
ಸಿಂದಗಿ : ಈ ಯಾತ್ರೆ ಕಾಂಗ್ರೇಸ್ ಧ್ವನಿ ಅಲ್ಲಾ ಇದು ನಿಮ್ಮ ಧ್ವನಿ ನೀವು ಹೇಳಿದ ಮಾತನ್ನು ನಾವು ಅನುಷ್ಠಾನಕ್ಕೆ ತರುವ ಯಾತ್ರೆ ಇದಾಗಿದೆ ಎಂದು ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ 2013 ರ ಸರಕಾರದಲ್ಲಿ 165 ಭರವಸೆಗಳನ್ನು ನೀಡಲಾಗಿತ್ತು ಅದರಲ್ಲಿ 158 ಭರವಸೆಗಳನ್ನು ಈಡೇರಿಸಿದೇವೆ ಅಷ್ಟೇ ಅಲ್ಲದೆ ಇನ್ನೀತರ 30 ಬೇಡಿಕೆಗಳು ಕಾಂಗ್ರೇಸ್ ಅವಧಿಯಲ್ಲಿ ಈಡೇರಿಸಲಾಗಿದೆ. ಅದರಿಂದಲೇ ನಮ್ಮನ್ನು ನುಡಿದಂತೆ ನಡೆಯುವರು ಎನ್ನುವರು. ಬಿಜೆಪಿ ತನ್ನ .ಪ್ರಣಾಳಿಕೆಯಲ್ಲಿ 600 ಭರವಸೆ ನೀಡಿ ಕೇವಲ 50 ಭರವಸೆ ಪೂರೈಸಿದೆ ನಮ್ಮ ಸರ್ಕಾರ ಮತ್ತು ಬಿಜೆಪಿ ಸರ್ಕಾರದ ಕಾರ್ಯವ್ಯಪ್ತಿಯನ್ನು ಪರಿಶೀಲಿಸಿ ತಾವು ಮತ ಚಲಾಯಿಸಬೇಕಿದೆ.

ಕ್ರೇನ್ ಮುಖಾಂತರ ಬೃಹತ್ತ ಹಾರಹಾಕಿ ಸ್ವಾಗತಿಸಿದ ಕಾರ್ಯಕರ್ತರು.
ನಮ್ಮ ಮೇಲೆ ಯಾವುದೇ ಆರೋಪಗಳಿಲ್ಲ ನಮ್ಮ ಅವಧಿಯಲ್ಲಿ ಮಾಡಲಾದ ಆರೋಪಗಳನ್ನು ಕೇಂದ್ರದಲ್ಲಿ ಬಿಜೆಪಿ ಅಧಿನದಲ್ಲಿರುವ ಸಿ.ಬಿ.ಆಯ್. ಗೆ ಒಪ್ಪಸಿದೆ. ಅವರು ವಿರೋದ ಪಕ್ಷದಲ್ಲಿರುವಾಗ ಮಾಡಿರುವ ಎಲ್ಲ ಆರೋಪಗಳಿಂದ ಮುಕ್ತವಾಗಿ ಸಿ.ಬಿ.ಆಯ್. ಅವರು ಆರೋಪ ಸುಳ್ಳೆಂದು ವರದಿ ನೀಡಿದ್ದಾರೆ. ನಾವು ಮಾಡಿರುವ ಆರೋಪಗಳಲ್ಲಿ ಒಂದೇ ಒಂದು ಸಿ.ಬಿ.ಆಯ್. ತನಿಖೆಗೆ ಒಪ್ಪಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಸವಾಲ್ ಹಾಕಿದರು.
