ಸಿಂದಗಿ : ನಗರದ ಅಂಬೇಡ್ಕರ್ ವೃತ್ತದಲ್ಲಿ ಧಮ್ಮ ವಿಜಯ ಬುದ್ಧವಿಹಾರ ಸಿಂದಗಿ ಉಪಾಸಕ ಉಪಾಸಕಿಯರಿಂದ ಗೌರವ ನಮನ ಸಲ್ಲಿಸಲಾಯಿತು.
ತಾಲೂಕಾ ಆಡಳಿತದಿಂದ ಹಮ್ಮಿಕೊಂಡಿದ್ದ ಬಾಬಾಸಾಹೇಬ ಅಂಬೇಡ್ಕರ್ ರವರ 132ನೇ ಜಯಂತ್ಯುತ್ಸವ ನಿಮಿತ್ಯವಾಗಿ ಭಂತೆ ಸಂಘಪಾಲ ಇವರ ಸಮ್ಮುಖದಲ್ಲಿ ಬುದ್ಧ ವಂದನೆ, ಪಂಚಶೀಲ ಹೇಳಿದರು. ಶಾಸಕ ರಮೇಶ ಭೂಸನೂರ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ತಾಲೂಕಾ ದಂಡಾಧಿಕಾರಿಗಳಾದ ನಿಂಗಣ್ಣ ಬಿರಾದಾರ, ಸಮಾಜ ಕಲ್ಯಾಣಾಧಿಕಾರಿ ಎನ್.ಎಸ್.ಭೂಸಗೊಂಡ, ಎಚ್.ವಾಯ್.ಸಿಂಗೆಗೋಳ, ಪಿ.ಎಸ್.ಆಯ್. ಶಿವರಾಜ ನಾಯಕವಾಡಿ, ಸೇರಿದಂತೆ ಹಲವು ಅಧಿಕಾರಿಗಳು ಪೂಜೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ದಲಿತ ಮುಖಂಡ ರಾಜಶೇಖರ ಕೂಚಬಾಳ ಮಾತನಾಡಿ ನೀತಿಸಂಹಿತೆ ಉಲ್ಲಂಘನೆ ಕಾರಣದಿಂದ ಸರಳವಾಗಿ ಜಯಂತ್ಯೂತ್ಸವ ಆಚರಿಸಲಾಗುತ್ತಿದೆ. ಗೌರವನಮನ ಸಲ್ಲಿಸಲು ಆಗಮಿಸಿದ ಎಲ್ಲರಿಗೂ ಸ್ವಾಗತಿಸಿ ವಂದಿಸಿದರು.
ರಾಜ್ಯ ಲಿಂಬೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪುರ, ಅಶೋಕ ಸುಲ್ಪಿ, ಚಂದ್ರಕಾಂತ ಶಿಂಗೆ, ಶರಣು ಶಿಂದೆ, ಸಾಯಬಣ್ಣ ಪುರದಾಳ, ಮಹೇಶ ಜಾಬಾನವರ, ಶರಣಪ್ಪ ಸುಲ್ಪಿ, ಗೋಲ್ಲಾಳಪ್ಪಗೌಡ ಮಾಗಣಗೇರಿ, ಸಮಾಜದ ಹಿರಿಯರಾದ ಸಂಗಪ್ಪ ಕೂಚಬಾಳ, ವಿಠ್ಠಲ ಹೊಸಮನಿ, ಪುರಸಭೆ ಸದಸ್ಯರಾದ ಪ್ರತಿಭಾ ಕಲ್ಲೂರ, ಶರಣಗೌಡ ಪಾಟೀಲ ಸೇರಿದಂತೆ ಹಲವಾರು ಭಾಗಿಯಾದರು.
