ತಿಕೋಟ:ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವಿಜಯಪುರ & ತಾಲೂಕು ಪಂಚಾಯತ ತಿಕೋಟಾ ಅವರ ಆಶ್ರಯದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಜರುಗಿದ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಸುಭಾಷಗೌಡ ಪಾಟೀಲ ಮಾತನಾಡಿದರು.
“ಇಂದಿನ ಜನತೆ ಮೊಬೈಲ ಗಳಿಗೆ ಸಿಕ್ಕು ಗ್ರಾಮೀಣ ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ಈ ವಿಷಯವನ್ನು ಅರಿತ ಘನ ಸರಕಾರ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡುವ ಮೂಲಕ ಗ್ರಾಮೀಣ ಜನರಿಗೆ ಒಂದು ವೇದಿಕೆ ಕಲ್ಪಿಸಿದೆ. ಆ ಮೂಲಕ ಅವಕಾಶ ವಂಚಿತ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಅವರಿಗೆ ಕ್ರೀಡೆಯ ಮಹತ್ವವನ್ನು ಸಾರುವ ಕೆಲಸ ಮಾಡುತ್ತಿದೆ. ಇದು ನಿಜಕ್ಕು ಪ್ರಶಂಸನೀಯವಾದ ಕಾರ್ಯಕ್ರಮವೆಂದರು. ಎಲ್ಲ ಸ್ಪರ್ಧಾಳುಗಳು ಈ ಕ್ರೀಡಾಕೂಟದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಹಬ್ಬದಂತೆ ಆಡಬೇಕು, ಯಾವದೇ ವೈಮನಸ್ಸಿನಿಂದ ಕ್ರೀಡೆಯಲ್ಲಿ ಜಯಗಳಿಸಲಾಗದು ಎಂದರು.

ಪ್ರಾಸ್ತಾವಿಕವಾಗಿ ಅಪ್ಪು ಜೋಲಿ ಮಾತನಾಡಿ “ಗ್ರಾಪಂ ಅಧ್ಯಕ್ಷರ, ಸದಸ್ಯರ & ಅಧಿಕಾರಿಗಳ ಸಹಕಾರದಿಂದ ನಮ್ಮ ಊರಿನಲ್ಲಿ ತುಂಬಾ ಸಂಭ್ರಮದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ. ಇದರ ಮಹತ್ವವನ್ನು ಅರಿತು ಎಲ್ಲರೂ ಆಟವಾಡಿ, ಜಯ ಗಳಿಸಿದ ಆಕರ್ಷಕ ಟ್ರೋಪಿ, ಪ್ರಮಾಣ ಪತ್ರ ನೀಡುವದರ ಜೊತೆಗೆ ತಂಡವನ್ನು ತಾಲೂಕು ಮಟ್ಟಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಕಾರ್ಯಕ್ರಮವನ್ನು ಶಿಕ್ಷಕರಾದ ಎನ್.ಜಿ.ಕೊಟ್ಯಾಳ ನಿರೂಪಿಸಿದರು. ಆರ್.ಬಿ.ಸವದಿ ಸ್ವಾಗತಿಸಿದರು ಹಾಗೂ ಎಸ್.ಎ.ಜಾಧವ ವಂದಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ರಮಾ ಜೊಲ್ಲಿ, ಪಿಡಿಓ ಜೆ.ಎ.ದಶವಂತ, ಗ್ರಾಮದವರಾದ ಪಿಎಸ್‌ಐ ಮಹಾದೇವ ಭೋಸ್ಲೆ, ಎಸ್.ಡಿ.ಎಮ್.ಸಿ ಅಧ್ಯಕ್ಷರುಗಳು, ಗ್ರಾಪಂ ಸದಸ್ಯರು, ಶಾಲಾ ಶೀಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