ಪಿ.ಎಸ್.ಆಯ್ ಹಗರಣದಲ್ಲಿ 80 ಲಕ್ಷ ದಿಂದ 1 ಕೋಟಿಯ ವರೆಗೆ ಲಂಚ ಪಡೆಯಲಾಗಿದೆ ಎನ್ನಲಾಗುತ್ತಿದೆ, ತನಿಖೆ ಮಾಡಿಸಿ ಎಂದರೆ ಬೊಮ್ಮಯಿ ಅವರು ಆದಾರ ಕೇಳುತ್ತಿದ್ದಾರೆ. ಎಡಿಜಿಪಿ ಹಂತದ ಅಧಿಕಾರಿ ಜೈಲಿಗೆ ಹೋಗಿರುವುದು ಯಾವ ಆದಾರದ ಮೇಲೆ ಎಂದು ಪ್ರಶ್ನೀಸಿದರು. ಅಷ್ಠೇಅಲ್ಲದೆ ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಕುರಿತು ಕಣ್ಣೋರಿಸುವ ತನಿಖೆ ಮಾಡಿ ಮೂರು ತಿಂಗಳಲ್ಲಿ ಕ್ಲೀನ್ ಚೀಟ್ ನೀಡಿದ್ದಾರೆ ಎಂದರು. ಈ ಸರ್ಕಾರದಲ್ಲಿ ಪ್ರೋಜೆಕ್ಟ ಅಪ್ರುವಲಗೆ 10 ಪರ್ಸೆಂಟ್, ಶಾಸಕನಿಗೆ 10 ಪರ್ಸೆಂಟ್, ಎನ್.ಓ.ಸಿ ನೀಡಲು 10 ಪರ್ಸೆಂಟ್, ಹಾಗೂ ಬಿಲ್ ಪಾಸ್ ಮಾಡಲು 10 ಪರ್ಸೆಂಟ್, ಒಟ್ಟಾರೆ 40 ಪರ್ಸೆಂಟ್ ಸರ್ಕಾರ ಇದ್ದಾಗಿದೆ ಅದಕ್ಕಾಗಿಯೆ ಇದನ್ನು ಅಲ್ಲಿಬಾಬಾ- 40 ಚೋರ ಸರ್ಕಾರ ೆಂದು ನಾನು ಕರೆಯುತ್ತೇನೆ ಎಂದು ಬಿಜೆಪಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ ಕಾಂಗ್ರೇಸ್ ಗೆಲ್ಲಿಸುವಂತೆ ಕೈ ಮುಗಿದು ಮನವಿ ಮಾಡಿದರು.
ಕಾರ್ಯಕ್ರಮ ಕುರಿತು ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ ಮಾತನಾಡಿ ಬಿಜೆಪಿ ಪಕ್ಷ ಜನಸಾಮಾನ್ಯರಿಗೆ ಬದುಕು ಕಟ್ಟಿಕೋಳ್ಳುವ ಕೆಲಸ ಮಾಡಿಲ್ಲ, ಅವರು ಜನರ ಭಾವನೆ ಕದಡುವ ಕೆಲಸ ಮಾಡುತ್ತಿದ್ದಾರೆ. ಮಾತು ಪ್ರಾರಂಭಿಸಿದರೆ ಕಾಂಗ್ರೇಸ್ 70 ವರ್ಷಗಳಲ್ಲಿ ಎನ್ನು ಮಾಡಿದೆ ಎಂದು ಪ್ರಶ್ನೆಮಾಡುವ ಬಿಜೆಪಿಗರು ಪ್ರಥಮಿಕ ಆರೋಗ್ಯ ಕೇಂದ್ರ , ಪ್ರಾಥಮಿಕ ಶಾಲೆಗಳಿಂದ ಇಂದು ಇರುವ ಎಚ್.ಎ.ಎಲ್ ನಂತಹ ದೊಡ್ಡ ದೊಡ್ಡ ಕಂಪನಿಗಳು ನಮ್ಮಿಂದಲೆ ಆಗಿರುವುದು ಬಿಜೆಪಿಗರು ಅದನ್ನು ಖಾಸಗಿಕರಣ ಮಾಡುವುದು ಬಿಟ್ಟರೆ ಎನ್ನನು ಮಾಡಿಲ್ಲ. ಬಿಜೆಪಿ, ಆರ್.ಎಸ್.ಎಸ್. ವಿಶ್ವ ಹಿಂದೂ ಪರಿಷತ್ತ್ ಬ್ರಿಟಿಷರ್ ಏಜೆಂಟರಾಗಿದ್ದವರು ಕಾಂಗ್ರೇಸ್ ನಿಂದ ಸ್ವಾತಂತ್ರ್ಯ ಸಿಕ್ಕಿದೆ ಎಂದರು.
ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ ಬಿಜೆಪಿ ಯವರು ಸುಂಸ್ಕೃತವಾದ ಆಡಳಿತ ನಡೆಸಲ್ಲಿ ಕಾಂಗ್ರೇಸ್ ಮುಕ್ತ ಮಾಡಲು ಹೊರಟಿರುವ ಮೋದಿಯವರು ಶಾಸಕರ ಖರೀದಿ ನಿಲ್ಲಿಸಿ ಪ್ರಾಮಾಣಿಕ ಸರ್ಕಾರ ಮಾಡಲು ಪ್ರಯತ್ನ ಪಡಲಿ. ಮಂತ್ರಿ ಮಂಡಲ ವಿಸ್ತರಣೆ ಮಾಡುವ ಭಾಗ್ಯ ಬೊಮ್ಮಯಿಗೆ ಇಲ್ಲ. ಬಿಜೆಪಿ ಬಂದಾಗಲೆಲ್ಲ ನಮ್ಮ ಜಿಲ್ಲೆ ಮಂತ್ರಿಸ್ಥಾನ ವಂಚಿಸಲಾಗಿದ ಇಂದು ನಮ್ಮಗೆ ಉಸ್ತುವಾರಿ ಸಚಿವರು ಇಲ್ಲದಂತಾಗಿದೆ ಇಂತಹ ದೌರ್ಬಾಗ್ಯದಿಂದ ಹೊರಬರಬೇಕಾದರೆ ನಿಶ್ಚಲವಾದ ಬಹುಮತ ನೀಡಿ ಕಾಂಗ್ರೇಸ್ ಪಕ್ಷವನ್ನು ಗೇಲಿಸಿ ಎಂದು ಮನವಿ ಮಾಡಿ , ಕಾಂಗ್ರೇಸ್ ನವರಿಂದಲೇ ಕಾಂಗ್ರೇಸ್ ಸೋಲ್ಲಾಗಬಾರದೆಂದು ಒಳಸಂಚು ನಡೆಸುವವರಿಗೆ ಎಚ್ಚರಿಕೆ ಕೋಟ್ಟಂತೆ ಮಾತನಾಡಿದರು.
ಮಾಜಿ ಸಚಿವ ಹೆಚ್.ಸಿ.ಮಹಾದೇವಪ್ಪ ಮಾತನಾಡಿ ಸಂವಿಧಾನದಿಂದ ನಡೆಯಬೇಕಿದ್ದ ಸರ್ಕಾರ ಿಂದು ಆರ್.ಎಸ್.ಎಸ್. ನಿಂದ ನಡೆಯುತ್ತಿದೆ, ಪಠ್ಯಪುಸ್ತಕಗಳಲ್ಲಿ ಕೋಮುವಾದದ ಅಧ್ಯಯನ ಸೇರಿಸಲಾಗುತ್ತಿದೆ, ಪ್ರಜೆಗಳು ಸಶಕ್ತವಾದ ಜೀವನ ನಡೆಸಲು ಆಕಾಶದತ್ತ ಮುಖಮಾಡಿ ನೋಡುವ ಪರಿಸ್ಥಿತಿ ಬಂದೊದಗಿದೆ ಎಂದರು. ಪ್ರಹ್ಲಾದ ಜೋಶಿ ಅವರು ಇಂದಿನ ಕೇಂದ್ರ ಗೃಹ ಸಚಿವರಾದ ಅಮೀತ್ ಶಾ ಅವರನ್ನು ಸರ್ಧಾರ ವಲ್ಲಭಬಾಯಿ ಪಟೇಲ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ, ಪಟೇಲರು ಕೇಂದ್ರ ಗೃಹ ಸಚಿವರಾಗಿದ್ದವರು ಇವರು ಅದೇ ಇಲಾಖೆಯ ಸಚಿವರಾಗಿದ್ದಾರೆ. ಅಂದು ಪಟೇಲರು ಆರ್.ಎಸ್.ಎಸ್. ವಿರೋದಿಸಿದ್ದರು ಹಾಗಾದರೆ ಅಮಿತ್ ಶಾ ಅವರು ಆರ್.ಎಸ್.ಎಸ್. ವಿರೋದಿಸುವರೆ ಎಂದು ಪ್ರಶ್ನೆ ಮಾಡಿದರು. ಪ್ರಕಾಶ ರಾಠೋಡ, ಎಸ್.ಎಮ್.ಪಾಟೀಲ ಗಣಿಹಾರ, ಶರಣಪ್ಪ ಸುಣಗಾರ, ಮಾತನಾಡಿದರು.
ಜಿಲ್ಲಾ ಅಧ್ಯಕ್ಷ ರಾಜು ಆಲಗೂರ, ಮಾಜಿ ಶಾಸಕ ಅಶೋಕ ಶಾಬಾದಿ, ಕಾಂಗ್ರೇಸ್ ಟಿಕೇಟ್ ಆಕಾಂಕ್ಷಿಗಳು ಹಾಗೂ ಕಾರ್ಯಕರ್ತರು ವೇದಿಕೆ ಮೇಲಿದ್ದರು.
