
ಸಿಂದಗಿ : ತಾಲೂಕಾ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪೂರ್ವಬಾವಿ ಸಭೆ ಜರುಗಿತ್ತು. ಜಿಲ್ಲೆಯಲ್ಲಿ ವಿಶೇಷವಾಗಿ ಅತ್ಯಂತ ಸುಂದರವಾಗಿ ತಾಲೂಕಿನಲ್ಲಿ ಕಾರ್ಯಕ್ರಮ ನಡೆಸುವಲ್ಲಿ ತಾವು ಕಾರಣಿಭೂತರಾಗಬೇಕು. ನಗರದಲ್ಲಿರುವ ಕನ್ನಡಮ್ಮನ ವೃತ್ತದಿಂದ ಮೆರವಣಿಗೆ ಪ್ರಾರಂಭಗೊಂಡು ನಗರದ ವಿವಿಧ ಮುಖ್ಯರಸ್ತೆಗಳಿಂದ ತೆರಳಿ ಬಸವ ಮಂಟಪದಲ್ಲಿ ಕಾರ್ಯಕ್ರಮ ನಡೆಸುವಂತೆ ತಿರ್ಮಾನ ಮಾಡಲಾಗಿದೆ. ಶಾಲಾ ಕಾಲೇಜು ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಳುವಂತೆ ಮಾಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಮ್.ಹರನಾಳ ಅವರಿಗೆ ಸೂಚಿಸಿದರು. ಸಿಂದಗಿ ನಗರ ಅತ್ಯಂತ ಸೌಂದರ್ಯವಾಗಿ, ಸ್ವಚ್ಛತೆಯಿಂದಿಡುವ ಕೆಲಸ ಮಹತ್ತರವಾಗಿದ್ದು ಅಚ್ಚುಕಟ್ಟಾಗಿ ನಿಬಾಯಿಸುವಂತೆ ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ ಇವರಿಗೆ ಹೇಳಿದರು. ಒಟ್ಟಾರೆ ತಾಲೂಕಾ ಆಡಳಿತದಿಂದ ವಿಜೃಂಬಣೆಯ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಸಭೆಯ ಅಧ್ಯಕ್ಷತೆವಹಿಸಿದ ತಾಲೂಕಾ ದಂಡಾಧಿಕಾರಿ ನಿಂಗಣ್ಣ ಬಿರಾದಾರ ಸಭೆ ಕುರಿತು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ರಾಜಶೇಖರ ಕೂಚಬಾಳ ಮಾತನಾಡಿ ಸಿಂದಗಿ ತಾಲೂಕಿನ ಎಲ್ಲ ಆಡಳಿತ ಅಧಿಕಾರಿಗಳು ಕಡ್ಡಾಯವಾಗಿ ಸಿಬ್ಬಂದಿಯೊಂದಿಗೆ ಕಾರ್ಯಕ್ರಮ ಮುಗಿಯುವರೆಗೆ ಹಾಜರಿರುವಂತೆ ತಿಳಿಸಿ. ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರವು ತಾಯಿ ಕನ್ನಡಾಂಬೆ ಭುವನೇಶ್ವರಿ ಚಿತ್ರದೊಂದಿಗೆ ಮೆರವಣಿಗೆ ಮಾಡಬೇಕು. ಮತ್ತು ಮೆರವಣಿಗೆಯಲ್ಲಿ ಕಲಾ ತಂಡಗಳು ಬಾಗಿಯಾಗುವಂತೆ ಮಾಡಿ ಕಳೆದ ಬಾರಿ ಕೋವೀಡ್ ಕಾರಣದಿಂದ ವಿಜೃಂಬಣೆಯ ರಾಜ್ಯೋತ್ಸವ ಆಚರಿಸಲಾಗಿಲ್ಲ ಈ ಬಾರಿ ಮಾದರಿ ರಾಜ್ಯೋತ್ಸವ ಆಚರಣೆ ಆಗಬೇಕೆಂದು ಹೇಳಿದರು.
ಹಲಾವಾರು ಕನ್ನಡ ಸಂಘಟಕರು ಸಿಂದಗಿ ಕ್ಷೇತ್ರದಲ್ಲಿದ್ದು ಕರವೇ ಪ್ರವೀಣ ಶೇಟ್ಟಿ ಬಣದ ಸತೀಶ ಕವಲಗಿ ಮಾತ್ರ ಹಾಜರಿದ್ದು ಉಳಿದ ಸಂಘಟಕರು ಗೈರಾಗಿದ್ದರು.
ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ವೃತ್ತ ನೀರಿಕ್ಷಕರಾದ ರವಿ ವಕ್ಕುಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಬಸವರಾಜ ಜಿಗಳೂರು, ಕಸಾಪ ಗೌರವಾಧ್ಯಕ್ಷ ಮಹಾಂತೇಶ ಪಟ್ಟಣಶೇಟ್ಟಿ, ಆರೋಗ್ಯ ಇಲಾಖೆಯ ಎಸ್.ಡಿ.ಕುಲಕರ್ಣಿ, ಎಸ್.ಎಮ್.ಬಿರಾದಾರ, ಎಚ್.ವಾಯ್.ಸಿಂಗೆಗೋಳ, ಎಸ್.ಎನ್.ಸಂಕದ, ಹಲವಾರು ಅಧಿಕಾರಿಗಳು ಉಪಸ್ಥಿತರಿದ್ದರು.

