ಸಿಂದಗಿ : ನಗರದ ಪ್ರವಾಸಿ ಮಂದಿರದಲ್ಲಿ ತಾಲೂಕು ಪದಾಧಿಕಾರಿಗಳ ಆಯ್ಕೆ ಕುರಿತು ಕಾರ್ಯಕರ್ತರ ಸಭೆ ನಡೆಸಲಾಯಿತು. ಕರ್ನಾಟಕ ರಣಧೀರ ಪಡೆಯ ಸಂಘಟನೆಯ ರಾಜ್ಯಾಧ್ಯಕ್ಷ ಭೈರಪ್ಪ ಹರಿಶಕುಮಾರ ಆದೇಶದ ಮೇರೆಗೆ ಪದಾಧಿಕಾರಿಗಳ ಆಯ್ಕೆಯ ಸಭೆಯನ್ನು ಉತ್ತರ ಕರ್ನಾಟಕ ಅಧ್ಯಕ್ಷ ಸಂತೋಷ ಮಣಿಗಿರಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಇದೇ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾಗಿ ದಸ್ತಗೀರಸಾಬ ನದಾಫ, ಉಪಾಧ್ಯಕ್ಷರಾಗಿ ಸಂಶೋಷ, ನಾಯ್ಕಡಿ, ಕಾರ್ಯಾಧ್ಯಕ್ಷರಾಗಿ ಪರಸುರಾಮ, ಸಂಘಟನಾ ಕಾರ್ಯದರ್ಶಿಯಾಗಿ ಹಣಮಂತ, ಕುಂಬಾರ ತಾಲೂಕ ಸಂಚಾಲಕರಾಗಿ ದತ್ತು ಬಿರಾದಾರ, ನಗರ ಘಟಕ ಅಧ್ಯಕ್ಷರಾಗಿ ವಿಜಯಕುಮಾರ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾಗಿ ಅಜೀತ ಸೂರ್ಯವಂಶಿ, ಯವರನ್ನು ಪೂರ್ವಭಾವಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಉತ್ತರ ಕರ್ನಾಟಕ ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಸಂತೋಷ ಮಣಿಗಿರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
