚಿಡಬೇಕು. ಅಯೋಡಿನ್ ಯುಕ್ತ ಉಪ್ಪನ್ನು ಆದಷ್ಟು ಬೇಗ ಉಪಯೋಗಿಸುವುದು ಉತ್ತಮ.
ಮಹಿಳಾ ಸಾಂತ್ವನ ಸ್ವಯಂ ಸೇವಕಿ: ರಶ್ಮಿ ನೂಲಾನವರ
ಇದೇ ಸಂದರ್ಭದಲ್ಲಿ ವಸತಿ ನಿಲಯದ ಮೇಲ್ವಿಚಾರಕಿ ಜಯಶ್ರೀ ಬಿರಾದಾರ, ಮಹಿಳಾ ಸಾಂತ್ವನ ಸ್ವಯಂ ಸೇವಕಿ: ರಶ್ಮಿ ನೂಲಾನವರ ಆರೋಗ್ಯ ನೀರಿಕ್ಷಣಾಧಿಕಾರಿ ವಿರೆಂದ್ರ ಪಾವಡೆ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ವಿದ್ಯಾರ್ಥಿ ರೂಪಾ ಪೂಜಾರಿ ಸ್ವಾಗತಿಸಿ ನಿರೂಪಿಸಿದರು. ಅಕ್ಷತಾ ಕೋಟಿಕಾನಿ ಪ್ರಾರ್ಥಿಸಿದರು. ಶೈಲಜಾ ಪೂಜಾರಿ ವಂದಿಸಿದರು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news