ಸಿಂದಗಿ : ನಗರದ ಸಾರ್ವಜನಿಕ ಆಸ್ಪತ್ರೆಗೆ ದೀಡಿರ ಬೇಟಿ ನೀಡಿದ ಲೋಕಾಯುಕ್ತ ಉಪಅಧೀಕ್ಷಕ ಅರುಣ ಬಿ ನಾಯಕ ನೇತೃತ್ವದ ತಂಡ.
ಸಾರ್ವಜನಿಕ ಆಸ್ಪತ್ರೆಯ ಪ್ರತಿ ಕೋಣೆ- ಕೋಣೆಗಳು ವೀಕ್ಷಿಸಿ ಕಡತಗಳು ಪರಿಶೀಲಿಸಿ ಪತ್ರಿಕಾ ಮಾಧ್ಯಮದೊಂದಿಗೆ ಮಾತನಾಡಿದ ಅಧೀಕ್ಷಕರು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ, ಹೇಚ್ಚು ಜನರು ಹೊರಗುತ್ತಿಗೆ ಆದಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದಾರೆ, ಸಿಬ್ಬಂದಿ ಸಲುವಾಗಿ ಮೇಲಾಧಿಕಾರಿಗಳಿಗೆ ಪತ್ರ ಬರೆಯುವಂತೆ ಸೂಚಿಸಲಾಗಿದೆ. ಸ್ವಚ್ಛತೆ ಆಸ್ಪತ್ರೆಯಲ್ಲಿ ಮರೀಚಿಕೆಯಾಗಿದೆ ಅದು ಸುಧಾರಿಸಬೇಕು ಮತ್ತು ಆಸ್ಪತ್ರೆಯಲ್ಲಿರುವ ಕೋಣೆಗಳಿಗು ನಾಮಪಲಕಕ್ಕು ಯಾವುದೇ ಸಂಬಂಧವಿಲ್ಲ ಅದನ್ನು ಸರಿಪಡಿಸುವಂತೆ ಹೇಳಲಾಗಿದೆ. ಯಾವುದೇ ಕಡತಗಳು ಪೂರ್ಣಗೊಂಡಿಲ್ಲ ಎಲ್ಲ ಸೌಕರ್ಯಗಳು ಒಂದು ತಿಂಗಳೊಳಗಾಗಿ ಅಚ್ಚುಕಟ್ಟಾಗಿ ಮಾಡಬೇಕು ಇಲ್ಲದೆ ಹೋದರೆ ಅದಕ್ಕೆ ನೇರ ಹೋಣೆಯಾಗುತ್ತಿರಿ ಎಂದು ಎಚ್ಚರಿಕೆ ನೀಡಲಾಗಿದೆ ಎಂದರು.

ಇದು ಸಾರ್ವಜನಿಕರು ದೂರವಾಣಿ ಮುಖಾಂತರ ನೀಡಿದ ದೂರು ಆದರಿಸಿ ದೀಡಿರ್ ಬೇಟಿ ನೀಡಲಾಗಿದೆ, ಆಸ್ಪತ್ರೆಗೆ ಬಂದ ಸಾರ್ವಜನಿಕರು ಲಂಚದ ಬಗ್ಗೆ ಯಾವುದೇ ಗಂಭೀರ ಆರೋಪಗಳು ಕಂಡುಬಂದಿಲ್ಲ, ಆದರಿಂದ ಜನರಿಗೆ ನೀಡಬೇಕಾದ ಮೂಲಭೂತ ಸೌಕರ್ಯಗಳು ವದಗಿಸಬೇಕಾಗಿದೆ ಅದಕ್ಕಾಗಿ ಕಾಲಾವಕಾಶ ನೀಡಲಾಗಿದೆ ಎಂದು ಉಪಅಧೀಕ್ಷಕ ಅರುಣ ಬಿ ನಾಯಕ ತಿಳಿಸಿದರು. ಲೋಕಾಯುಕ್ತ ಸಿ.ಪಿ.ಆಯ್. ಆನಂದ ಡೋಣಿ ಇದ್ದರು.

ತಾಲೂಕಾ ಆರೋಗ್ಯ ವೈಧ್ಯಾಧಿಕಾರಿ ರಾಮಕೃಷ್ಣ ಇಂಗಳೆ, ಆಸ್ಪತ್ರೆಯ ಮಾಹಿತಿ ನೀಡಿದರು. ಡಾ.ಎಂ.ಬಿ ಬಡಿಗೇರ, ಡಾ. ವಿಜಯ ಮಹಾಂತೇಶ, ಡಾ. ದೀಪ್ತಿ ಪಾಟೀಲ, ಡಾ. ಶಕುಂತಲಾ, ಹಳ್ಳಿ, ಡಾ. ರವಿ ಬತಗುಣಕಿ ತಮ್ಮ ವಿಭಾಗದ ಮಾಹಿತಿ ವಿವರಿಸಿದರು. ತಹಶೀಲ್ದಾರ ಗ್ರೇಡ್-2 ಅಧಿಕಾರಿ ಪ್ರಕಾಶ ಸಿಂದಗಿ, ಪುರಸಭೆಯ ಕಿರಿಯ ಆರೋಗ್ಯ ಅಧಿಕಾರಿ ಎನ್.ಎಚ್.ಉಸ್ತಾದ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
#lokayuktha
