ಸಿಂದಗಿ : ಎರಡು ದಿನಗಳಿಂದ ಅನೇಕ ತಿರುವು ಪಡೆಯುತ್ತಿದ್ದ ಸಿಂದಗಿ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ತಾಲೂಕು ದಂಡಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ಪ್ರದೀಪಕುಮಾರ ಹಿರೇಮಠ ಇವರು ನಡೆಸಿಕೋಟ್ಟರು.
ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಪಕ್ಷದ ರಾಜಣ್ಣ ನಾರಾಯಣಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು ಹದಿನೆಂಟು ಸದಸ್ಯರು ಹಾಜರಿದ್ದರು ಎಂದು ಚುನಾವಣಾಧಿಕಾರಿ ಪ್ರದೀಪ ಕುಮಾರ ಹಿರೇಮಠ ತಿಳಿಸಿದರು.

ನಾಮಾಂಕಿತ ಸಲ್ಲಿಸಿದ ನಂತರ ಶಾಂತವೀರ ಬಿರಾದಾರ ಹಾಗೂ ರಾಜಣ್ಣ ನಾರಾಯಣಕರ ಮತ್ತು ಹಾಸೀಂ ಆಳಂದ ಗೆಲುವಿನ ಚಿಹ್ನೆ ತೋರಿಸುತ್ತಿರುವುದು.
ನೂತನ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಮಾತನಾಡಿ ಹೇಚಿನ ಅನುದಾನ ತಂದು ನಗರ ಅಭಿವೃದ್ಧಿಗೆ ಶ್ರಮಿಸುವೆ. ನನ್ನಗೆ 23 ಸದಸ್ಯರ ಸಹಕಾರ ಅಗತ್ಯ. ನನ್ನೊಂದಿಗೆ ನಿಂತು ಬೆಂಬಲಿಸಿದ ಶಾಸಕರಿಗು ಸದಸ್ಯರಿಗು ಧನ್ಯವಾದಗಳು ತಿಳಿಸಿದರು.
ರಾಜಣ್ಣ ನಾರಾಯಣಕರ ಮಾತನಾಡಿ ಇಂದು ಉಪಾಧ್ಯಕ್ಷನಾಗಲು ಹಣಮಂತ ಸುಣಗಾರ ಅವರು ತ್ಯಾಗವೇ ಕಾರಣ ಅವರು ಅಧಿಕಾರ ಬಿಟ್ಟು ನನ್ನಗೆ ಅಧಿಕಾರಿ ನೀಡಿದ್ದಾರೆ ಅವಿರೋಧವಾಗಿ ಆಯ್ಕೆ ಮಾಡಲು ಶ್ರಮಿಸಿದ ಶಾಸಕರಾದಿಯಾಗಿ ಎಲ್ಲರಿಗೂ ಧನ್ಯವಾದಗಳು ಹೇಳಿ ಜೆಡಿಎಸ್ ತೋರೆದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಪ್ರತಿಭಾ ಕಲ್ಲೂರ . ಉಮಾದೇವಿ ಸುಲ್ಪಿ, ಕಲಾವತಿ. ಕಡಕೋಳ, ಬಸವರಾಜ ಯರನಾಳ, ಹಣಮಂತ ಸುಣಗಾರ, ತಾಂಬೋಳಿ ಬಾಶಾಸಾಬ ,ನಾಟೀಕಾರ ಖೈರುನಬಿ ಮಹ್ಮದನೀಫ, ಹಾಸೀಮಪೀರ ಆಳಂದ, ದುರ್ಗಿ ಪಾರ್ವತಿ ಗುರಪ್ಪ, , ಬಿರಾದಾರ ಮಹಾಂತೇಶ ಗುರಲಿಂಗಪ್ಪ, ಶಾಂತವೀರ ಮಲ್ಲಪ್ಪ ಮನಗೂಳಿ , ಕಲಾಲ ಭೀಮಣ್ಣ ಕಿಶನ, ಮುಲ್ಲಾ ತಹಸೀನ ಆಬಿದ, ಬಂಕಲಗಿ ಗೊಲ್ಲಾಳಪ್ಪ ನಿಂಗಪ್ಪ, ಶರಣಗೌಡ ಮಡಿವಾಳಪ್ಪ ಪಾಟೀಲ, ನಾಯ್ಕೋಡಿ ಮಹಾದೇವಿ ಹಾಜರಿದ್ದರು.
ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾದ ಶ್ರೀಶೈಲ ಭೀರಗೊಂಡ ಹಾಗೂ ಸಂದೀಪ ಚೌರ ಗೈರಾಗಿದ್ದರು ಒಟ್ಟು ಐದು ಸದಸ್ಯರು ಸಭೆಗೆ ಗೈರಾಗಿದ್ದರು.
