Home Uncategorized ಎಎಪಿ ಆಡಳಿತದ ನಕಲು ಕಾಂಗ್ರೇಸ್ – ಬಿಜೆಪಿ ಆಶ್ವಾಸನೆಗಳು ; ಐನಾಪುರ

ಎಎಪಿ ಆಡಳಿತದ ನಕಲು ಕಾಂಗ್ರೇಸ್ – ಬಿಜೆಪಿ ಆಶ್ವಾಸನೆಗಳು ; ಐನಾಪುರ

by vegadhut@gmail.com.
0 comments


ಸಿಂದಗಿ : ಏಪ್ರೀಲ್ 30ರಂದು ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀ ಯ ಪಕ್ಷವೆಂದು ಮಾನ್ಯತೆ ನೀಡಿರುವುದು ಸಂತಸದ ವಿಷಯ ಎಂದು ಎಎಪಿ ಪಕ್ಷದ ರಾಜ್ಯ ಉಪಾದ್ಯಕ್ಷರಾದ ರೋಹನ ಐನಾಪುರ ಹೇಳಿದರು.
ಖಾಸಗಿ ಹೊಟೇಲ್ ಒಂದರಲ್ಲಿ ಸುದ್ದಿಗೋಷ್ಠಿ ಕುರಿತು ಮಾತನಾಡಿದ ಅವರು ಪ್ರಥಮವಾಗಿ 80, ಎರಡನೇ ಪಟ್ಟಿಯಲ್ಲಿ 60, ಹಾಗೂ ತೃತ್ತಿಯ ಪಟ್ಟಿಯಲ್ಲಿ 28 ಅಭ್ಯರ್ಥಿಗಳ ಇಗಾಗಲೆ ಘೋಷಣೆ ಮಾಡಿದ್ದು, ವಿಜಯಪುರ ಜಿಲ್ಲೆಯಲ್ಲಿ 8 ಮತಕ್ಷೇತ್ರದಲ್ಲಿ 5 ಅಭ್ಯರ್ಥಿಗಳ ಹೆಸರು ಸೂಚಿಸಲಾಗಿದೆ. ಇಂಡಿ ಡಾ.ಗೋಪಾಲ ಪಾಟೀಲ, ವಿಜಯಪುರ ನಗರ ಹಾಸಿಂಪೀರ ವಾಲೀಕಾರ, ನಾಗಠಾಣ ( ಮೀಸಲು ಕ್ಷೇತ್ರ ) ಗುರು ಚವ್ಹಾಣ, ದೇ.ಹೀಪ್ಪರಗಿ ಬಸಲಿಂಗಪ್ಪ ಇಂಗಳಗಿ ಹಾಗೂ ಸಿಂದಗಿ ಕ್ಷೇತ್ರದಿಂದ ಹಿರಿಯರಾದ ಮುರಗೇಪ್ಪಗೌಡ ರದ್ದೇವಾಡಗಿ ಅವರನ್ನು ಎಎಪಿ ಪಕ್ಷದ ಅಧೀಕೃತ ಅಭ್ಯರ್ಥಿಗಳಾಗಿದ್ದಾರೆ.

