ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬ್ಯಾಕೊಡ ಗ್ರಾಮದಲ್ಲಿ
ಪತಿಯಿಂದ ಪತ್ನಿಯ ಬರ್ಬರ ಹತ್ಯೆಯ ಶಂಕೆ.
ಕುಡಿದ ಅಮಲಿನಲಿ ಬಂದು ಯಾವುದೇ ಕಾರಣವಿಲ್ಲದೆ, ತೋಟದ ಮನೆಯಲ್ಲಿ ಸುಮ್ಮನೆ ಕೂತಿದ್ದ ಪತ್ನಿಯನ್ನು ಕೊಡ್ಲಿ ಇಂದ ಹೊಡೆದು ಬರ್ಬರ ಹತ್ಯೆ ಮಾಡಲಾಗಿದೆ. ಕೊಲೆ ಆದ ಮಹಿಳೆ ಮಾದೇವಿ ಪರಶುರಾಮ ಚೋರಗಸ್ತಿ ಎಂದು ಗುರುತಿಸಲಾಗಿದೆ. ವಯಸ್ಸು38 ಬ್ಯಾಕೋಡ ಗ್ರಾಮದ ನಿವಾಸಿಯಾಗಿದ್ದು ಗಂಡನಿಂದಲೆ ಕೊಲೆಯಾಗಿದೆ ಎಂದು ಅನುಮಾನ ವ್ಯಕ್ತವಾದ ಹಿನ್ನಲೆಯಲ್ಲಿ ಮೃತ್ತ ಮಾದೇವಿ ಪತಿಯಾದ ಪರಶುರಾಮನನ್ನು ಪ್ರಾಥಮಿಕ ತನಿಖೆಗೆ ಸಿಂದಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಸಿಂದಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆಯಲ್ಲಿ ತೊಡಗಿದ್ದಾರೆ.