Home News ನನ್ನ ತಂಗಿ ವಿಶಾಲಾಕ್ಷಿಗೆ ನಿಮ್ಮ ಮಡಿಲಿಗೆ ಹಾಕುತ್ತಿದ್ದೆನೆ, ಅವಳನ್ನು ಗೇಲ್ಲಿಸಿ ದಿ.ಪಾಟೀಲರಿಗೆ ಗೌರವ ಸಲ್ಲಿಸಿ ; ಹೆಚ್.ಡಿ.ಕೆ

ನನ್ನ ತಂಗಿ ವಿಶಾಲಾಕ್ಷಿಗೆ ನಿಮ್ಮ ಮಡಿಲಿಗೆ ಹಾಕುತ್ತಿದ್ದೆನೆ, ಅವಳನ್ನು ಗೇಲ್ಲಿಸಿ ದಿ.ಪಾಟೀಲರಿಗೆ ಗೌರವ ಸಲ್ಲಿಸಿ ; ಹೆಚ್.ಡಿ.ಕೆ

by vegadhut@gmail.com.
0 comments

ಸಿಂದಗಿ : ದಿ.ಶಿವಾನಂದ ಪಾಟೀಲ ಸೋಮಜಾಳ ಇವರ ನಿಧನದಿಂದ  ಅವರಿಗೆ ನುಡಿ-ನಮನ ಕಾರ್ಯಕ್ರಮ ಜೆಡಿಎಸ್ ಪಕ್ಷ ಹಾಗೂ ಪಾಟೀಲರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೋಳ್ಳಲಾಗಿತ್ತು.  ನಾನು ಕ್ಷೇತ್ರದ ಜನತೆಗೆ ಅಭಿನಂದನಾ ಕಾರ್ಯಾಕ್ರಮಕ್ಕೆ ಆಗಮಿಸುವೆ ಎಂದುಕೊಂಡಿದೆ ಆದರೆ ವೀಧಿ ಆಟ ಶಿವಾನಂದ ಪಾಟೀಲರ ನುಡಿ-ನಮನಕ್ಕೆ  ಆಗಮಿಸುವಂತಾಗಿದ್ದು ನನ್ನಗೆ ಆಘಾತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ನಗರದ ಶಹಾಪುರ ಪೇಟ್ರೊಲ್ ಪಂಪ್ ಪಕ್ಕದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು  ಸಿಂದಗಿಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ್ತೆ ನೇಲೆಕೊಟ್ಟು ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಸಂದೇಶ ಕೊಟ್ಟಿರುವ  ಶ್ರೇಯಸ್ಸು ಪಾಟೀಲರಿಗೆ  ಹಾಗೂ ಅವರ ಸಂಗಡಿಗರಿಗೆ ಸಲ್ಲುತ್ತದೆ.  ಜಿಲ್ಲೆಯಲ್ಲಿ   ಪಂಚರತ್ನ ಯಾತ್ರೆ ನಿಮಿತ್ಯವಾಗಿ  ಸಿಂದಗಿ ನಗರದಲ್ಲಿ ಊಹಿಸಿದಕ್ಕಿಂತ ಹೇಚ್ಚು ಕಾರ್ಯಕ್ರಮ ಯಶಸ್ವಿ ಕಂಡು ಅವರಿಗೆ ನೂರು ಬಾರಿ ಹೇಳಿದ್ದೆ ಗ್ರಾಮ ವಾಸ್ತವ್ಯಮಾಡಿ ಜನರ ನಿಕಟ ಸಂಪರ್ಕದಲ್ಲಿರಿ ನಿಮ್ಮಗೆ ಕ್ಷೇತ್ರದ ಜನತೆ ಕೈ ಬಿಡುವುದಿಲ್ಲವೆಂದು. ಆ ಮಾತಿಗೆ ಜಿಲ್ಲೆಯಿಂದ ಬರುವ ಶಾಸಕರಲ್ಲಿ ಸಿಂದಗಿಯ ಶಾಸಕರು ಒಬ್ಬರು ಇರುತ್ತಾರೆ ನಾನು ನಂಬಿದ ಜನತೆ ನನ್ನ ಕೈ ಬಿಡುವುದಿಲ್ಲ ಎಂದು  ಎನ್ನುತ್ತಿದ್ದರು.

