ಸಿಂದಗಿ : ಪುರಸಭೆ ಕಾರ್ಯಾಲಯದ ಚುನಾವಣೆ ನಿಮಿತ್ತ ಬಿಡಿ ಬಿಡಿಯಾಗಿ ಬರುತ್ತಿರುವ ಪುರಸಭೆ ಸದಸ್ಯರು ಈಗಾಗಲೇ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಾಂತವೀರ ಬಿರಾದಾರ ಆಗಮಿಸಿದ್ದು ಹಾಸೀಂ ಆಳಂದ, ಭೀಮಾ ಕಲಾಲ ಈಗಾಗಲೇ ಪುರಸಭೆಯಲ್ಲಿ ಹಾಜರಾತಿ ಹಾಕಿದ್ದಾರೆ.
ಗೋಲ್ಲಾಳ ಬಂಕಲಗಿಯೊಂದಿಗೆ ಆಗಮಿಸಿದ್ದ ರಾಜಣ್ಣ ನಾರಾಯಣಕರ ಉಪಾಧ್ಯಕ್ಷ ಸ್ಥಾನಕ್ಕೆ ನಾಮಾಂಕಿತ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಇದುವರೆಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಾಂಕಿತ ಸಲ್ಲಿಕೆಯ ಮಾಹಿತಿ ಖಾಸಗಿ ವ್ಯಕ್ತಿಗಳಿಂದ ಬಂದಿದ್ದು, ಅಧಿಕೃತವಾಗಿ ನಾಮಾಂಕಿತ ಸದಸ್ಯರ ಘೋಷಣೆ ಬಾಕಿ ಇದೆ. ವೇಗದೂತ ಜನದನಿ ಪ್ರಕಟಿಸಿದ “ಅವಿರೋಧ ಆಯ್ಕೆ ನಿಶ್ಚಿತ” ಸುದ್ದಿ ನಿಜವಾಗಿದೆ.
