Home News ಇಂದು ಅಷ್ಠ ಪರಿಷ್ಕಾರ ಪುಣ್ಯ ಪೂಜಾ ಮಹೋತ್ಸವ ಧಮ್ಮ ಕಾರ್ಯಕ್ರಮ

ಇಂದು ಅಷ್ಠ ಪರಿಷ್ಕಾರ ಪುಣ್ಯ ಪೂಜಾ ಮಹೋತ್ಸವ ಧಮ್ಮ ಕಾರ್ಯಕ್ರಮ

by vegadhut@gmail.com.
0 comments

 

ಸಿಂದಗಿ :  ತಥಾಗತ ಭಗವಾನ್ ಬುದ್ಧರು ಬೋಧಿಸಿರುವ ಧಮ್ಮವು ಸರ್ವರಿಗೂ ಸದಾಕಾಲ ಅವಶ್ಯ ಇರುವಂತಹ ಮಾರ್ಗವಾಗಿರುತ್ತದೆ.

ಭಗವಾನ್ ಬುದ್ಧರು ಮಾಡಿದ ನಿಯಮದಂತೆ ಬೌದ್ಧ ಭಿಕ್ಕುಗಳು  ಮಳೆಗಾಲದಲ್ಲಿ ವಿಹಾರದಲ್ಲಿಯೇ ಉಳಿದು ಧಮ್ಮವನ್ನು ಅಭ್ಯಾಸ ಮಾಡಿ ಧ್ಯಾನಾಸಕ್ತರಾಗುತ್ತಾರೆ. ಮತ್ತು ಉಪಾಸಕ / ಉಪಾಸಕಿಯರಿಗೆ ಧಮ್ಮ ಪ್ರವಚನ ಮಾಡುವರು, ಮಳೆಗಾಲ ಕಳೆದು ವರ್ಷವಾಸ ಮುಗಿದ ನಂತರ ಭಿಕ್ಕುಗಳು ಧಮ್ಮವನ್ನು ಪ್ರಸಾರ ಮಾಡುವ ಸಮಯದಲ್ಲಿ  ಛೀವರ್ ದಾನದ ಕಾರ್ಯಕ್ರಮವನ್ನು ಬೌದ್ಧ ುಪಾಸಕ / ುಪಾಸಕಿಯರು ಏರ್ಪಡಿಸಿರುತ್ತಾರೆ. ಈ ಸಂಸರ್ಭದಲ್ಲಿ ಬೌದ್ಧರಾದ ತಾವೂಗಳು ಭಾಗವಹಿಸಿ ಭಿಕ್ಕು ಸಂಘಕ್ಕೆ ದಾನವನ್ನು ನೀಡುವುದರ ಮೂಲಕ ಧಮ್ಮವನ್ನು ಬೆಳಸಬೇಕೆಂದು ವಿನಂತಿಸಿದರು.

banner

ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಭಿಕ್ಕುಗಳಾದ ವೆನ. ಡಾ. ಧಾತುದೇವ್ ಮಹಿಂದಾ ಥೇರೊ ಶ್ರೀಲಂಕಾ ಬುದ್ಧವಿಹಾರ ನಾಲಂದ, ಪೂಜ್ಯ ಭಂತೆ ಧಮ್ಮಾನಂದ ಥೇರೊ ಬುದ್ಧಸ್ಟ ಬುದ್ಧವಿಹಾರ ಅಣದೂರ ಜಿ||ಬೀದರ, ಪೂಜ್ಯ ಭಂತೆ ಮನೋರಕ್ಕಿತ ಥೇರೊ ಜೇತವನ ಬುದ್ಧವಿಹಾರ ಕೊಳ್ಳೆಗಾಲ ಚಾಮರಾಜನಗರ, ಪೂಜ್ಯ ಭಂತೆ ಬೋಧಿದತ್ತ ಥೇರೊ ಅಷ್ಟಾಂಗ ಮಾರ್ಗ ಧ್ಯಾನಕೇಂದ್ರ ಮೈಸೂರು, ಪೂಜ್ಯ ಭಂತೆ ಜ್ಞಾನಸಾಗರ ಥೇರೊ ಬೌದ್ಧಿಸ್ಟ ಬುದ್ಧವಿಹಾರ ಅಣದೂರ ಜಿ|| ಬೀದರ, ಪೂಜ್ಯ ಭಂತೆ  ಸಂಘಾನಂದ ಥೇರೊ  ಬುದ್ಧವಿಹಾರ ಕಲಬುರಗಿ, ಪೂಜ್ಯ ಭಂತೆ ವರಜ್ಯೋತಿ ಥೇರೊ ಬುದ್ಧವಿಹಾರ ಅಣದೂರ, ಪೂಜ್ಯ ಭಂತೆ ಧಮ್ಮಕೀರ್ತಿ ವಿಶ್ವಶಾಂತಿ ಬುದ್ಧವಿಹಾರ ಅಮಲಾಪೂರ ಜಿ|| ಬೀದರ, ಪೂಜ್ಯ ಭಂತೆ ಸುಗತಪಾಲ ಬಂತೇ  ಜೇತವನ ಬುದ್ಧವಿಹಾರ ಕೊಳ್ಳೆಗಾಲ ಚಾಮರಾಜನಗರ, ಪೂಜ್ಯ ಗೌತಮಿ ಮಾತಾಜೀ  ಸಾರಾನಾಥ ಬುದ್ಧವಿಹಾರ ಅಂತರಸಂತೆ ಜಿ||ಮೈಸೂರು. ಪೂಜ್ಯರು ಸಾನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮ ವಿವರ :

10 ಗಂಟೆಯಿಂದ 11  ಗಂಟೆವರೆಗೆ ಬುದ್ಧವಂದನೆ, 11 ರಿಂದ 12ರ ವರೆಗೆ ಸಂಗಿಕ ದಾನ ಮತ್ತು ಮದ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೆ  ಅಷ್ಟ ಪರಿಷ್ಕಾರ ದರ್ಶನ ಮೆರವಣಿಗೆ, ಸಾಯಂಕಾಲ 4 ಗಂಟೆಯಿಂದ ಉಪಹಾರ ವ್ಯವಸ್ಥೆ 5 ಗಂಟೆವರೆಗೆ,  ಸಂಜೆ 5 ರಿಂದ 7:30ರವರೆಗೆ ಧಮ್ಮ ಪ್ರವಚನ ಮತ್ತು ಬಿಕ್ಕು  ಸಂಘಕ್ಕೆ ಅಷ್ಟ ಪರಿಷ್ಕಾರ ದಾನ ಕಾರ್ಯಕ್ರಮ ರಾತ್ರಿ 7:30 ರ ನಂತರ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಭೋಜನ ವಿರುತ್ತದೆ ಎಂದು ಪೂಜ್ಯ ಭಂತೆ ಸಂಘಪಾಲ  ಧಮ್ಮ ವಿಜಯ ಬುದ್ಧವಿಹಾರ ಇವರು ತಿಳಿಸಿದ್ದಾರೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news