17

ಸಿಂದಗಿ: ಮಾ.2 ರಿಂದ 3ರವರೆಗೆ ಪಟ್ಟಣದ ಹಜರತ್ ಖ್ವಾಜಾ ಹಾಗೂ ಸೈಫನ್ ಮುಲ್ಕಿ ಚಿಸ್ತಿ ಖಾದರಿ ರಹ ಸಿಂದಗಿ ಹಾಗೂ ಹಿರೋಡೇಶ್ವರರ 8ನೇ ಜಾತ್ರಾ ಮಹೋತ್ಸವ ನಡೆಯಲಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗಂಧದ ಮೆರವಣಿಗೆಯು ಮಹಾದೇವಪ್ಪ ಗಾಯಕವಾಡರವರ ಮನೆಯಿಂದ ಗೊಂಬೆ, ಡೊಳ್ಳು, ಕುದುರೆ ಕುಣಿತ, ಚಿಟ್ಟ ಹಲಗೆ ವಿವಿಧ ವಾದ್ಯ ಮೇಳಗಳೊಂದಿಗೆ ದರ್ಗಾ ತಲುಪಲಿದೆ. ಭಾವೈಕ್ಯತೆಯನ್ನು ಸಾರುವ ಈ ಜಾತ್ರೆಗೆ ತಾಲೂಕಿನ ಎಲ್ಲಾ ಸರ್ವ ಸಮಾಜದ ಜನರು ಭಾಗವಹಿಸಿ ಪ್ರಸಾದ ಸ್ವೀಕರಿಸಬೇಕು ಎಂದು ಕಮಿಟಿಯ ಸದಸ್ಯರು ವಿನಂತಿಸಿಕೊಂಡಿದ್ದಾರೆ.