
ಸಿಂದಗಿ : ನಾಮಪತ್ರ ಸಲ್ಲಿಸುವ ಪ್ರಥಮ ದಿನವಾದ ಇಂದು ಬೆಳ್ಳಿಗೆ ಶಾಸಕ ರಮೇಶ ಭೂಸನೂರ ಪ್ರಥಮವಾಗಿ ತಮ್ಮ ಪಕ್ಷದ ಅಧ್ಯಕ್ಷರಾದ ಈರಣ್ಣ ರಾವೂರ, ವಕೀಲ ಅರವಿಂದ ಕನ್ನೂರ, ಸಿದ್ದನಗೌಡ ಪಾಟೀಲ, ಪೀರು ಕೆರೂರ ಅವರೊಂದಿಗೆ ಚುನಾವಣಾಧಿಕಾರಿ ಸಿದ್ರಾಮ ಮಾರಿಹಾಳ ಅವರಿಗೆ ನಾಮಪತ್ರ ಸಲ್ಲಿಸಿದರು.

ಚುನಾವಣಾಧಿಕಾರಿರವರಿಗೆ ಅಫಿಡೆವಿಟ್ ನೀಡಿದ ರಮೇಶ ಬಾಳಪ್ಪ ಭೂಸನೂರ 35,55,910 ರೂಗಳ ಆದಾಯ ಅವರ ಹೆಸರಲ್ಲಿದ್ದರೆ, ಅವರ ಧರ್ಮಪತ್ನಿ ಲಲಿತಾಬಾಯಿ ರಮೇಶ ಭೂಸನೂರ 9.09.610 ಹಾಗೂ ಅವರ ಮಗನಾದ ಮಂಜುನಾಥ ಇವರ ಹೆಸರಿಗೆ 4,86,000 ಸಾವಿರ ರೂಗಳನ್ನು 31ನೇ ಮಾರ್ಚ 2023 ಆದಾಯ ತೆರಿಗೆ ವಿವರ ಪಟ್ಟಿಯಲ್ಲಿ ತೋರಿಸಿರುವ ಅಫಿಡಿವಿಟ್ ಸಲ್ಲಿಸಿದ್ದಾರೆ. ಕುಟುಂಬದ ಒಟ್ಟು ಸದಸ್ಯರಲ್ಲಿ ಡೈಮಂಡ, ಬಂಗಾರ, ಬೆಳ್ಳಿ ಸೇರಿದಂತೆ 70 ಲಕ್ಷದ ಒಡುವೆ ವೈಡೂರೆ ಹಾಗೂ ಹಲವು ಜಮೀನಿನ ಬಗ್ಗೆ ಅಫಿಡಿವಿಟ್‌ನಲ್ಲಿ ಮಾಹಿತಿ ಸಲ್ಲಿಸಿದ್ದಾರೆ.
ಕಾಂಗ್ರೇಸ್ ಟಿಕೇಟ ಆಕಾಂಕ್ಷಿ ಅಶೋಕ ಮನಗೂಳಿ ನಾಮಪತ್ರ ಸಲ್ಲಿಕೆ

ಅಶೋಕ ಮನಗೂಳಿ ನಾಮಪತ್ರ ಸಲ್ಲಿಸಿದರು.