ಸ್ವತಂತ್ರ ಪೂರ್ವದಲ್ಲಿ ದೇಶಕ್ಕಾಗಿ ಹಲವಾರು ಮಹನೀಯರ ಪ್ರಾಣ ಬಲಿದಾನವೆ ಇಂದು ನಾವು ಸುಗಮ ಜೀವನ ನಡೆಸಲು ಕಾರಣ. ನಮ್ಮಗೆ ಸ್ವಾತಂತ್ರ್ಯ ಸಿಕ್ಕಿದು ಕೇವಲ ಮಾತುಕತೆಗಳಿಂದಲ್ಲ ಹಲವಾರು ಹೋರಾಟ, ಸತ್ಯಾಗ್ರಹ, ಕ್ರಾಂತಿಕಾರಿ ನಡೆಗಳಿಂದ. ಇಂದು ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೆ ರಾಷ್ಟ್ರದ ತಿರ್ವಣ ಧ್ವಜ ಬಾನಂಗಳದಲ್ಲಿ ಕಂಗೋಳಿಸುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡ 78ನೇ ಸ್ವತಂತ್ರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತ ದೇಶ ಸ್ವತಂತ್ರ ಬಂದ ನಂತರ ಭಾರತವನ್ನು ಅತ್ಯಂತ ಪ್ರಗತಿಯತ್ತ ಕೊಂಡ್ಯೊಯಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಧಾರ್ಮಿಕವಾಗಿ ಜಗತ್ತಿನಲ್ಲಿಯೇ ಮುನ್ನಡೆಯ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಮ್ಮ ಹಿರಿಯ ನಾಯಕರ ಪ್ರಯತ್ನದ ಫಲವಾಗಿ ಇಂದು 78ನೆಯ ಸ್ವಾತಂತ್ರೋತ್ಸವವನ್ನು ಬಹಳ ಅಭಿಮಾನದಿಂದ ಆಚರಣೆ ಮಾಡುತ್ತಿದ್ದೇವೆ. ಜಾತಿ, ಧರ್ಮ, ಮತಗಳಿಗಿಂತ ದೇಶ ಪ್ರೇಮ ದೊಡ್ಡದು. ಸಂವಿಧಾನದಿಂದ ಭಾರತ ಬದಲಾಗಿದೆ. ಭಾರತವು ಇಂದು ಸಧೃಡವಾಗಿ, ಆರ್ಥಿಕವಾಗಿ ಸಬಲವಾಗಿದೆ ಎಂದರೆ ಅದಕ್ಕೆ ಕಾರಣ ಡಾ.ಬಿ.ಆರ್.ಅಂಬೇಡ್ಕರ್ ರವರು ಬರೆದಿರುವ ಸಂವಿಧಾನ. ಇಂದು ನಾವೆಲ್ಲರೂ ದೇಶಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸಿಕೊಳ್ಳಬೇಕು. ರಾಜ್ಯದಲ್ಲಿ ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಪಂಚ ಗ್ಯಾರಂಟಿಗಳು ಬಡವರ ಜೀವನದ ಬೆಳಕಾಗಿದೆ. ಈ ಭಾಗದ ಶಾಸಕನಾಗಿ ಆಯ್ಕೆಯಾದ ಬಳಿಕ ಸಿಂದಗಿ ಮತಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ದಿಸೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶಿಕ್ಷಣ, ಆರೋಗ್ಯದಂತಹ ಅನೇಕ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, ನಿವೃತ್ತ ಯೋಧರಿಗೆ, ಪ್ರಗತಿಪರ ರೈತರಿಗೆ, ಪೋಲಿಸ ಸಿಬ್ಬಂದಿಗಳಿಗೆ, ಶಿಕ್ಷಕರಿಗೆ, ಛದ್ಮವೇಷ ಧರಿಸಿದ ವಿವಿಧ ಶಾಲೆಯ ಮಕ್ಕಳಿಗೆ, ಕವಾಯತ್‌ನಲ್ಲಿ ಭಾಗವಹಿಸಿದ ಎಲ್ಲರಿಗೂ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನ ಮಾಡಲಾಯಿತು. ಈ ವೇಳೆ ಕಂಪನ್ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಜಿ.ಪಿ.ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ ರವಿ ಗೋಲಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಟ್ಟಣದ ವಿವಿಧ ಶಾಲೆಯ ಮಕ್ಕಳು ಛದ್ಮವೇಷ ಧರಿಸಿದ್ದರು. ಪಟ್ಟಣದ ಪ್ರೇರಣಾ ಶಾಲೆ, ಸರಕಾರಿ ಎಂಪಿಎಸ್ ಶಾಲೆ, ಸರಕಾರಿ ಆದರ್ಶ ವಿದ್ಯಾಲಯ,ಶಾಂತವೀರ ಪಟ್ಟಾಧ್ಯಕ್ಷರ ಕನ್ಯಾ ಪ್ರೌಢಶಾಲೆ, ಜ್ಞಾನ ಭಾರತಿ ಶಾಲೆಯ ಮಕ್ಕಳು, ಪೊಲೀಸ್ ಇಲಾಖೆ, ಅಗ್ನಿ ಶಾಮಕ ದಳ, ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಕವಾಯತ್ ನಡೆಯಿತು.
ಈ ವೇಳೆ ತಾಪಂ ಇಓ ರಾಮು ಅಗ್ನಿ, ಸಿಪಿಐ ನಾನಾಗೌಡ ಪೊಲೀಸ್‌ಪಾಟೀಲ, ಪಿಎಸ್‌ಐ ಆರೀಫ್ ಮುಷಾಪುರಿ, ಪುರಸಭೆ ಮುಖ್ಯಾಧಿಕಾರಿ ಸುರೇಶ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಆರಿಫ್ ಬಿರಾದಾರ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಅಬಕಾರಿ ಸಿಪಿಐ ಆರತಿ ಖೈನೂರ, ಸುರೇಶ ಕೊಂಡಿ, ಭಗವಂತ ಮುಳಸಾವಳಗಿ, ಪುರಸಭೆ ಸದಸ್ಯ ಸಂದೀಪ ಚೌರ, ಸಿದ್ದು ಮಲ್ಲೇದ, ಶಾಂತೂ ರಾಣಾಗೋಳ, ಸಂತೋಷ ಮನಗೂಳಿ, ಸುನಂದಾ ಯಂಪೂರೆ, ಮಹಾನಂದ ಬಮ್ಮಣ್ಣಿ, ಪ್ರತಿಭಾ ಚಳ್ಳಗಿ, ಅಂಬಿಕಾ. ಪಾಟೀಲ, ಜಯಶ್ರೀ ಹದನೂರ, ದೈ.ಶಿಕ್ಷಕ ಆರ್.ಆರ್.ನಿಂಬಾಳಕರ, ಕೃಷಿ ಅಧಿಕಾರಿ ಎಚ್.ವೈ.ಸಿಂಗೆಗೋಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇದ್ದರು. ದೈಹಿಕ ನಿರ್ದೇಶಕ ರವಿ ಗೋಲಾ ನಿರೂಪಿಸಿದರು.

