ಸಿಂದಗಿ : ಪಟ್ಟಣದ ತಾಲೂಕಾ ಆಡಳಿತ ಸೌಧದ ಕಂಪೌಂಡಗೆ ಹತ್ತಿರುವ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡರಾತ್ರಿ ನಡೆದಿದೆ. ಮೃತ್ತ ದುರ್ದೈವಿ ಬಸವರಾಜ ನಾಯಕಲ್ (53) ಶಿಕ್ಷಕನಾಗಿದ್ದು ಸಾಸಾಬಾಳ ಪ್ರಾಥಮಿಕ ಶಾಲೆಗೆ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಮೂಲತಃ ದೇ.ಹೀಪ್ಪರಗಿ ತಾಲೂಕಿನ ಕೋರವಾರ ಗ್ರಾಮದವರು ನೌಕರಿ ಇರುವುದರಿಂದ ಹಲವು ವರ್ಷಗಳಿಂದ ಸಿಂದಗಿಯಲ್ಲಿ ಮನೆ ಮಾಡಿದ್ದರು.
ಡೇತ್ ನೋಟ್ ನಲ್ಲಿ ಎನ್ನಿದೆ ?
ಶಿಕ್ಷಕರಾಗಿದ್ದ ನಾಯಕಲ್ ಅವರು ಕೆಲ ವರ್ಷಗಳಿಂದ ಮುಖ್ಯ ಗುರುಗಳಾಗಿ ಚಾರ್ಜ್ ತಗೆದುಕೊಂಡಿದ್ದರು. ಆಗ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ಎನ್. ಪಾಟೀಲ ಬರೀ ಒಂದು ಶಿಕ್ಷಕರ ಹಾಜರಿ ಮತ್ತು ಮಕ್ಕಳ ಹಾಜರಿ ಪುಸ್ತಕಗಳು ಮಾತ್ರ ನಾನು ಬೇಡ ಎಂದರೂ ನಾನು ಇಲ್ಲಯೆ ಸಿ.ಆರ್.ಪಿ ಯಾಗಿರುತ್ತೆನೆ ಎಲ್ಲವನ್ನು ದಿನನಿತ್ಯ ಪರಿಶೀಲನೆಗೆ ಬಂದು ಸರಿಪಡಿಸಿ ಕೊಡುವುದಾಗಿ ಹೇಳಿ ಹೋದವರು ಇಲ್ಲಿಯವರೆಗೆ ಸರಿಪಡಿಸಿಲ್ಲ ಎಸ್.ಎಲ್. ಬಜಂತ್ರಿ ಇಂದ ಸಂಪೂರ್ಣ ಚಾರ್ಜ ಮುಟ್ಟಿರುತ್ತದೆ ಎಂದು ತೆಗೆದುಕೊಂಡು ಬಿಟ್ಟಿರುತ್ತಾನೆ.
ಆದರೆ ಹಿಂದಿನ ಮುಖ್ಯಗುರುಗಳಾದ ಬಜಂತ್ರಿ ಅವರು 7 ವರ್ಷಗಳಿಂದ 1ನಂಬರ್ ರಿಜಿಸ್ಟರ್ ಬರೆದಿರಲಿಲ್ಲ ನಾನು ಅವರಿಗೆ ಬೆನ್ನುಹತ್ತಿ ಊರಿನ ಹಿರಿಯರಿಗೆ, ಮುಖಂಡರಿಗೆ ಹೇಳಿ ಬರೆಸಿದರು ಇನ್ನೂ ಮೂರು ವರ್ಷದ ರಿಜಿಸ್ಟರ್ ಬರೆಯಬೇಕಾಗಿದೆ. ಇಂತಹವರಿಂದ ನನ್ನಗೆ ದಿನ ನಿತ್ಯ ನಿದ್ದೆಯೇ ಇಲ್ಲವೆಂದು ಅಳಲು ತೋಡಿಕೊಂಡಿದ್ದಾರೆ.
