
ಸಿಂದಗಿ : ಚುನಾವಣೆಯ ನಂತರ ಭೂಸನೂರ ಮಂತ್ರಿಯಾಗಿರುತ್ತಾರೆ ಆವಾಗ ಸಿಂದಗಿ ಕ್ಷೇತ್ರಕ್ಕೆ ನಾನು ಮಂತ್ರಿಯವರೊಡನೆ ಬರುತ್ತೇನೆ ಎಂದು ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ ಹೇಳಿದರು.
ಸಿಂದಗಿ ತಾಲೂಕಿನ ರಾಂಪುರ ಗ್ರಾಮಕ್ಕೆ ಹೇಲಿಕ್ಯಾಪ್ಟರ್ ಮುಖಾಂತರ ಬಂದ ಪೌರಾಡಳಿತ ಹಾಗೂ ಸಣ್ಣ ಕೈಗಾರಿಕಾ ಸಚಿವ ಎಂಟಿಬಿ ನಾಗರಾಜ ಮೊದಲು ರಾಂಪುರ ಗ್ರಾಮದಲ್ಲಿ ವೀರ ಸಂಗೋಳ್ಳಿ ರಾಯಣ್ಣರ ಪ್ರತಿಮೆ ಅನಾವರಣಗೋಳಿಸಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ಭಕ್ತ ಕನಕದಾಸರ ಕಂಚಿನ ಪ್ರತಿಮೆ ಅನಾವರಣ ಗೋಳಿಸಿ ಮಾತನಾಡಿದರು.
ಜನತೆಯ ಆಶೀರ್ವಾದ ಅಣ್ಣ ಬಸವಣ್ಣನವರ ಅನುಗ್ರಹದಿಂದ ಭೂಸನೂರ ಶಾಸಕರಾಗಿದ್ದಾರೆ. ಭೂಸನೂರ ಉಪಚುನಾವಣೆಯಲಿ ಚುನಾಯಿತರಾದಾಗಿನಿಂದಲು ನಾವು ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ರಮೇಶ ಭೂಸನೂರ ಮಾಡಿದ್ದಾರೆ. ಈ ಅವಧಿಯಲ್ಲಿ ಬಸವರಾಜ ಬೋಮ್ಮಾಯಿ ನೇತೃತ್ವದ ಸರಕಾರ 4 ಕೋಟಿ ರೂಗಳಲ್ಲಿ 42 ಕನಕ ಭವನಗಳನ್ನು ಸಿಂದಗಿ ಮತಕ್ಷೇತ್ರಕ್ಕೆ ಮಂಜೂರು ಮಾಡಿಕೋಟ್ಟಿದೆ. ಭೂಸನೂರ ಅವರೊಂದಿಗೆ ಹಲವು ಬಾರಿ ಮುಖ್ಯಮಂತ್ರಿಗಳ ಬಳಿ ಹೋಗಿ ಸಿಂದಗಿ ಮತಕ್ಷೇತ್ರದಲ್ಲಿ ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವರಿಗೆ ಹೇಚ್ಚಿನ ಅನುದಾನ ನೀಡುವಂತೆ ಹೇಳಿದ್ದೇನೆ. ಸೂರ್ಯ ಚಂದ್ರ ಇರುವುದೇಷ್ಟು ಸತ್ಯವೋ ಬಿಜೆಪಿ ಸರಕಾರ ಬರುವುದು ಅಷ್ಟೇ ಸತ್ಯ. ಈಗಿನ ಕಾಲದಲ್ಲಿ ಸ್ವಚ್ಚ, ಪ್ರಾಮಾಣಿಕ, ಜನಸೇವಕರ ಸಾಲಿನಲ್ಲಿ ನಿಲ್ಲುವ ರಾಜಕಾರಣಿಗಳ ಸಾಲಿನಲ್ಲಿ ಭೂಸನೂರ ಅವರು ಇರುತ್ತಾರೆ. ಎಲ್ಲ ಸಮುದಾಯಗಳನ್ನು ಒಗ್ಗೂಡಿ ಭೂಸನೂರ ತೆಗೆದುಕೊಂಡು ಹೋಗುವ ಜನಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೇರೆಯುವ ವ್ಯಕ್ತಿತ್ವ ಭೂಸನೂರ ಅವರದು, ಇಂದು ನಿಮ್ಮ ಆಶೀರ್ವಾದ ಅವರಿಗೆ ಮತ್ತೋಮ್ಮೆ ಬೇಕಾಗಿದೆ ಅವರನ್ನು ಸಿಂದಗಿ ಮತಕ್ಷೇತ್ರದಿಂದ ಗೇಲ್ಲಿಸಿ ಕಳುಹಿಸುತ್ತೀರಿ ಎಂಬ ನಂಬಿಕೆ ನನ್ನಗಿದೆ ಮುಂದಿನ ಬಿಜೆಪಿ ಸರಕಾರದಲ್ಲಿ ಮಂತ್ರಿ ಆಗುತ್ತಾರೆ ಎಂದರು.
