ಯಾರೂ ಕೂಡಾ ಸ್ವತಂತ್ರ ಹೋರಾಟಗಾರರ ಬಗ್ಗೆ ಅವಮಾನಕರವಾಗಿ ಮಾತನಾಡಬಾರದು. ಇವತ್ತು ಸಾವರ್ಕರ ಬಗ್ಗೆ ಮಾತಾಡ್ತಾರೆ ನಾಳೆ ಭಗತ ಸಿಂಗ, ರಾಜಗುರು ಮುಂತಾದವರ ಬಗ್ಗೆಯೂ ಮಾತನಾಡುತ್ತಾರೆ. ಅಂತಹವರಿಗೆ ತಕ್ಕ ಪಾಠ ಯುವಕರು ಕಲಿಸಬೇಕು. ಕಾಂಗ್ರೇಸನವರು ಸಾವರ್ಕರ ಕುರಿತಂತೆ ಹಬ್ಬಿಸಿದ ಅಪಪ್ರಚಾರದಿಂದ ಮತ್ತೊಮ್ಮೆ ಸಾವರ್ಕರ ಮನೆ ಮನೆಗೆ ತಲುಪಲಿದ್ದಾರೆ. ಈ ಬಾರಿ ಗಣೇಶ ಉತ್ಸವ ಸಾವರ್ಕರ ಉತ್ಸವ ಆಗಲಿದೆ. ಪ್ರತಿ ಗಣೇಶ ಪೆಂಡಾಲಗಳಲ್ಲಿ ಈ ಸಲ ಸಾವರ್ಕರ ರಾರಾಜಿಸಲಿದ್ದಾರೆ ಎಂದು ಯುವಾ ಬ್ರಿಗೇಡ್ ಸಂಸ್ಥಾಪಕರು ಆದ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ತಿಳಿಸಿದರು.
ಕಳೆದ ಭಾನುವಾರ ವಿಜಯಪೂರ ಹಳಕಟ್ಟಿ ಸಭಾ ಭವನದಲ್ಲಿ ಜರುಗಿದ ನಾನೇ ಸಾವರ್ಕರ ಎಂಬ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆಯವರು ಭಾಗವಹಿಸಿ ನಗರದ ಗಣೇಶ ಉತ್ಸವ ಸಮೀತಿಯವರ ಜೊತೆ ಕಾರ್ಯಗಾರ ಕಾರ್ಯಕ್ರಮವನ್ನು ಮಾಡಿದರು. ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಯ ಮುಖಂಡರು ಶ್ರೀ ನೀಲಕಂಠ ಕಂದಗಲ್ಲ, ರಾಘು ಅಣ್ಣಿಗೇರಿ, ಗುರು ಗಚ್ಚಿನಮಠ, ರಾಜು ಪಾಟೀಲ, ಸಂತೋಷ ಬಂಗಾರಿ ಹಾಗೂ ಇತರೆ ಮುಖಂಡರು ಭಾಗವಹಿಸಿದ್ದರು.
ಅವರು ಮಾತನಾಡಿದ ವಿಡಿಯೋ ಒಂದು ಇಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
