Home Uncategorized ಆತ್ಮವಿಶ್ವಾಸದಿಂದ ಪುಟಿದೇಳಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ : ಸುನಿತಾ ಕಪ್ಪೆನ್ನವರ

ಆತ್ಮವಿಶ್ವಾಸದಿಂದ ಪುಟಿದೇಳಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ : ಸುನಿತಾ ಕಪ್ಪೆನ್ನವರ

by vegadhut@gmail.com.
0 comments

 

ಸಿಂದಗಿ:  ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಪದವಿಯ ಹಂತ ಅತ್ಯಂತ ಪ್ರಮುಖವಾದದ್ದು, ಕಾಲೇಜುಗಳು ವೃತ್ತಿಗಾಗಿ ಮಾತ್ರ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸದೇ ಅವರಲ್ಲಿ ಒಳ್ಳೆಯ ಪ್ರವೃತ್ತಿಗಳನ್ನು ಬೆಳೆಸುವ ಕೇಂದ್ರಗಳಾಗಬೇಕು ಎಂದು ಜೇವರಗಿಯ ಶಿಶು ಅಭಿವೃದ್ದಿ ಯೋಜನೆಯ ಮೇಲ್ವಿಚಾರಕಿ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಸುನಿತಾ ಕಪ್ಪೆನ್ನವರ ಹೇಳಿದರು.
ನಗರದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭದಲ್ಲಿ ಮುಖ್ಯಥಿತಿಗಳಾಗಿ ಮೇಲ್ವಿಚಾರಕಿ ಸುನಿತಾ ಕಪ್ಪೆನ್ನವರ ಮಾತನಾಡಿ, ನಾವೆಲ್ಲರೂ ಕಾಲ ಬದಲಾಗಿದೆ ಎನ್ನುತ್ತೇವೆ ಆದರೆ ಬದಲಾಗಿರುವುದು ಕಾಲವಲ್ಲ ನಮ್ಮ ಚಿಂತನೆ, ಪ್ರವೃತ್ತಿ ಮತ್ತು ಮಾನಸಿಕತೆ. ಸಂಕಷ್ಟದ ಸಂದರ್ಭದಲ್ಲಿ ಆತ್ಮವಿಶ್ವಾಸದಿಂದ ಪುಟಿದೇಳಲು ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ಅಗತ್ಯವಿದೆ. ಕಾಲೇಜುಗಳೂ ಸಾಧಕರ ಛಾವಣಿಗಳಾಗಬೇಕು. ಕೇವಲ ೧೧ ವರ್ಷದ ಅವಧಿಯಲ್ಲಿ ಈ ಮಹಾವಿದ್ಯಾಲಯವು ಅಗಾಧ ಸಾಧನೆ ಮಾಡುವ ಮೂಲಕ, ನುರಿತ ಉಪನ್ಯಾಸಕರನ್ನು ಹೊಂದಿರುವ ಕಾಲೇಜು ಮಕ್ಕಳ ಜ್ಞಾನದಾಹ ನೀಗಿಸುತ್ತಿರುವುದು ಶ್ಲಾಘನೀಯ ಎಂದರು.

ಅತಿಥಿಗಳಾದ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ ಮಾತನಾಡಿ ಪರಿಶ್ರಮ, ತಾಳ್ಮೆ, ಶಿಸ್ತು ಮತ್ತು ಪಾಲಕರ ಪ್ರೋತ್ಸಾಹ ಇದ್ದರೆ ಏನು ಬೆಕಾದರೂ ಸಾಧಿಸಬಹುದು. ಈಗಿನ ವಿದ್ಯಾರ್ಥಿಗಳು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕು. ಪ್ರತಿ ಮಗುವಿನಲ್ಲಿಯೂ ವಿಭಿನ್ನ ಪ್ರತಿಭೆಯಿರುತ್ತದೆ. ಪ್ರತಿಭೆಯನ್ನು ಗುರುತಿಸಿ ಪೋಷಿಸುವುದು ಅಗತ್ಯ. ಶೈಕ್ಷಣಿವಾಗಿ ಎತ್ತರಕ್ಕೆ ಬೆಳೆದರೂ ಕೂಡ, ಸಂಸ್ಕೃತಿ, ಪರಂಪರೆ ಮರೆಯಬಾರದು. ಅಕ್ಷರ ಜ್ಞಾನದ ಜತೆಗೆ ನೀತಿಯುತ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳು ಮುಖ್ಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶ್ರೀ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ಪ್ರಾಚಾರ್ಯ ಎಸ್.ಎಮ್.ಪೂಜಾರಿ ಅಧ್ಯಕ್ಷೀಯ ಮಾತಗಳನ್ನಾಡಿದರು. ಕಾರ್ಯಧ್ಯಕ್ಷ ಮಾಹಾಂತೇಶ ನೂಲಾನವರ ವಾರ್ಷಿಕ ವರದಿ ವಾಚಿಸಿದರು. ಇದೇ ಸಮಯ ವಿಶ್ವವಿದ್ಯಾಲಯಕ್ಕೆ ೫ ಜನ ರ‍್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

banner

ಈ ವೇಳೆ ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ, ಬಿ.ಎಡ್.ಕಾಲೆಜಿನ ಪ್ರಾಚಾರ್ಯ ಡಾ. ಶರನಬಸವ ಜೋಗುರ, ಮಹಿಳಾ ಪುಪೂ ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಹೈಯಾಳಕರ, ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿಗಳಾದ ಉಮೇಶ ಪೂಜೇರಿ, ಗದಿಗೆಯ್ಯ ನಂದಿಮಠ, ಅನಿಲಕುಮಾರ ರಜಪೂತ, ಗಿರೀಶ ಕುಲಕರ್ಣಿ, ಭಾಗ್ಯಶ್ರೀ ನಂದಿಮಠ, ಪ್ರಭಾವತಿ ಮಾಲೀಪಾಟೀಲ, ಶೃತಿ ಹೂಗಾರ, ಮುರ್ತುಬಿಬೇಗಂ ಬಿರಾದಾರ, ಲಕ್ಷಿö್ಮÃ ಕೆಸರಗೊಪ್ಪ, ಪ್ರಿಯಾಂಕ ಬ್ಯಾಕೋಡ, ಮಂಗಳಾ ಈಳಗೇರ, ಡಿ.ಎಮ್.ಪಾಟೀಲ್, ಮಮತಾ ಹರನಾಳ, ಶಿವಶಂಕರ ಕುಂಬಾರ ಮತ್ತು ಮುದ್ದು ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿಲಗಂಗಾ ದೇವರಮನಿ ಹಾಗೂ ಮಹಾನಂದ ಹೊಸಮನಿ ನಿರೂಪಿಸಿದರು. ಉಪನ್ಯಾಸಕಿ ಸರಸ್ವತಿ ಪಟೇದ ಸ್ವಾಗತಿಸಿದರು. ವಿದ್ಯಾ ರುಕುಂಪುರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ನಜ್ಮಾ ಮಣೂರ ವಂದಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

u00a92022u00a0Soledad.u00a0All Right Reserved. Designed and Developed byu00a0Penci Design.

Latest news