Home News ರಾಮನನ್ನು ಪರಿಚಯಿಸಿದ ವಾಲ್ಮೀಕಿ ಮಂದಿರ ಅಯೋದ್ಯಯಲ್ಲಿ ಸ್ಥಾಪಿಸಲಿ ; ವಾಯ್.ಸಿ.ಮಯೂರ

ರಾಮನನ್ನು ಪರಿಚಯಿಸಿದ ವಾಲ್ಮೀಕಿ ಮಂದಿರ ಅಯೋದ್ಯಯಲ್ಲಿ ಸ್ಥಾಪಿಸಲಿ ; ವಾಯ್.ಸಿ.ಮಯೂರ

by vegadhut@gmail.com.
0 comments

ರಾಮ, ಲಕ್ಮಣ, ಸೀತಾ, ರಾವಣರನ್ನು ಜಗತ್ತಿಗೆ ಪರಿಚಯಿಸಿದ್ದು ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಎಂದು ವಾಯ್ ಸಿ ಮಯೂರ ಹೇಳಿದರು.

ಸಿಂದಗಿ : ತಾಲೂಕಾ ಆಡಳಿತ ಮತ್ತು ತಾಲೂಕಾ ಪಂಚಾಯತ ಮತ್ತು ಸಮಜಾ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಕಾರ್ಯಕ್ರಮದ  ಉಪನ್ಯಾಸ ನೀಡಿದ ಅವರು. ವಾಲ್ಮೀಕಿ ಕೇವಲ ಹೆಸರಲ್ಲ ಅದು ಒಂದು ಶಕ್ತಿ.  ಅಂದಿನ ರತ್ನಾಕರ ರಾಗಿದ್ದ ಅವರು ಕಳ್ಳತನ, ದರೋಡೆ, ಅವರ ವೃತ್ತಿಯಾಗಿತ್ತು ಎಂದು ನಾವು  ಹಲವು ದಂತ ಕಥೆಗಳಲ್ಲಿ ಓದಲು ಸಿಗುತ್ತದೆ.  ಆದರೆ ಅವರು ಬದುಕಿದ ಘಟನೆಗಳನ್ನು ಅರೆತು ದ್ಯಾನಕ್ಕೆ ತೆರಳುತ್ತಾರೆ ಧ್ಯಾನಕ್ಕೆ ಕುಳಿತ  ಅವರ ಮೇಲೆ ಹುತ್ತ ಆವರಿಸಿದಾಗ ಸಂಸ್ಕೃತ್ತದಲ್ಲಿ ಹುತ್ತಿಗೆ ವಾಲ್ಮೀಕಿ ಎನ್ನುತ್ತಾರೆ ಆದರಿಂದ ರತ್ನಾಕರರಾಗಿದ ಅವರಿಗೆ  ಜ್ಞಾನೋದಯವಾಗಿ  ಮಹರ್ಷಿ ವಾಲ್ಮೀಕಿ ಎಂದು ವಿಖ್ಯಾತರಾದರು. 

ಈ ಸಂಧಂರ್ಭದಲ್ಲಿ  ಡಾ.ಬಿ.ಆರ್.ಅಂಬೇಡ್ಕರ್ ಅವರ ನುಡಿ ನೆನಪಾಗುತ್ತದೆ ನಮ್ಮ ಕೃತ್ತಿಗಳನ್ನು ಪೂಜಿಸುವ ಜನರು ನಮ್ಮ ವಿಚಾರಗಳನ್ನು ಒಪ್ಪುವುದಿಲ್ಲ ಎಂಬುದು ಇದುವರೆಗೆ ಸತ್ಯವೆನುಸುತ್ತದೆ.  ಮಹರ್ಷಿ ವಾಲ್ಮಿಕಿ , ವ್ಯಾಸ, ಅಂಬೇಡ್ಕರ್ ಅವರ  ಕೃತ್ತಿಗಳನ್ನು ಆರಾದಿಸಿದರೆ ಅವರ ವಿಚಾರಗಳನ್ನು ಹಲವರು ವಿರೋಧಿಸುತ್ತಾರೆ. 

ಅಯೋದ್ಯಯಲ್ಲಿ ರಾಮ ಮಂದಿರ ಸ್ಥಾಪಿಸಿದ ಹಾಗೆ ರಾಮನನ್ನು ಪರಿಚಯಿಸಿದ ವಾಲ್ಮೀಕಿ ಅವರ ಮಂದಿರವು ಸ್ಥಾಪಿಸಿ ಬೇಡ ಸಮುದಾಯವನ್ನು ಗುರುತಿಸಲಿ. ವಾಲ್ಮೀಕಿ ಸಮುದಾಯ ಮೂಡನಂಬಿಕೆಗಳಿಂದ  ಹೊರಬಂದು ಸಮಾಜದ ಮಕ್ಕಳು ಶೀಕ್ಷಣ ವಂತರಾಗಬೇಕು  ಉನ್ನತ್ತ ಹುದ್ದೆಗಳನ್ನು ಅಲಂಕರಿಸುವಂತಾಗಲಿ ಅವರ ಏಳಿಗೆಗೆ ಸರಕಾರಗಳು ಬದ್ದತೆಯಿಂದ ಕಾರ್ಯೋನ್ಮುಖರಾಗಲಿ ಎಂದು ಹೇಳಿದರು. 

