Home News ತಳವಾರ ಮಹಾಸಭೆಯ ವತಿಯಿಂದ ಪ್ರೋತ್ಸಾಹ ಪೂರ್ವಕ ಕಾರ್ಯಕ್ರಮಗಳು ಜರುಗಲಿ ; ಮನಗೂಳಿ

ತಳವಾರ ಮಹಾಸಭೆಯ ವತಿಯಿಂದ ಪ್ರೋತ್ಸಾಹ ಪೂರ್ವಕ ಕಾರ್ಯಕ್ರಮಗಳು ಜರುಗಲಿ ; ಮನಗೂಳಿ

by vegadhut@gmail.com.
0 comments

ಪಟ್ಟಣದ ಬಸವ ಮಂಟಪದಲ್ಲಿ ಜರುಗಿದ ತಳವಾರ ನೌಕರರ ಸಂಘದ ಪದಗ್ರಹಣ, ಪ್ರತಿಭಾ ಪುರಸ್ಕಾರ ಹಾಗೂ ಶಾಂತಗಂಗಾಧರ ಶ್ರೀಗಳ 76ನೇ ವರ್ಧಂತಿ (ಜನ್ಮದಿನಾಚರಣೆ) ಕಾರ್ಯಕ್ರಮವನ್ನು ಶಾಸಕ ಅಶೋಕ ಮನಗೂಳಿ ಉದ್ಘಾಟಿಸಿ ಮಾತನಾಡಿದರು.

ಸಿಂದಗಿ: ತ್ಯಾಗ ಮನೋಭಾವವುಳ್ಳ ಶ್ರೀಗಳಾದ ಶಾಂತಗಂಗಾಧರ ಸ್ವಾಮೀಜಿಗಳು ಸರ್ವಧರ್ಮದ ಏಳ್ಗೆಗಾಗಿ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪ

ಪಟ್ಟಣದ ಬಸವ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ತಳವಾರ ನೌಕರರ ಸಂಘದ ತಾಲೂಕು ಘಟಕದ ಪದಗ್ರಹಣ, ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಾಂತಗಂಗಾಧರ ಶ್ರೀಗಳ 76ನೇ ವರ್ಧಂತಿ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ತಳವಾರ ಮಹಾಸಭೆಯ ವತಿಯಿಂದ ಇಂತಹ ಹಲವಾರು ಪ್ರೋತ್ಸಾಹ ಪೂರ್ವಕ ಕಾರ್ಯಕ್ರಮಗಳು ಜರುಗಲಿ, ವಿದ್ಯಾರ್ಥಿಗಳಿಗೆ ಮತ್ತಷ್ಟು ಕಲಿಯಲು ತುಂಬಲಿ ಎಂದು ಆಶಿಸುತ್ತೇನೆ ಎಂದರು.

ಚುನಾವಣೆಯಲ್ಲಿ ನನ್ನ ಮೇಲೆ ನಂಬಿಕೆ ಮತ ಚಲಾಯಿಸಿ ಶಾಸಕ ಮಾಡಿದ ಜನತೆಯ ವಿಶ್ವಾಸವನ್ನು ಉಳಿಸಿಕೊಳ್ಳುತ್ತೇನೆ ತಳವಾರ ಸಮಾಜದ ಶ್ರೇಯೋಭಿವೃದ್ದಿಗಾಗಿ ಶ್ರಮಿಸುವೆ ಎಂದು ಹೇಳಿದರು.

banner

ಸಾಧನೆಗೈದ ತಳವಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣವನ್ನು ಮಾಡಲಾಯಿತು.

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿದರು.
ಶಾಂತಗಂಗಾಧರ ಶ್ರೀಗಳು ಆಶೀರ್ವಚನ ನೀಡಿದರು.
ಈ ವೇಳೆ ತಳವಾರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜಕುಮಾರ ನರಗೋದಿ, ಪುರಸಭೆ ಮಾಜಿ ಅಧ್ಯಕ್ಷ ಹಣಮಂತ ಸುಣಗಾರ, ಪ್ರಶಾಂತ ಕದ್ದರಗಿ, ಈರಣ್ಣ ಕುರಿ, ಮಡಿವಾಳ ನಾಯ್ಕೋಡಿ, ಮತ್ತಿತಿರದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news