ಸಿಂದಗಿ : ಕೆಲ ದಿನಗಳ ಹಿಂದೆ ಸಿಂದಗಿ ನಗರದಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಒಳಚರಂಡಿ ಕಾಮಗಾರಿ ನಿರ್ವಹಿಸುತ್ತಿರುವ ಸಂಭಂದಪಟ್ಟ ಕಾರ್ಯನಿರ್ವಾಹಕ ಅಭಿಯಂತರರು ವಿಫಲರಾಗಿದ್ದಾರೆ.

ಅಧಿಕಾರಿಗಳು ನಿರ್ಲಕ್ಷ್ಯದಿಂದ ದಿನಾಂಕ 11 ಮಾರ್ಚ್ 2023 ರಂದು ಡಾ||ಅಂಬೇಡ್ಕರ್ ವೃತ್ತದಲ್ಲಿ ಕೆಲಸ ಮಾಡುತ್ತಿದ್ದ ದಿವಂಗತ ಜಗಪ್ಪ ಸುಲ್ಪಿ ಎಂಬ ದಲಿತ ಸುತ್ತಲು ಸುರಕ್ಷತೆ ಇಲ್ಲದ ಆಳವಾದ ಗುಂಡಿಯಲ್ಲಿ ಬಿದ್ದು ಇರುತ್ತಾನೆ ಆದರೆ ಪೊಲೀಸರು ಮತ್ತು ಗುತ್ತಿಗೆದಾರರು ಶ್ಯಾಮಿಲಾಗಿ ಯಾವುದೇ ಕೇಸ್ ದಾಖಲಿಸದೆ ಜಗಪ್ಪನನ್ನು ದವಾಖಾನೆಗೆ ಸೇರಿಸುವ ನಾಟಕವಾಡಿರುತ್ತಾರೆ. ಆದರೆ ಮೃತ್ತ ಜಗಪ್ಪ ಸುಲ್ಪಿ ದಿನಾಂಕ 15 ಮಾರ್ಚ್ 2023 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ತನಿಖೆ ಮಾಡಬೇಕಿದ್ದ ಅಧಿಕಾರಿಗಳು ತರಾತುರಿಯಲ್ಲಿ ಶವಸಂಸ್ಕಾರ ಮಾಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಜಿಲ್ಲಾ ಜಾಗೃತ ದಳದ ಸದಸ್ಯರಾದ ರಾಜಶೇಖರ ಕೂಚಬಾಳ ತಾಲೂಕಾ ದಂಡಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಮೃತ್ತ ದಿವಂಗತ ಜಗಪ್ಪ ಸುಲ್ಪಿ
ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಬಡ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಾಗಿದೆ ಇದನ್ನು ಮರು ತನಿಖೆ ಮಾಡಬೇಕೆಂದು ಹೇಳಿದರು.