ಶಿಕ್ಷಣ, ಆರೋಗ್ಯ, ಮಹಿಳೆಯರಿಗೆ ಉಚಿತ ಬಸ ಪಾಸ್, ಉಚಿತ ವಿದ್ಯುತ್, ನೀಡಿದ ಸಾಮಾನ್ಯರ ಪರವಾದ ಸರಕಾರ ಎಂದು ಹೇಸರುವಾಸಿಯಾಗಿದ್ದು ಅದರ ಪರಿಣಾಮವಾಗಿ ಇಂದು ಪಂಜಾಬ್ ನಲ್ಲಿಯು ಅಧಿಕಾರ ಹಿಡದಿದ್ದೇವೆ. ಎಎಪಿ ಸರಕಾರದ ಮಂತ್ರಿಗಳು ಭ್ರಷ್ಟಾಚಾರದಲ್ಲಿ ಭಾಗಿಯಾದ ವಿಷಯ ತಿಳಿಯುತ್ತಲೆ ಅವರ ವಿರುದ್ದು ದೂರು ದಾಖಲಿಸಿ ದಿಟ್ಟ ಹೇಜ್ಜೆ ಇಡುತ್ತಿದೆ. ನಾವು ಇಂದು ನಮ್ಮ ಆಡಳಿತವನ್ನು ನೋಡಿ ಕಾಂಗ್ರೇಸ್-ಬಿಜೆಪಿ ಪಕ್ಷಗಳು ತಮ್ಮ ಪ್ರಣಾಳಿಕೆ ನೀಡುತ್ತಿವೆ ಅದರಂತೆ ಕಾಂಗ್ರೇಸ್ ಒಂದು ಹೇಜ್ಜೆ ಮುಂದೆ ಇಟ್ಟು ಗ್ಯಾರಂಟಿ ಕಾರ್ಡ ನೀಡುತ್ತಿದೆ. ಎಎಪಿ ಪಕ್ಷದ ಆಡಳಿತ ಬೇರೆ ಪಕ್ಷದವರು ಕಾಫಿ ಮಾಡುವುದರಿಂದ ನಾವು ಸಪಲರಾಗುತ್ತಿದೆವೆ ಎಂದು ಸಂತಸವಾಗುತ್ತಿದೆ ಎಂದರು.

ಕಾಂಗ್ರೇಸ್ ಪಕ್ಷದಲ್ಲಿ ಮೂರು ಸಲ ಟಿಕೇಟ್ ಗಾಗಿ ಅರ್ಜಿಹಾಕಿದೆ ಆದರೆ ಸಾಮಾಜಿಕ ನ್ಯಾಯ, ಪಕ್ಷನೀಷ್ಠೆ ಪರಿಗಣಿಸಿ ನಾನು ಸುಮಾರು ವರ್ಷಗಳಕಾಲ ಕಾಂಗ್ರೇಸ್ ಪಕ್ಷಕ್ಕೆ ದುಡಿದಿರುವುದು ಸತ್ಯ. 25 ವರ್ಷಗಳ ಹಿಂದೆ ಅದು ಇತ್ತು ಎಂದಲು ನಾನು ಭಾವಿಸುತ್ತೇನೆ. ಆದರೆ ಇತ್ತೀಚಿಗೆ ಭಂಡವಾಳ ಶಾಹಿಗಳನ್ನು ಬೆಂಬಲಿಸುವ ಪಕ್ಷವಾಗಿದೆ ಎಂದು ಹೇಳಲು ಇಂದು ಹಿಂಜರಿಯುವುದಿಲ್ಲ. ದೇಶದಲ್ಲಿ ಇಂದು ಎಲ್ಲ ರಾಜಕೀಯ ಪಕ್ಷಗಳು ಉದ್ಯಮವಾಗಿ ಪರಿವರ್ತನೆ ಮಾಡಿವೆ. ಅದರಲ್ಲಿ ಅರವಿಂದ ಕೇಜ್ರಿವಾಲ ಅವರು ವಿಶೇಷ ರೀತಿಯಲ್ಲಿ ಸರಕಾರ ನಡೆಸುತ್ತಿದ್ದು ಗಮಾನರ್ಹವಾಗಿದೆ ಎಂದು ಸಿಂದಗಿ ಅಭ್ಯರ್ಥಿ ಮುರಗೇಪ್ಪಗೌಡ ರದ್ದೇವಾಡಗಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ಭೋಗೇಶ ಸೋಲ್ಲಾಪುರ ಮಾತನಾಡಿದರು. ಶಬೀರ ಪಟೇಲ ಹಾಗೂ ಎಎಪಿಯ ಹಲವು ಕಾರ್ಯಕರ್ತರು ಭಾಗಿಯಾದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news