
ಸಿಂದಗಿ: ಈ ದಿನದಂದು 100 ದಿನಗಳ ಕಾಲ ಕೆಲಸವನ್ನು ಪೊರೈಸಿದ ಗ್ರಾಮೀಣ ಕುಟುಂಬಗಳಿಗೆ ಮತ್ತು ಸದಸ್ಯರಿಗೆ ಸನ್ಮಾನಿಸುವ ಮುಖಾಂತರ ಮುಂಬರುವ ದಿನಮಾನಗಳಲ್ಲಿ ನರೇಗಾ ಕಾರ್ಯದಲ್ಲಿ ಪಾಲ್ಗೋಳ್ಳಲು ಪ್ರೇರೆಪಿಸಲಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ಹೇಳಿದರು.
ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸಿಂದಗಿ ತಾಲೂಕು ಪಂಚಾಯತ್ ವತಿಯಿಂದ ಹಮ್ಮಿಕೊಂಡ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ‘ನರೇಗಾ ದಿವಸ್’ ಆಚರಣೆಯಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆಯ ಅಡಿಯಲ್ಲಿ ವ್ಯಯಕ್ತಿಕ ಕಾಮಗಾರಿಗಳಾದ ತೋಟಗಾರಿಕಾ ಬೆಳೆ, ರೇಷ್ಮೆ, ಕೃಷಿ ಹೊಂಡ, ಬದು ನಿರ್ಮಾಣ ಕಾಮಗಾರಿ ಮಾಡಿಕೊಂಡು ಉತ್ತಮ ಜೀವನ ಸಾಗಿಸಿ ಎಂದು ಸಲಹೆ ನೀಡುತ್ತಾ, ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ. ಈ ಯೋಜನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸರಕಾರವು ಹಲವಾರು ಯೋಜನೆಯನ್ನು ಹಾಕಿಕೋಳ್ಳುತ್ತೀದೆ. ಕಾರಣ ಗ್ರಾಮೀಣ ಭಾಗದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಜನೆಯಲ್ಲಿ ಭಾಗವಹಿಸಬೇಕು ಎಂದರು.
ಇದೇ ವೇಳೆ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಗ್ರಾಮ ಪಂಚಾಯತ್ ಅಧ್ಯಕ್ಷರ ಪ್ರತಿನಿಧಿ ಪೈಗಂಬರ್ ಮುಲ್ಲಾ, ಪಿಡಿಓ ವಸಂತ ಅಮೀನಗಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಮೇಶ ಚಿನ್ನಕರ, ಸದಸ್ಯರಾದ ಮಡಿವಾಳಪ್ಪ ಜವಳಗಿ, ಶಂಕ್ರಯ್ಯ ಮಠ, ಪರಶುರಾಮ್ ಜವಳಗಿ, ಬಾಬು ರಾಠೋಡ, ತಾಲೂಕು ತಾಂತ್ರಿಕ ಸಂಯೋಜಕ ಶರಣಗೌಡ ಪಾಟೀಲ್, ಇಂಜಿನಿಯರ್ ಶಂಕರ ಪೂಜಾರಿ, ರವಿ ಜಮಖಂಡಿ, ಸಂತೋಷ ಪಾಸೋಡಿ, ಚಂದ್ರು ಶೇಗುನಸಿ, ಅಕ್ಷತಾ ಪವಾರ್, ಸಾಗರ್ ಶೆಟ್ಟಿ, ಸಿಎಚ್‌ಓ ಪ್ರಿಯಾ ರಾಜಗಳೇ, ಆಶಾಗಳಾದ ಸುನಂದಾ ಕಾಣ್ಣೂರ, ಗೀತಾ ಮಣೂರ, ಗ್ರಾ.ಪಂ ಸಿಬ್ಬಂದಿಗಳಾದ ಶೇಖರ್ ಕಾಂಬಳೆ, ಮೈಬೂಬ್ ನದಾಫ್, ನಾಗೇಶ ತಳವಾರ ಸೇರದಂತೆ ಮತ್ತಿತರರಿದ್ದರು. ಕಾರ್ಯದರ್ಶಿ ಶಿವಕುಮಾರ್ ಮಠ ಸ್ವಾಗತಿಸಿದರು. ಐಇಸಿ ತಾಲೂಕು ಸಂಯೋಜಕ ಭೀಮರಾಯ ಚೌಧರಿ ನಿರೂಪಿಸಿ ವಂದಿಸಿದರು.
