
ಸಿಂದಗಿ : ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ವಿಮಲಕಾಂತ ಧರಣೇಂದ್ರ ಪಾಟೀಲ ಅಧಿಕಾರ ಸ್ವೀಕರಿಸಿದರು.
ಮಹಾವಿದ್ಯಾಲಯದಲ್ಲಿ ಜರುಗಿದ ನಿವೃತ್ತ ಪ್ರಾಚಾರ್ಯ ವಿಜಯಕುಮಾರ ಜಿರ್ಲಿ ಅವರ ವೃತ್ತಿಯಿಂದ ಬಿಳ್ಕೋಡುವ ಸರಳ ಸಮಾರಂಭ ನಡೆಯಿತು.
ನೂತನ ಪ್ರಾಚಾರ್ಯ ವಿಮಲಕಾಂತ ಧರಣೇಂದ್ರ ಪಾಟೀಲ ಅವರು ಅಧಿಕಾರ ಸ್ವೀಕರಿಸಿ ಮಾತನಾಡಿ, ಪರಮಪೂಜ್ಯ ಚೆನ್ನವೀರ ಸ್ವಾಮೀಜಿಯರ ಕೃಪಾಶೀರ್ವಾದೊಂದಿಗೆ ಸಂಸ್ಥೆಯ ಚೇರಮನ್ನರಾದ ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಈ ಭಾಗವನ್ನು ಶೈಕ್ಷಣಿಕ ಕೇಂದ್ರವನ್ನಾಗಿಸುವ ಸಂಕಲ್ಪ ತೊಟ್ಟಿದ್ದಾರೆ. ಗುಣಮಟ್ಟಕ್ಕೆ ಮತ್ತೊಂದು ಹೆಸರಾಗಿ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಇಂದು ಸಮಾಜದಲ್ಲಿ ಗುರುತಿಸಿಕೊಂಡಿದೆ. ಎಲ್ಲರೂ ಜತೆಜತೆಯಾಗಿ ಹೆಜ್ಜೆ ಹಾಕಿದರೆ ಸಂಸ್ಥೆ ಮತ್ತಷ್ಟು ಉನ್ನತಿಯನ್ನು ಸಾಧಿಸುವುದರಲ್ಲಿ ಅನುಮಾನವಿಲ್ಲ. ಈ ಸಂಸ್ಥೆ ಅತ್ಯಂತ ನನ್ನ ಮೇಲೆ ವಿಶ್ವಾಸ ಇರಿಸಿ ಗುರುತರ ಜವಾಬ್ದಾರಿ ನೀಡಿದೆ ಇದನ್ನು ನಿರ್ವಹಿಸುವಲ್ಲಿ ಎಲ್ಲರ ಸಹಕಾರÀ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ನೆಹರು ಪೋರವಾಲ, ಆಡಳಿತಾಧಿಕಾರಿ ಬಿ.ಜಿ.ಮಠ, ಸಿ.ಎಂ.ಪೂಜಾರ, ನಿವೃತ್ತ ಪ್ರಾಚಾರ್ಯ ವಿಜಯಕುಮಾರ ಜಿರ್ಲಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ವರ್ಗ ಇದ್ದರು.