banner

ನಂತರ ಮಾತನಾಡಿದ ಪುರಸಭೆ ಸದಸ್ಯ ಶರಣಗೌಡ ಪಾಟೀಲ  ವಾಲ್ಮೀಕಿ ಅವರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಲಾಗುತ್ತಿರುವುದು ದುರದೃಷ್ಠಕರ ಿಂತಹ ಕಾರಣಕ್ಕಾಗಿಯೇ ಸರ್ಕಾರದ ಕಾರ್ಯಕ್ರಮಗಳಲ್ಲಿ ಮಾತ್ರ ವಾಲ್ಮೀಕಿ ಅವರನ್ನು ಕಾಣುತ್ತಿದೇವೆ. ಅವರ  ಜೀವನ ಚರಿತ್ರೆ ಮನೆ-ಮನಗಳಲ್ಲಿ ಪಸರಿಸುವ ಕೆಲಸ ಮಾಡಬೇಕಿದೆ.  ಹಾಗೂ ನಮ್ಮ ಸಮಾಜ ಚಿಕ್ಕದಾಗಿರುವುದರಿಂದ ನಿರ್ಲಕ್ಷ್ಯಕೋಳಗಾದಂತೆ ಕಾಣಿಸುತ್ತದೆ ನಮ್ಮ ಸಮಾಜಕ್ಕೆ ಪ್ರಮುಖವಾಗಿ ಸಮುದಾಯ ಭವನ ಹಾಗೂ ಮಹರ್ಷಿ ವಾಲ್ಮೀಕಿ ವೃತ್ತ ಸ್ಥಾಪನೆ ಮಾಡಬೇಕೆಂದು ಶಾಸಕರಲ್ಲಿ  ಮನವಿ ಮಾಡಿಕೊಂಡರು. 

ನಂತರ ಅಧ್ಯಕ್ಷೀಯ ನುಡಿಗಳನ್ನಾಡಿದ ಶಾಸಕ ಅಶೋಕ ಮನಗೂಳಿ   ನಾವು ಕೇವಲ ಭಾಷಣ ಮಾಡುವವರಾಗುತ್ತಿದೆವೆ ಕೆಲಸಗಳಲ್ಲಿ ಪ್ರವೃತ್ತರಾಗುತ್ತಿಲ್ಲ ಆದರಿಂದ  ಈ ರೀತಿಯಾಗುತ್ತಿದೆ. ನಾವು ಕೆಲಸದ ಕಡೆಗೆ ಗಮನ ಹರಿಸಿದಾಗ ಮಾತ್ರ ಬದಲಾವಣೆ ಸಾದ್ಯ ಮಹಾನ್ ನಾಯಕರು ನೀಡಿದ ಸಂದೇಶಗಳು ನಾವು ಜಾರಿಗೆ ಬರುವಂತೆ ಮಾಡಬೇಕು. ಮತ್ತು ಸಮಾಜದ ಬಹು ಬೇಡಿಕೆಗಳಾದ ಸಮುದಾಯ ಭವನ  ನನ್ನ ಮುಂದಿನ 2 ವರ್ಷದ ಅವಧಿಯಲ್ಲಿ ಮಾಡಿಸಿಕೊಡುವೆ ಹಾಗೂ ವೃತ್ತಕ್ಕೆ ಕೇಲವು ಕಾನೂನು ಅಡತಡೆಗಳಿವೆ ಅದನ್ನು ಕುಳಿತು ಮಾತನಾಡಿ ಬಗೆಹರಿಸುವ ಕೆಲಸ ಮಾಡೋಣಾ ಎಂದು ಭರವಸೆ ನೀಡಿದರು.  ಸಿದ್ದಲಿಂಗ ನಾಯ್ಕೋಡಿ ಮಾತನಾಡಿದರು. 

ಕ್ಷೇತ್ರ ಶಿಕ್ಷಣಾಧೀಕಾರಿ ಆರೀಪ ಬಿರಾದಾರ,  ಸಿ.ಪಿ.ಐ ಡಿ.ಹುಲಗಪ್ಪ,  ಸಮಾಜ ಕಲ್ಯಾಣ  ಅಧೀಕಾರಿ  ಎನ್.ಎಸ್.  ಭೂಸಗೊಂಡ, ಅಶೋಕ ಅಲ್ಲಾಪುರ , ಈರಣ್ಣ ಕುರಿ, ಪೀರು ಕೇರೂರ, ಆರ್.ಎಸ್. ಬನ್ನೇಟಿ ವೇದಿಕೆ ಮೇಲಿದ್ದರು ತಾಲೂಕಾ ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಸ್ವಾಗತಿಸಿದರು ಶೇಖ ಗುರುಗಳು ಕಾರ್ಯಕ್ರಮ  ನಿರೂಪಿಸಿದರು ಸಮಾಜ ಕಲ್ಯಾಣ ಿಲಾಖೆಯ ಸಿಬ್ಬಂದಿವರ್ಗ ಹಾಗೂ ತಾಲೂಕಾ ಸಿಬ್ಬಂದಿಗಳು  ವಿವಿಧ ಸಮಾಜದ ಮುಖಂಡರು ಭಾಗಿಯಾಗಿದ್ದರು. 

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news