ಸಿಂದಗಿ : ಪಟ್ಟಣದಲ್ಲಿರುವ ತಾಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಅಶೋಕ ಮನಗೂಳಿ ದಿಢೀರ ಬೇಟಿ ನೀಡಿ ಅಲ್ಲಿನ ವಾಸ್ತವರೂಪ ಪರಿಶೀಲನೆ ಮಾಡಿದರು. ಅಲ್ಲಿನ ವ್ಯವಸ್ಥೆಗೆ ಕೋಪಗೊಂಡ ಶಾಸಕರು ಅಧಿಕಾರಿಗಳ ಹಾಜರಿ ಪುಸ್ತಕಗಳನ್ನು ಪರಿಶೀಲಿಸಿ ಅನಧಿಕೃತ್ತ ಗೈರು ಹಾಜರಾತಿಯಲ್ಲಿರುವ ವೈದ್ಯರು, ಗುತ್ತಿಗೆ ಆದಾರದ ಸಿಬ್ಬಂದಿಗಳು , ಮತ್ತು ಡಿ-ದರ್ಜೆ ಸಿಬ್ಬಂದಿಗಳು ಇನ್ನು ಮುಂದೆ ಕೆಲಸದಲ್ಲಿ ಬೇಜವಾಬ್ದಾರಿತನ ಮಾಡಿದರೆ ಅವರು ಸಾರ್ವಜನಿಕ ಆಸ್ಪತ್ರೆಯಿಂದ ಗೇಟ್ ಪಾಸ್ ಕೋಡಬಹುದು ಯೋಚಿಸಿ ಕೆಲಸಮಾಡಿ ಎಂದು ಸಿಬ್ಬಂದಿಗಳಿಗೆ ಖಾರವಾಗಿ ಎಚ್ಚರಿಸಿದರು.
ಶಾಸಕರ ಪರಿಶೀಲನೆ ವೇಳೆ ಸಹಾಯಕ ಆಡಳಿತ ಅಧಿಕಾರಿ ವ್ಹಿ.ಆರ್.ಹೋಟಗಿಕರ, ಎಂ.ಎಸ್.ಸರ್ಜನ್ ಅಧಿಕಾರಿ ಎಸ್.ಕೆ. ದೇಶಮುಖ, ರಾಜಶೇಖರ ಸಿ.ಎಸ್. ಮಕ್ಕಳ ತಜ್ಞರು, ವೈದ್ಯರು ಅನಧಿಕೃತ್ತ ಗೈರಾಗಿದ್ದು ಅವರ ಹಾಜರಾತಿಯಲ್ಲಿ ಆಪಸೆಂಟ್ ಹಾಕಲು ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ ಗುತ್ತಿಗೆ ಆದಾರದ ಮೇಲಿರುವ ಭಾರತಿ ಜಂಬಗಿ, ಸತೀಶ ಸವನಳ್ಳಿ, ಆನಂದ ಚನ್ನಪ್ಪ, ಡಿ-ದರ್ಜೆ ನೌಕರ ಪ್ರಕಾಶ ವಗ್ಗರ ಅನಧಿಕೃತ್ತ ಗೈರಾಗಿದ್ದರು ಅವರಿಗೆ ಕೋನೆ ವಾರ್ನಿಂಗ್ ನೀಡುವಂತೆ ಎಚ್ಚರಿಕೆ ನೀಡಿದರು. ಎಕ್ಸ-ರೇ ಕೊಠಡಿಗೆ ಬೇಟಿ ನೀಡಿದಾಗ ಅಧಿಕಾರಿ ಎಸ್.ಎಂ.ಲಿಮಕರ್ ಬದಲು ಬೇರೆ ಹುಡುಗನಿಗೆ ಕಾರ್ಯನಿರ್ವಹಿಸಲು ಇಡಲಾಗಿದೆ ಅವರ ಹೆಸರಿಗೆ ತಿಂಗಳ ವೇತನ ಪಾವತಿಯಾಗುತ್ತದೆ ಮತ್ತು ಅವರು ಸುಮಾರು ಎರಡು ವರ್ಷದಿಂದ ಕೆಲಸಕ್ಕೆ ಬರದೇ ಇರುವುದು ಅಲ್ಲಿ ಶಾಸಕರಿಗೆ ಕಂಡುಬಂತು. ಅಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗೆ ಸುಮಾರು ತಿಂಗಳುಗಳಿಂದ ವೇತನವೇ ಆಗಿಲ್ಲ.
ನಂತರ ಸಾರ್ವಜನಿಕ ಆಸ್ಪತ್ರೆಯ ವ್ಯವಸ್ಥೆ ಕುರಿತು ವರದಿಗಾರರೊಂದಿಗೆ ಮಾತನಾಡಿದ ಶಾಸಕ ಮನಗೂಳಿ ನನ್ನ ಅವದಿಯಲ್ಲಿ ಎನು ಸಾಧಿಸುತ್ತಿನೊ ಬಿಡುತ್ತಿನೋ ಗೋತ್ತಿಲ್ಲ ಕ್ಷೇತ್ರದ ಜನರಿಗೆ ಉತ್ತಮವಾದ “ಆರೋಗ್ಯ, ಶಿಕ್ಷಣ, ಮತ್ತು ಸ್ವಚ್ಚತೆಯ ವಾತಾವರಣ” ನಿರ್ಮಿಸುವ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೆನೆ. ಮತ್ತು ವಾರಕೋಮ್ಮೆಯಾದರು ಸಿಂದಗಿಯ ಸಾರ್ವಜನಿಕ ಆಸ್ಪತ್ರೆಗೆ ಬೇಟಿ ನೀಡುತ್ತೇನೆ. ಆರೋಗ್ಯದ ದೃಷ್ಠಿಕೋನದಲ್ಲಿ ನಾವು ಬಹಳ ಹಿಂದೆ ಇದೇವೆ ಮೂಲಭೂತ ಸೌಕರ್ಯಗಳು ಜನರಿಗೆ ಸಿಗದೆ ಇರುವುದೆ ಕಂಡುಬರುತ್ತದೆ. ಆಸ್ಪತ್ರೆಯ ಆಡಳಿತ ಸಂಪೂರ್ಣವಾಗಿ ಸುಧಾರಣೆ ಆಗಬೇಕಿದೆ ಎಂದರು.
