ದೆಹಲಿ : ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ಸೋಮುವಾರ ಚುನಾವಣೆ ನಡೆಸಲಾಗಿತ್ತು.
ಇಂದು ಪಲಿತಾಂಶ ಪ್ರಕಟವಾಗಿದ್ದು, ೧೩೭ ವರ್ಷ ಇತಿಹಾಸವಿರುವ ಕಾಂಗ್ರೇಸ್ ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕದ ಹಿರಿಯ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ 7897 ಮತಗಳು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. 416 ಮತಗಳು ಅಮಾನ್ಯವಾದರೆ, ಪ್ರತಿಸ್ಪರ್ದಿ ಶಶಿ ತೆರೂರ ಅವರಿಗೆ 1072 ಮತಗಳನ್ನು ಪಡೆದಿದ್ದಾರೆಂದು ಮಧುಸೂದನ ಮೀಸ್ತ್ರೀ ದೆಹಲಿಯ ಕಾಂಗ್ರೇಸ್ ಕಾರ್ಯಾಲಯದಲ್ಲಿ ಪಲಿತಾಂಶ ಘೋಷಣೆ ಮಾಡಿದರು.
ಪರಾಜಿತ ಅಭ್ಯರ್ಥಿ ಶಶಿ ತೆರೂರ ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಿದ್ದು ನನ್ನ ಸಂಪೂರ್ಣ ಸಹಕಾರವನ್ನು ಸದಾಕಾಲ ನೀಡುವೆ ನಮ್ಮ ಸ್ಪರ್ಧೆಯಿಂದ ಕಾಂಗ್ರೇಸ್ ಮತ್ತಷ್ಟು ಬಲಗೊಂಡಿದೆ ಎಂದು ತಮ್ಮ ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.

