ಸಿಂದಗಿ: ಇಂದು ನಗರದ ತಾಲೂಕು ಆಸ್ಪತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ಸಿಂದಗಿಯ ಶಂಭುಲಿಂಗ ಪ್ರತಿಷ್ಠಾನ ಮತ್ತು ಸಾಯಿ ಇಂಜಿನಿಯರಿಂಗ್ ಸರ್ವಿಸಸ್ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಂಭು ಕಕ್ಕಳಮೇಲಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರಧಾನಿ ಮೋದಿಜಿಯವರ ಹುಟ್ಟು ಹಬ್ಬದ ಅಂಗವಾಗಿ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಈ ಬಾರಿ ಮುತ್ತು ಶಾಬಾದಿಯವರ ಸಹಯೋಗದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಜನತೆಗೆ ಉಚಿತವಾಗಿ ನೇತ್ರ, ಎಲುಬು-ಕೀಲು, ಶಸ್ತ್ರ ಚಿಕಿತ್ಸೆ, ಮೂತ್ರಪಿಂಡ, ಸ್ತ್ರೀ ರೋಗ-ಬಂಜೆತನ ನಿವಾರಣೆ, ಸಾಮಾನ್ಯ, ಚಿಕ್ಕ-ಮಕ್ಕಳ ಮತ್ತು ಇನ್ನಿತರ ಅವಶ್ಯವಿರುವ ತಪಾಸಣೆಯನ್ನು ಅನುಭವಿ ವೈದ್ಯ ತಜ್ಞರಿಂದ ಮಾಡಲಾಗುತ್ತದೆ. ಮತ್ತು ಅವಶ್ಯವಿರುವ ಔಷಧ ಮತ್ತು ಪರಿಕರಗಳನ್ನು ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಮಾತನಾಡಿದ ಮುತ್ತು ಶಾಬಾದಿ ಈ ಆರೋಗ್ಯ ಶಿಬಿರವನ್ನು ಯಾವುದೇ ರಾಜಕೀಯ ಪ್ರಚಾರಕ್ಕಾಗಿ ಮಾಡುತ್ತಿಲ್ಲ ಮೋದಿಜಿಯವರ ಹುಟ್ಟು ಹಬ್ಬದ ನಿಮಿತ್ಯ ಮಾಡುವ ಸಾಮಾಜಿಕ ಕಾರ್ಯವಾಗಿದೆ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಮತ್ತು ವಯೋವೃದ್ದರಿಗೆ ವಾಹನದ ವ್ಯೆವಸ್ಥೆ ಇರುತ್ತದೆ. 6೦೦ಕ್ಕೂ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು ಬರುವಂತಹ ರೋಗಿಗಳಿಗೆ ಆರ್ಥಿಕವಾಗಿಯೂ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದರು.
ಈ ವೇಳೆ ವೀರಭದ್ರಯ್ಯ ಹಿರೇಮಠ, ಶ್ಯಾಮಸುಂದರ ಪೂಜಾರಿ, ಬಸವರಾಜ ಕುಂಬಾರ ಇದ್ದರು.