ರಾಂಪೂರ ಗ್ರಾಮದಲ್ಲಿ ಸಂಗೋಳ್ಳಿ ರಾಯಣ್ಣ ವೃತ್ತ ಸಚಿವ ಎಂಟಿಬಿ ನಾಗರಾಜ ಉದ್ಘಾಟಿಸಿದರು.
ಕನಕ ಭವನದ ಭೂಮಿಪೂಜೆ ನೇರವೇರಿಸಿ ಕಾರ್ಯಕ್ರಮದ ಕುರಿತು ಮಾತನಾಡಿದ ಶಾಸಕ ರಮೇಶ ಭೂಸನೂರ ಉಪ ಚುನಾವಣೆಯ ಮುನ್ನುಡಿಯನ್ನು ಸಚಿವರು ಹಾಗೂ ಹಾಲುಮತ ಸಮಾಜದ ಎಂಟಿಬಿ ನಾಗರಾಜ ಹಾಗೂ ಬೈರತಿ ಬಸವರಾಜ ಅವರಿಗೆ ಶ್ರೇಯಸ್ಸು ಸಲ್ಲುತ್ತದೆ. ಯುವಕರಿಗೆ ಆದರ್ಶವಾಗಬೆಕು ಎಂಬ ದೂರದೃಷ್ಟಿಯೊಂದಿಗೆ ಇಂದು ಮಹಾನ್ ವ್ಯಕ್ತಿಗಳ ಪ್ರತಿಮೆ ಸ್ಥಾಪಿಸಲಾಗುತ್ತಿದೆ. ಕೇಲ ದಿನಗಳ ಹಿಂದೆ ಕೊಕಟನೂರ ಗ್ರಾಮದಲ್ಲಿ ಸಂಗೋಳ್ಳ ರಾಯಣ್ಣರ ಪ್ರತಿಮೆ ಹಾಗೂ ಇಂದು ರಾಂಪೂರ ಗ್ರಾಮದಲ್ಲಿ ರಾಯಣ್ಣರ ಪ್ರತಿಮೆ ಅನಾವರಣಗೋಳಿಸಿದರೆ ಇವಾಗ ಭಕ್ತ ಕನಕದಾಸರ ಪ್ರತಿಮೆ ಅನಾವರಣ ಗೋಳಿಸಲಾಗಿದೆ. ಅಷ್ಟೇ ಅಲ್ಲದೆ ಇದೇ 24ರಂದು ಹೂವಿನಹಳ್ಳಿ ಹಾಗೂ ಕೊಕಟನೂರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯು ಅನಾವರಣ ಗೋಳೀಸಲಾಗುವುದು ಎಂದರು. ಹಾಲುಮತ ಸಮಾಜ ನನ್ನ ಶಕ್ತಿಯಾಗಿ ಉಪಚುನಾವಣೆಯಲ್ಲಿ ನಿಂತಿದೆ. ಅವರ ಬೇಡಿಕೆಗಳನ್ನು ಈಡೇರಿಸುವ ಪ್ರಮಾಣಿಕ ಪ್ರಯತ್ನ ಮಾಡಿದೇನೆ ಮುಂದಿನ ಚುನಾವಣೆಯಲ್ಲಿ ನನ್ನಗೆ ಆಶೀರ್ವಾದ ಮಾಡಿ ಎಂದು ಹಾಲುಮತ ಸಮಾಜಕ್ಕೆ ಮನವಿ ಮಾಡಿದರು. ಮಾಜಿ ಜಿಲ್ಲಾಪಂಚಾಯತ ಸದಸ್ಯ ಗುರುರಾಜಗೌಡ ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಪ.ಪೂ.ಶ್ರೀ ಸದ್ಗುರು ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಗೋಳಸಾರ, ಶ್ರೀ ಸಿದ್ದರಾಮಾನಂದ ಪುರಿ ಸ್ವಾಮಿಜಿ ತಿಂಥಣಿ, ಶ್ರೀ ಮಾಳಿಂಗರಾಯ ಮಹಾರಾಜರು ಸುಕ್ಷೇತ್ರ ಹುಲಜಂತಿ, ಶ್ರೀ ಗುರುಲಿಂಗ ಮಾಹಾಸ್ವಾಮಿಗಳು ಯಲಗೋಡ, ಅಭಿನವ ಶ್ರೀ ಬನಸಿದ್ದೇಶ್ವರ ಮಹಾರಾಜರು ಮುಮ್ಮೇಟಿಗುಡ್ಡ, ಶ್ರೀ ನಿತ್ಯಾನಂದ ಆರೂಡ ಸಂಗನಬಸವೇಶ್ವರ ಮಠ ರಾಂಪೂರ.ಪಿ.ಎ, ಶ್ರೀ ಸಿದ್ದಯ್ಯ ಸ್ವಾಮಿಗಳು ಸರೂರ ಮಠ ಮುದ್ದೇಬಿಹಾಳ, ಶ್ರೀ ಸಿದ್ದಪ್ಪ ಪೂಜಾರಿ, ಶ್ರೀ ಸಿದ್ದಯ್ಯ ಹಿರೇಮಠ ಸಾನಿದ್ಯ ವಹಿಸಿದ್ದರು. ನಿಂಗಣ್ಣ ಬಿರಾದಾರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ನಾಗಪ್ಪ ಶಿವೂರ, ಸಂತೋಷ ಪಾಟೀಲ, ಸಿದ್ದರಾಮ ಪಾಟೀಲ, ವೃತ್ತ ನೀರಿಕ್ಷಕ ಡಿ.ಹುಲಿಗೇಪ್ಪ, ಪುರಸಭೆ ಮುಖ್ಯಾಧಿಕಾರಿ ರಾಜಶ್ರೀ ತುಂಗಳ, ಈರಣ್ಣ ರಾವೂರ, ಮಲ್ಲಣ್ಣ ಸಾವಳಸಂಗ, ಪ್ರಕಾಶ ಹಿರೇಕುರಬರ, ಎಂ.ಪಿ.ಬಾದನ, ವಿಠಲ ನಾಯ್ಕೋಡಿ, ಪೀರು ಕೇರೂರ ಉಪಸ್ಥಿತರಿದ್ದರು. ರವಿ ನಾಯ್ಕೋಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಸಿದ್ದು ಬುಳ್ಳಾ ಸ್ವಾಗತಿಸಿದರು. ಬಿ.ಎಚ್.ಜೋಗಿ ಕಾರ್ಯಕ್ರಮ ನಿರೂಪಿಸಿದರು.