ಈ ವಿಷಯದ ಕುರಿತು ಬಿ.ಇ.ಓ ಅವರಿಗೂ ಮೌಖಿಕವಾಗಿ ತಿಳಿಸಿದರು ಅವರು ನನ್ನ ಮೇಲೆ ಬ್ಲೇಮ್ ಮಾಡುತ್ತಾರೆ ನನ್ನಗೆ ಟಾರ್ಚರ್ ನೋಟಿಸ್ ಮೇಲಿಂದ ಮೇಲೆ ಕೊಡುತ್ತಾರೆಅದಕ್ಕೆ ಉತ್ತರ ಕೋಟ್ಟು ಸಾಕಾಗಿ ಹೋಗಿದೆ. ಇನ್ನು ಊರಿನವನೋಬ್ಬನಾದ ಸಂಗಮೇಶ ಚಿಂಚೋಳಿ ನನ್ನ ಮೇಲೆ ಅಲಗೇಶನ್ ಮಾಡಿ ಹಣ ತೆಗೆದುಕೊಂಡಿದ್ದಾನೆ ಹಾಗೆ ಸಿ.ಆರ್.ಪಿ ಯು ತೆಗೆದುಕೊಂಡಿದ್ದಾನೆ ಎಂದು ಡೇತ್ ನೋಟ್ ನಲ್ಲಿ ಬರೆದಿದ್ದಾನೆ. ಶಾಲೆಗೆ ಸಂಭಂಧಿಸಿದ ಕೆಲವು ದಾಖಲಾತಿಗಳು ಶಾಲೆಯ ಪೈಲ್ ನಲ್ಲಿ ಇಟ್ಟಿರುವ ಬಗ್ಗೆ ಮಾಹಿತಿ ಬರೆದಿದ್ದಾರೆ. ಕುಟುಂಬದ ಸದಸ್ಯರಿಗೆ ನಾನು ಮೋಸ ಮಾಡಿದೇನೆ ನನ್ನ ಶಾಲಾ ವಿಚಾರವಾಗಿ ಈ ಕ್ರಮ ಯೆಗೆದುಕೋಳ್ಳುತ್ತಿದ್ದು ನನ್ನ ಮನೆಯವರ ಸಮಸ್ಯೆ ಇರುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ನಾಲ್ವರನ್ನು ಅಮಾನತು ಮಾಡಿ ಆದೇಶ
ಸುದ್ದಿ ತಿಳಿದು ಬಂದ ಉಪ ನಿರ್ಧೇಶಕರು ಶಿಕ್ಷಣ ಇಲಾಖೆ ವಿಜಯಪುರ ರವರಾದ ಉಮೇಶ ಎಸ್ ಶಿರಹಟ್ಟಿಮಠ ಜಿ.ಎನ್. ಪಾಟೀಲ, ಎಸ್.ಎಲ್.ಬಜಂತ್ರಿ, ಹರನಾಳ ( ಬಿ.ಇ.ಓ ) ಮತ್ತು ಬಿ.ಎಮ್.ತಳವಾರ ಇವರನ್ನು ಕೂಡಲೆ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದರು ಅವರ ವಿರುದ್ಧ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದ್ದಾರೆ ಎಂದರು.
ಶಿಕ್ಷಕನ ಪತ್ನಿ ಮಾಹದೇವಿ ನಾಯಕಲ್ ಇವರಿಂದ ದೂರು ದಾಖಲೆ
ಶಿಕ್ಷಕನ ಡೇತ್ ನೋಟ್ ಹಿನ್ನಲ್ಲೆ ಜಿ.ಎನ್. ಪಾಟೀಲ, ಎಸ್.ಎಲ್.ಬಜಂತ್ರಿ, ಹರನಾಳ ( ಬಿ.ಇ.ಓ ) ಮತ್ತು ಬಿ.ಎಮ್.ತಳವಾರ, ಸಂಗಮೇಶ ಚಿಂಚೋಳ್ಳಿ ಒಟ್ಟು ಐದು ಜನರ ವಿರುದ್ದ ಪ್ರಕರಣ ದಾಖಲಾಗಿದೆ . ಸಿಂದಗಿ ಪೊಲೀಸರು ಆರೊಪಿಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ . ಸ್ಥಳಕ್ಕೆ ಅಗಮಿಸಿದ ಡಿ.ವಾಯ್.ಎಸ್.ಪಿ ಚಂದ್ರಕಾಂತ ನಂದರಡ್ಡಿ ಒಂದು ದಿನದ ಕಾಲಾ ಅವಕಾಶ ಕೇಳಿ ಕುಟುಂಬಸ್ಥರ ಮನವೋಲಿಕೆಯ ಪ್ರಯತ್ನ ವಿಫಲವಾಗಿದೆ. ತಾಲೂಕಾ ದಂಡಾಧಿಕಾರಿಗಳ ಕಛೇರಿ ಮುಂಬಾಗದಲ್ಲಿ ಹೋರಾಟಮಾಡಲು ಶವಯಾತ್ರೆ ಮಾಡಿಕೊಂಡು ಭ್ರಷ್ಟ ಅಧಿಕಾರಿಗಳ ವಿರುದ್ದ ಘೋಷಣೆಕೂಗುತ್ತಾ ಸಾಗಿದರು. ದಂಡಾಧಿಕಾರಿಗಳ ಕಛೇರಿ ಮುಂಬಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು ಅವರನ್ನು ಬಂದಿಸುವವರೆಗೆ ನಾವು ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಶವವಿಟ್ಟು ಧರಣಿ ನಡೆಸಿದ್ದಾರೆ.
