Home News ಮಿಲಟರಿ ಪರೇಡನೊಂದಿಗೆ ಮತದಾನ ಜಾಗೃತಿ ಅಭಿಯಾನ

ಮಿಲಟರಿ ಪರೇಡನೊಂದಿಗೆ ಮತದಾನ ಜಾಗೃತಿ ಅಭಿಯಾನ

by vegadhut@gmail.com.
0 comments

2023ರ ಸಾರ್ವತ್ರಿಕ ಚುನಾವಣೆಯ ನಿಮಿತ್ಯವಾಗಿ ಅಸ್ಸಾಂನ ಪ್ಯಾರಾ ಮಿಲಟರಿ ಸೈನಿಕರೊಂದಿಗೆ ಮೋರಟಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಿ ಸಿಂದಗಿ ಸಿಪಿಐ ಡಿ.ಹುಲುಗೆಪ್ಪ ಮಾತನಾಡಿದರು.


ಸಿಂದಗಿ: 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶಾಂತಿಯುತವಾಗಿ ಮತದಾನ ಮಾಡಬೇಕು ಎಂದು ಸಿಪಿಐ ಡಿ. ಹುಲುಗೆಪ್ಪ ಹೇಳಿದರು.  ಸಾರ್ವತ್ರಿಕ ಚುನಾವಣೆಯ ಪ್ರಯುಕ್ತವಾಗಿ ಅಸ್ಸಾಂನ್ ಪ್ಯಾರಾ ಮಿಲಟರಿ ಸೈನಿಕರೊಂದಿಗೆ ಮೋರಟಗಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಯಾವುದೇ ತರಹದ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೇಲ್ಲರ ಕರ್ತವ್ಯವಾಗಿದೆ. ಚುನಾವಣೆಯಲ್ಲಿ ಸಮಯದಲ್ಲಿ ಯಾರಾದರೂ ಗಲಾಟೆ ಮಾಡಿದರೆ ಅವರ ಮೇಲೆ ಕೂಡಲೇ ಎಫ್‌ಐಆರ್ ಮಾಡಲಾಗುವುದು. ಮುಂದೆ ಬರುವ ಚುನಾವಣೆಗಳಲ್ಲಿಯೂ ಸಹ ಅಂತವರನ್ನು ಚುನಾವಣೆಯ ಮುಂಚೆಯೇ ಜೈಲಿಗೆ ಕಳುಹಿಸಲಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷದ ಅಭ್ಯರ್ಥಿ ಅಥವಾ ಅವರ ಸಹಚರರು ನಮ್ಮ ಪಕ್ಷಕ್ಕೆ ಮತ ಹಾಕಬೇಕು ಎಂದು ಬೆದರಿಕೆ ಹಾಕುತಿದ್ದಾರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು. ಮತದಾನ ಶ್ರೇಷ್ಠವಾದುದ್ದು ಹಣ ಹೆಂಡಕ್ಕಾಗಿ ಮಾರಿಕೊಳ್ಳಬೇಡಿ ಎಂದು ಮನವಿ ಮಾಡಿದರು.

ಸೇನಾ ಪಡೆಗೆ ಗ್ರಾಮಸ್ಥರ ವತಿಯಿಂದ ಕುಳೆಕುಮಟಗಿ ಕನ್ನಡ ಪ್ರಾರ್ಥಮಿಕ ಶಾಲೆಯ ಶಿಕ್ಷಕ ಗುಂಡು ಶಾಬಾದಿ ಕುಟುಂಬದಿಂದ ಸರ್ವ ಸೈನಿಕರಿಗೆ ವಿಶೇಷವಾಗಿ ಸನ್ಮಾನಿಸಿದರು. ಮತದಾನ ಜಾಗ್ರತಿ ಕಾರ್ಯಕ್ರಮದÀಲ್ಲಿ ರೂಟ್ ಮಾರ್ಚ, ಪಿ.ಎಸ್.ಐ ಶಿವರಾಜ ನಾಯಕವಾಡಿ, ಎಎಸ್‌ಐ ಎಸ್.ಬಿ.ಉಕ್ಕಲಿ, ಎಸ್.ಬಿ.ಸಾಲೋಟಗಿ, ನಿಂಗಪ್ಪ ಪೂಜಾರಿ, ಸಶಸ್ತç ಸಿಮಾಬಲ ಸೇನಾಪಡೆ, ಸಿಂದಗಿ ಪೊಲೀಸ್ ಠಾಣೆಯ ಸರ್ವ ಸಿಬ್ಬಂದಿ ವರ್ಗ ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news