banner

ಇಂದು ನಾವು ನುಡಿ-ನಮನ ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರೆ ಮಾತ್ರ ಸಾಲದು ಸೈನಿಕರಾಗಿದ್ದಾಗ ದೇಶಕ್ಕೆ ಹಾಗೂ ನಿವೃತ್ತಿಯ ಬಳಿಕ  ಸಮಾಜಕ್ಕೆ ಸೇವೆಸಲ್ಲಿಸಲು ಪಾಟೀಲ ಅವರಿಗೆ ಸ್ಪೂರ್ತಿಯಾಗಿ ಬೆನ್ನಿಗೆ ನಿಂತ ನನ್ನ ಸಹೋದರಿ ವಿಶಾಲಾಕ್ಷಿ ಶಿವಾನಂದ ಪಾಟೀಲ ಅವರಿಗೆ  ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ ಅವಳಿಗೆ ರಾಜಕೀಯ ಗೋತ್ತಿಲ್ಲ, ಜನಗಳ ಜೊತೆ ಬೆರತ್ತಿರುವವರಲ್ಲ ಆದರು ಅವಳ ಅಣ್ಣನಾಗಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ  ಕೈ ಜೋಡಿಸಿ ಕೇಳಿಕೊಳ್ಳುತ್ತೆನೆ ಅವಳು ನಿಮ್ಮ ಕುಟುಂಬದ ಮಗಳಾಗಿ , ಅಕ್ಕ, ತಂಗಿಯಾಗಿ ಅವಳನ್ನು ಗೇಲ್ಲಿಸಿ ತರಬೇಕು ನನ್ನ ಸಹೋದರಿಯೊಂದಿಗೆ ನಾನು ಸದಾಕಾಲ ಅವಳ ಕಷ್ಟ-ಸುಖಗಳಲ್ಲಿ ಪಾಲುದಾರನಾಗಿರುತ್ತೇನೆ ಎಂದು ಹೆಚ್.ಡಿ ಕುಮಾರಸ್ವಾಮಿ ದಿ.ಶಿವಾನಂದ ಪಾಟೀಲ ಸೋಮಜಾಳ ಇವರ  ಪತ್ನಿಯನ್ನು ವಿಶಾಲಾಕ್ಷಿ ಪಾಟೀಲ ಇವರನ್ನು  ಸಿಂದಗಿ ಮತ್ತಕ್ಷೇತ್ರದ  ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿದರು.

ದೇವೆಗೌಡರ ಮತ್ತು ಮನಗೂಳಿ ಅವರ  ಸಂಬಂದ ದಿ.ಮನಗೂಳಿ ಅವರ ಮಕ್ಕಳಿಗೆ  ಮುಖ್ಯವಾಗಲಿಲ್ಲ  ಅವರಿಗೆ ಅಧಿಕಾರವೆ ಮುಖ್ಯವಾಯಿತು.  ಸಹೋದರರ  ನಡುವೆ ಭಿನ್ನಾ ಅಭಿಪ್ರಾಯವಿದ್ದಾಗ  ಅವರಿಗೆ ಕರೆದು ಸಲಹೆ ನೀಡಿದೆ ರಾಮ ಲಕ್ಷ್ಮಣರಂತೆ   ಕೆಲಸಮಾಡಿ ನಿಮ್ಮ ತಂದೆಯವರಿಗೆ ಗೇಲ್ಲಿಸಿದ ಹಾಗೆ ನಿಮ್ಮಗೆ ಜನ್ಮ ನೀಡಿದ ತಂದೆಯ ‍ಋಣ ತಿರಿಸಿ ಎಂದು ಹೇಳಿದೆ.  ಆದರೆ ಅವರು ನಮ್ಮ ಅವರ ಸಂಭಂದ  ಲೇಕ್ಕಿಸದೆ  ಜೆಡಿಎಸ್ ಪಕ್ಷ ಬಿಟ್ಟು  ಕಾಂಗ್ರೇಸ್  ಸೇರ್ಪಡೆಯಾದರು.  

-ಹೆಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ

ಜೆಡಿಎಸ್ ಅಭ್ಯರ್ಥಿ ದಿ.ಶಿವಾನಂದ ಪಾಟೀಲ ಅವರ  ಪತ್ನಿ ವಿಶಾಲಕ್ಷಿ ಮಾತನಾಡಿ ನನ್ನ ಗಂಡನಾದ ಶಿವಾನಂದ ಅವರಿಗೆ  ಬಹಳ ಬಾರಿ ಹೇಳುತ್ತಿದೆ ವಿಶ್ರಾಂತಿ ತೆಗೆದುಕೋಳ್ಳಿ ಎಂದು ಅವರ ನನ್ನಗೆ ಎನು ಆಗಲ್ಲ ಬಿಡು ಎನ್ನುತ್ತಿದ್ದರು ನನ್ನ ದುರದೃಷ್ಟ ನಾನು ಮೊದಲೆ ಅವರ ಕಾರ್ಯಕ್ರಮಗಳಲ್ಲಿ ಬಾಗಿಯಾಗುತ್ತಾ ಬಂದಿದ್ದರೆ ಅವರು ಇನ್ನು ಸಂತೋಷವಾಗಿ ಇರುತ್ತಿದ್ದರು ಎನಿಸುತ್ತಿದೆ.  ಅವರ ರಾಜಕೀಯ ವಿಷಯವಾಗಿ ಮನೆಯಲ್ಲಿ ಎಂದಿಗೂ ಹೇಳುತ್ತಿರಲಿಲ್ಲ ಆದರೆ ಇಂದು ನನ್ನಗೆ ಅರ್ಥ ವಾಗುತ್ತಿದೆ ನಮ್ಮ ಯಜಮಾನರು ನೊಂದವರಿಗೆ ಆಸರೆಯಾಗಿ ನಿಂತವರೆಂದು ಹೇಳುತ್ತಲ್ಲೆ ದುಃಖ ಭರಿತವಾಗಿ ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾದ ಜನರಿಗೆ ಕೈಮುಗಿದು ಭಾಷಣ ನಿಲ್ಲಿಸಿದರು. ಶಾಸಕ ಬಂಡೆಪ್ಪ ಕಾಶಂಪುರ, ದೇವಾನಂದ ಚೌವಾಣ, ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ,  ಬಿ.ಡಿ ಪಾಟೀಲ ಮಾಜಿ ಸೈನಿಕರ ಅಧ್ಯಕ್ಷ  ಶ್ರೀಶೈಲ ಯಳಮೇಲಿ ನುಡಿನಮನ ಸಲ್ಲಿಸಿದರು

ರಾಜುಗೌಡ ಪಾಟೀಲ, ಸುನಿತಾ ಚೌವಾಣ, ಮಲ್ಲನಗೌಡ ಪಾಟೀಲ,  ಪ್ರಕಾಶ ಹಿರೇಕುರಬರ, ಮಾಂತೇಶ ಪರಗೊಂಡ, ನಿಂಗರಾಜ ಚಾಂದಕಚಠೆ, ಆರ್.ಕೆ.ಪಾಟೀಲ, ಭಿಮರಾಯ ಬಿರಾದಾರ, ಪುರಸಭೆ ಸದಸ್ಯರಾದ ರಾಜಣ್ಣ ನಾರಾಯಣಕರ, ಶರಣಗೌಡ ಪಾಟೀಲ ಸದಸ್ಯರ ಪ್ರತಿನಿಧಿ ಶರಣಪ್ಪ ಸುಲ್ಪಿ    ಹಾಗೂ ವಿವಿಧ ತಾಲೂಕುಗಳಿಂದ ಬಂದ ಮುಖಂಡರು ವೇದಿಕೆ ಮೇಲಿದ್ದರು.    ಪ್ರಸ್ತಾವಿಕವಾಗಿ ಮಹ್ಮದ ಉಸ್ತಾದ ಮಾತನಾಡಿದರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗರಾಜ ಬಗಲಿ ಸ್ವಾಗತಿಸಿದರು ತಾಲೂಕಾ ಅಧ್ಯಕ್ಷ ದಾನಪ್ಪಗೌಡ ಚನ್ನಗೊಂಡ ಕಾರ್ಯಕ್ರಮ ನಿರುಪಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news