ಸಾಮಾಜಿಕ ಜಾಲತಾಣ: ಬೆಳಿಗ್ಗೆ ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ ಮಾಡಿದ ಟ್ವೀಟ್ ಹಲವು ಚರ್ಚೆಗಳು ಹುಟ್ಟುಹಾಕಿತ್ತು ಈಗ ಬಿಜೆಪಿಯ ಇನ್ನೋರ್ವ ಮಾಜಿ ಸಚಿವ ಟ್ವೀಟ್ ಮುಖಾಂತರ ಸುಧಾಕರ ಇವರಿಗೆ ಪ್ರಶ್ನೆ ಮಾಡಿದ್ದಾರೆ.
ಮಾಜಿ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ ಸರಣಿ ಟ್ವೀಟ್ ಮುಖಾಂತರ ಹಲವು ವಿಷಯಗಳ ಹಂಚಿಕೊಂಡಿದ್ದು ಸುಧಾಕರ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ಟ್ವೀಟ್ ಮಾಡಿದ್ದಾರೆ. ಅವರು ಸರಣಿ ಟ್ವೀಟ್ ಗಳು ಕೆಳಗಿನಂತಿವೆ.
ಮಾನ್ಯ ಸಿದ್ದರಾಮಯ್ಯ ರವರನ್ನು ನಾನು ಕೂಡ ಹಲವಾರು ಬಾರಿ ಭೇಟಿ ಮಾಡಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮ ಕ್ಷೇತ್ರದಲ್ಲಿ ಹಾಗೂ ನಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ಏನು ಕೆಲಸ ಕಾರ್ಯಗಳು ಆಗುತ್ತಿಲ್ಲವೆಂದು ಹೇಳಿಕೊಂಡಾಗ ಲೋಕಸಭೆ ಚುನಾವಣೆವರೆಗೆ ಸುಮ್ಮನಿರಿ ಎಂದು ಹೇಳಿದ್ದರು ಇದು ಸತ್ಯ.
ಮಾಜಿ ಸಚಿವರಾದ ಸುಧಾಕರ್ ರವರು ಇಂದು ಮಾನ್ಯ ಸಿದ್ದರಾಮಯ್ಯ ರವರ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮಾತುಗಳು ಸತ್ಯಕ್ಕೆ ದೂರವಾಗಿದ್ದು, ಸುಧಾಕರ್ ರವರು ಚುನಾವಣೆಯಲ್ಲಿ ಸೋತ ನಂತರ ಭ್ರಮನಿರಸನರಾಗಿ ಈ ಮಾತುಗಳನ್ನು ಹೇಳಿದ್ದಾರೆ. ಹಾಗಾದರೆ, ಇಷ್ಟು ದಿನ ಏಕೆ ಸುಮ್ಮನಿದ್ದರು?
ಬಿಜೆಪಿ ಸೇರಲು ಸಿದ್ದರಾಮಯ್ಯರವರ ಪ್ರೇರಣೆ, ಪರೋಕ್ಷ ಅಥವಾ ಅಪರೋಕ್ಷ ಪಾತ್ರ ಇತ್ತೆಂದು ಸುಧಾಕರ್ ರವರು ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುವರೆ?
ಇಷ್ಟು ದಿನ ಮೌನವಾಗಿದ್ದು?ಈಗ ಇದರ ಪ್ರಸ್ತಾಪದ ಮರ್ಮವಾದರೂ ಏನು?
https://twitter.com/MTB_Nagaraj/status/1658799604190662660?t=Sy7Cy6J7dpHIeP9N_BjZAQ&s=19
